ಮಹಿಳೆಯರಿಗೆ ಸಿಗುತ್ತೆ 3ಲಕ್ಷ ರೂ. .!! ಉದ್ಯೋಗಿನಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.!!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಸಂಪೂರ್ಣ ವಿವರವಾಗಿ ಉದ್ಯೋಗಿನಿ ಯೋಜನೆ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

 ನೋಡಿ ಒಂದು ವೇಳೆ ನೀವೇನಾದರೂ ಮಹಿಳೆಯರಾಗಿದ್ದಾರೆ ಅಥವಾ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳೆಂದರೆ ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಹೀಗಾಗಿ ಯಾರು ಕೂಡ ಇಂದಿನ ಈ ಒಂದು ಲೇಖನವನ್ನ ಅರ್ಥ ಬರೆದ ಓದಬೇಡಿ ಯಾವ ಕಾರಣಕ್ಕೆ 3 ಲಕ್ಷ ಸರ್ಕಾರದವರು ನಮಗೆ ನೀಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಇರುತ್ತೆ ಹೀಗಾಗಿ ನಿಮಗಂತಲೇ ಇದೆ ಈ ಕೆಳಗಿನ ಲೇಖನ. 

“ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು” ಎಂಬ ಮಾತು ಕೇವಲ ಘೋಷಣೆಯಾಗದೇ, ಕಾರ್ಯರೂಪಕ್ಕೆ ಬರಬೇಕಾದರೆ ಆರ್ಥಿಕ ಬೆಂಬಲ ಬಹಳ ಅತ್ಯಗತ್ಯವಾಗಿರುತ್ತೆ. ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಮಹಿಳೆಯರ ಸ್ವಾವಲಂಬನೆ, ಉದ್ಯಮಶೀಲತೆ ಮತ್ತು ಆರ್ಥಿಕ ಭದ್ರತೆಯನ್ನು ಬಲಪಡಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಯೋಜನೆ ಎಂದರೆ ಉದ್ಯೋಗಿನಿ ಯೋಜನೆ (Udyogini Scheme).

ಈ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಲು ₹3 ಲಕ್ಷದವರೆಗೆ ಸಾಲ ಮತ್ತು ಅದರ ಮೇಲೆ ಸರ್ಕಾರದ ಸಬ್ಸಿಡಿ (ಸಹಾಯಧನ) ಪಡೆಯುವ ಅವಕಾಶ ಹೊಂದಿದ್ದರೆ. ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರಿಂದ ಹಿಡಿದು ನಗರ ಭಾಗದಲ್ಲಿನ ಸಣ್ಣ ಉದ್ಯಮ ಕನಸು ಕಾಣುವ ಮಹಿಳೆಯರವರೆಗೆ, ಎಲ್ಲರಿಗೂ ಈ ಯೋಜನೆ ಹೊಸ ದಾರಿ ದೀಪದಂತಿದೆ ಏಕೆಂದರೆ ನಿಮಗೆ ಬಂಡವಾಳ ಸಿಗುತ್ತೆ ಮೂರು ಲಕ್ಷ ರೂಪಾಯಿ.

ಈ ಲೇಖನದಲ್ಲಿ ಉದ್ಯೋಗಿನಿ ಯೋಜನೆಯ ಸಂಪೂರ್ಣ ವಿವರಗಳನ್ನು ಸರಳವಾಗಿ, ಸ್ಪಷ್ಟವಾಗಿ ತಿಳಿದುಕೊಳ್ಳೋಣ –
ಯೋಜನೆಯ ಉದ್ದೇಶದಿಂದ ಹಿಡಿದು, ಸಾಲ–ಸಬ್ಸಿಡಿ ವಿವರ, ಅರ್ಹತೆ, ಬಿಸಿನೆಸ್ ಆಯ್ಕೆಗಳು, ಅರ್ಜಿ ಪ್ರಕ್ರಿಯೆ, ಬೇಕಾಗುವ ದಾಖಲೆಗಳು ಮತ್ತು ಸಾಮಾನ್ಯ ಪ್ರಶ್ನೆಗಳ ಕುರಿತು ಮಾಹಿತಿ ಇರುತ್ತೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದ್ಬೇಡಿ.

ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ನಾವು ಯಾವುದೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವ ಆಗುತ್ತೆ ಉದಾಹರಣೆಗೆ ನಾವು ತಿಳಿಸುವುದಾದರೆ ಮೊದಲು ಆ ಯೋಜನೆ ಎಂದರೇನು ಅದನ್ನ ತಿಳಿದುಕೊಳ್ಳಬೇಕು ಹೀಗೆ ಬನ್ನಿ ಯೋಜನೆ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಿ.

ಉದ್ಯೋಗಿನಿ ಯೋಜನೆ ಎಂದರೇನು?

Table of Contents

ಉದ್ಯೋಗಿನಿ ಯೋಜನೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (Karnataka State Women Development Corporation – KSWDC) ಮೂಲಕ ಜಾರಿಗೊಂಡಿರುವ ಮಹಿಳಾ ಸ್ವಾವಲಂಬನಾ ಯೋಜನೆ. ಈ ಯೋಜನೆಯ ಮುಖ್ಯ ಉದ್ದೇಶ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಒದಗಿಸಿ, ಅದರ ಒಂದು ಭಾಗವನ್ನು ಸರ್ಕಾರವೇ ಸಬ್ಸಿಡಿಯಾಗಿ ಒದಗಿಸುತ್ತೆ.

ಸಾಮಾನ್ಯವಾಗಿ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಲು ಬಂಡವಾಳದ ಕೊರತೆಯಿಂದ ಹಿಂದೆ ಸರಿಯುತ್ತಾರೆ. ಬ್ಯಾಂಕ್ ಸಾಲ ಎಂದರೆ ಗ್ಯಾರಂಟಿ, ಹೆಚ್ಚಿನ ಬಡ್ಡಿ, ಜಟಿಲ ಪ್ರಕ್ರಿಯೆ ಎಂಬ ಭಯ ಇರುತ್ತದೆ. ಈ ಎಲ್ಲ ಅಡೆತಡೆಗಳನ್ನು ನಿವಾರಿಸಲು ಉದ್ಯೋಗಿನಿ ಯೋಜನೆ ಒಂದು ಬಲವಾದ ಪರಿಹಾರ ಅಂತ ಹೇಳಬಹುದು.

ಉದ್ಯೋಗಿನಿ ಯೋಜನೆಯ ಮುಖ್ಯ ಉದ್ದೇಶಗಳು:

ಉದ್ಯೋಗಿನಿ ಯೋಜನೆ ಕೇವಲ ಸಾಲ ಯೋಜನೆ ಅಲ್ಲ. ಇದರ ಹಿಂದೆ ಸರ್ಕಾರದ ದೀರ್ಘಕಾಲೀನ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳಿವೆ ಎಲ್ಲ ಉದ್ದೇಶಗಳು ಈ ಕೆಳಗಿನಂತಿವೆ ಗಮನಿಸಿ.

  • ಮಹಿಳೆಯರನ್ನು ಸ್ವಂತ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿಸುವುದು
  • ಗ್ರಾಮೀಣ ಹಾಗೂ ನಗರ ಬಡ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು
  • ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವುದು
  • ಕುಟುಂಬದ ಆದಾಯವನ್ನು ಹೆಚ್ಚಿಸಿ ಬಡತನವನ್ನು ಕಡಿಮೆ ಮಾಡುವುದು
  • ಮಹಿಳೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಕಲ್ಪಿಸುವುದು

ಅರ್ಜಿ ಸಲ್ಲಿಸಿದರೆ ಎಷ್ಟು ಸಾಲ? ಎಷ್ಟು ಸಬ್ಸಿಡಿ? 

ಒಂದು ವೇಳೆ ನೀವೇನಾದರೂ ಉದ್ಯೋಗಿನಿ ಯೋಜನೆಯ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಸಬ್ಸಿಡಿ ವ್ಯವಸ್ಥೆ. ನೀವು ಬ್ಯಾಂಕ್‌ನಿಂದ ಪಡೆಯುವ ಸಾಲದ ಒಂದು ನಿರ್ದಿಷ್ಟ ಭಾಗವನ್ನು ಸರ್ಕಾರವೇ ಬ್ಯಾಂಕ್‌ಗೆ ಪಾವತಿಸುತ್ತದೆ. ಇದರರ್ಥ, ನೀವು ಸಂಪೂರ್ಣ ಸಾಲ ಮೊತ್ತವನ್ನು ಮರಳಿ ಕಟ್ಟಬೇಕಾಗಿಲ್ಲ. ಹೌದು ಸರಿಯಾಗಿ ಓದಿದ್ದೀರಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಬಹುದು. 

ವರ್ಗವಾರು ಸಾಲ ಮತ್ತು ಸಬ್ಸಿಡಿ ವಿವರ

ವರ್ಗ (Category)ಗರಿಷ್ಠ ಸಾಲದ ಮೊತ್ತಸಬ್ಸಿಡಿ ಪ್ರಮಾಣಗರಿಷ್ಠ ಸಹಾಯಧನ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST)₹1 ಲಕ್ಷದಿಂದ ₹3 ಲಕ್ಷ50%₹1.50 ಲಕ್ಷದವರೆಗೆ
ಸಾಮಾನ್ಯ / ಹಿಂದುಳಿದ ವರ್ಗ (Gen / OBC)ಗರಿಷ್ಠ ₹3 ಲಕ್ಷ30%₹90,000 ದವರೆಗೆ

ಉದಾಹರಣೆ:
ಒಬ್ಬ SC/ST ವರ್ಗದ ಮಹಿಳೆ ₹3 ಲಕ್ಷ ಸಾಲ ಪಡೆದರೆ, ಅದರಲ್ಲಿನ ₹1.50 ಲಕ್ಷವನ್ನು ಸರ್ಕಾರ ಸಬ್ಸಿಡಿಯಾಗಿ ಪಾವತಿಸುತ್ತದೆ. ಉಳಿದ ₹1.50 ಲಕ್ಷವನ್ನು ಮಾತ್ರ ಅವರು ಬ್ಯಾಂಕ್‌ಗೆ ಹಂತ ಹಂತವಾಗಿ ಮರುಪಾವತಿ ಮಾಡಬೇಕಾಗುತ್ತೆ.

ಇದು ಮಹಿಳೆಯರ ಮೇಲಿನ ಹಣಕಾಸಿನ ಒತ್ತಡವನ್ನು ಬಹಳಷ್ಟು ಕಡಿಮೆ ಮಾಡುತ್ತದೆ ಅಂತ ಹೇಳಬಹುದು.

ಉದ್ಯೋಗಿನಿ ಯೋಜನೆಯ ಲಾಭಗಳೇನು..?

ಉದ್ಯೋಗಿನಿ ಯೋಜನೆಯಿಂದ ಮಹಿಳೆಯರಿಗೆ ದೊರಕುವ ಪ್ರಮುಖ ಲಾಭಗಳು ಈ ಕೆಳಗಿನಂತಿವೆ ಗಮನಿಸಬಹುದು:

  • ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ
  • ಸರ್ಕಾರದಿಂದ ನೇರ ಸಬ್ಸಿಡಿ
  • ಸ್ವಂತ ಉದ್ಯೋಗ ಆರಂಭಿಸುವ ಅವಕಾಶ
  • ಕುಟುಂಬದ ಆದಾಯ ಹೆಚ್ಚಳ
  • ಆರ್ಥಿಕ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ
  • ಸಮಾಜದಲ್ಲಿ ಗೌರವ ಮತ್ತು ಗುರುತು

ಈ ಯೋಜನೆಯ ಲಾಭವನ್ನು ಪಡೆದುಕೊಂಡ ಅನೇಕ ಮಹಿಳೆಯರು ಇಂದು ಯಶಸ್ವಿ ಉದ್ಯಮಿಗಳಾಗಿ ತಮ್ಮ ಕುಟುಂಬವನ್ನೇ ಮುನ್ನಡೆಸುತ್ತಿದ್ದಾರೆ ಇಷ್ಟೇ ಅಲ್ಲದೆ ಕೇವಲ ಈ ಒಂದು ಉದ್ಯೋಗಿನಿ ಯೋಜನೆಯಡಿಯಲ್ಲಿ ಅಂತಲ್ಲ ಇಂದಿಗೂ ಮಹಿಳೆಯರು ಕುಟುಂಬವನ್ನು ಮುನ್ನಡೆಸುತ್ತಾ ಹೋಗುತ್ತಿದ್ದಾರೆ.

ಯಾರಿಗೆ ಸಿಗುತ್ತದೆ ಉದ್ಯೋಗಿನಿ ಸಾಲ? 

ಉದ್ಯೋಗಿನಿ ಯೋಜನೆಗೆ ಅರ್ಜಿ ಹಾಕಲು ಕೆಲವು ಕಡ್ಡಾಯ ಅರ್ಹತಾ ನಿಯಮಗಳಿವೆ. ಅವುಗಳನ್ನು ಪೂರೈಸಿದ ಮಹಿಳೆಯರು ಮಾತ್ರ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಮೂಲ ಅರ್ಹತೆಗಳು

  • ಅರ್ಜಿದಾರರು ಮಹಿಳೆಯಾಗಿರಬೇಕು
  • ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು
  • ವಯಸ್ಸು 18 ರಿಂದ 55 ವರ್ಷದೊಳಗೆ ಇರಬೇಕು
  • ಅರ್ಥವಾಗದೆ ಇದ್ದಲ್ಲಿ ಹತ್ತಿರ ಇರುವಂತ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು ಅಥವಾ ಕರ್ನಾಟಕವನ್ನು ಗ್ರಾಮವನ್ ಅಥವಾ ಸಿಎಸ್‌ಸಿ ಕೇಂದ್ರಗಳನ್ನು ಭೇಟಿ ನೀಡಬಹುದು ಇದರ ಕುರಿತು ಇನ್ನು ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಆದಾಯ ಮಿತಿ ಎಷ್ಟಿರಬೇಕಾಗುತ್ತೆ..?

  • ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ:
    ವಾರ್ಷಿಕ ಕುಟುಂಬ ಆದಾಯ ₹1.50 ಲಕ್ಷ ಮೀರಬಾರದು
  • SC/ST ಮತ್ತು ವಿಶೇಷ ವರ್ಗದ ಮಹಿಳೆಯರಿಗೆ:
    ವಾರ್ಷಿಕ ಕುಟುಂಬ ಆದಾಯ ₹2 ಲಕ್ಷ ಮೀರಬಾರದು
  • ವಿಧವಾ ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಅನ್ವಯಿಸುವುದಿಲ್ಲ

ಇನ್ನಿತರ ಇರುವ ಷರತ್ತುಗಳು:

  • ಈ ಹಿಂದೆ ಯಾವುದೇ ಬ್ಯಾಂಕ್ ಸಾಲದಲ್ಲಿ ಡಿಫಾಲ್ಟರ್ ಆಗಿರಬಾರದು
  • ಒಂದೇ ಕುಟುಂಬದಿಂದ ಸಾಮಾನ್ಯವಾಗಿ ಒಬ್ಬರಿಗೆ ಮಾತ್ರ ಅವಕಾಶ

ಯಾವ ಬಿಸಿನೆಸ್‌ಗಳಿಗೆ ಸಾಲ ಸಿಗುತ್ತದೆ..?

ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ದೊಡ್ಡ ಫ್ಯಾಕ್ಟರಿ ಅಥವಾ ಕೈಗಾರಿಕೆ ಮಾತ್ರವಲ್ಲ, ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯೋಗಗಳಿಗೂ ಸಾಲ ಸಿಗುತ್ತದೆ. ಮಹಿಳೆಯರು ತಮ್ಮ ಆಸಕ್ತಿ, ಕೌಶಲ್ಯ ಮತ್ತು ಸ್ಥಳೀಯ ಬೇಡಿಕೆಯನ್ನು ಗಮನಿಸಿ ಉದ್ಯೋಗ ಆಯ್ಕೆ ಮಾಡಬಹುದಾಗಿದೆ.

ಜನಪ್ರಿಯ ಬಿಸಿನೆಸ್ ಆಯ್ಕೆಗಳು

  • ಬ್ಯೂಟಿ ಪಾರ್ಲರ್
  • ಟೈಲರಿಂಗ್ ಮತ್ತು ಬಟ್ಟೆ ಹೊಲಿಗೆ ಕೇಂದ್ರ
  • ಉಪ್ಪಿನಕಾಯಿ, ಹಪ್ಪಳ, ಮಸಾಲೆ ಪುಡಿ ತಯಾರಿಕೆ
  • ಬೇಕರಿ ಮತ್ತು ಸಣ್ಣ ಆಹಾರ ಘಟಕ
  • ನೋಟ್‌ಬುಕ್ ಬೈಂಡಿಂಗ್ ಮತ್ತು ಸ್ಟೇಷನರಿ ಅಂಗಡಿ
  • ಹೈನುಗಾರಿಕೆ (ಡೈರಿ)
  • ಜೆರಾಕ್ಸ್ ಮತ್ತು ಪ್ರಿಂಟಿಂಗ್ ಶಾಪ್
  • ಸಣ್ಣ ಕಿರಾಣಿ ಅಂಗಡಿ
  • ಹಣ್ಣು–ತರಕಾರಿ ವ್ಯಾಪಾರ

ಈ ಪಟ್ಟಿ ಮಾತ್ರ ಅಂತಿಮವಲ್ಲ. ಸ್ಥಳೀಯ ಅಧಿಕಾರಿಗಳ ಸಲಹೆಯೊಂದಿಗೆ ಇನ್ನೂ ಹಲವು ಉದ್ಯೋಗಗಳಿಗೆ ಅನುಮತಿ ಸಿಗಬಹುದು ಹೀಗಾಗಿ ಸ್ಥಳೀಯ ಅಧಿಕಾರಿಗಳ ಸಲಹೆಯನ್ನ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವುದು ಹೇಗೆ..?

ಉದ್ಯೋಗಿನಿ ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೀತಿಯಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇದೆ ಎರಡು ಅವಕಾಶಗಳು ಈ ಕೆಳಗಿನಂತಿದೆ ಗಮನಿಸಿ.

ಆನ್‌ಲೈನ್ ಅರ್ಜಿ ವಿಧಾನ

  1. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
    www.kswdc.karnataka.gov.in
  2. ಉದ್ಯೋಗಿನಿ ಯೋಜನೆ ವಿಭಾಗವನ್ನು ಆಯ್ಕೆಮಾಡಿ
  3. ಅರ್ಜಿ ಫಾರಂ ತುಂಬಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  4. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಸಂಖ್ಯೆ (Acknowledgement) ಪಡೆದುಕೊಳ್ಳಿ

ಆಫ್‌ಲೈನ್ ಅರ್ಜಿ ವಿಧಾನ

  • ನಿಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಕಚೇರಿ
  • ಅಥವಾ ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ

ಇಲ್ಲಿ ಅರ್ಜಿ ಫಾರಂ ಪಡೆದು, ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 

ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳು ಕಡ್ಡಾಯವಾಗಿವೆ ಈ ಕೆಳಗಿನ ದಾಖಲೆಗಳನ್ನು ಸರಿಯಾಗಿ ನೀಡಬೇಕು:

  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ / ರೇಷನ್ ಕಾರ್ಡ್ (ವಿಳಾಸದ ದೃಢೀಕರಣಕ್ಕೆ)
  • ಯೋಜನಾ ವರದಿ (Project Report)
  • ಪಾಸ್‌ಪೋರ್ಟ್ ಅಳತೆಯ ಫೋಟೋ – 3 ಪ್ರತಿಗಳು
  • ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್

ಯೋಜನಾ ವರದಿ ಎಂದರೆ ನೀವು ಯಾವ ಉದ್ಯೋಗ ಆರಂಭಿಸುತ್ತೀರಿ, ಎಷ್ಟು ಹಣ ಬೇಕು, ಹೇಗೆ ಆದಾಯ ಗಳಿಸುತ್ತೀರಿ ಎಂಬ ವಿವರ ಒದಗಿಸಬೇಕು.

ಸಾಲ ಮಂಜೂರಿಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ..?

ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ ನಂತರ:

  • ದಾಖಲೆ ಪರಿಶೀಲನೆ
  • ಸ್ಥಳ ಪರಿಶೀಲನೆ (ಅಗತ್ಯವಿದ್ದರೆ)
  • ಬ್ಯಾಂಕ್ ಅನುಮೋದನೆ

ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು 15 ರಿಂದ 30 ದಿನಗಳವರೆಗೆ ಸಮಯ ಬೇಕಾಗಬಹುದು. ಕೆಲ ಸಂದರ್ಭಗಳಲ್ಲಿ ಸ್ಥಳೀಯ ಕಾರಣಗಳಿಂದ ಸ್ವಲ್ಪ ವಿಳಂಬವಾಗುವ ಸಾಧ್ಯತೆಯೂ ಇದೆ.

ಉದ್ಯೋಗಿನಿ ಯೋಜನೆ ಏಕೆ ಮಹಿಳೆಯರಿಗೆ ಅತ್ಯಂತ ಉಪಯುಕ್ತಕರವಾಗಿರುತ್ತೆ?

ಕೈಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಕನಸುಗಳನ್ನು ಕೊಲ್ಲಬೇಕಾಗಿಲ್ಲ. ಉದ್ಯೋಗಿನಿ ಯೋಜನೆ ಮಹಿಳೆಯರಿಗೆ ಕೇವಲ ಹಣ ನೀಡುವುದಲ್ಲ, ಆತ್ಮವಿಶ್ವಾಸ, ಗೌರವ ಮತ್ತು ಭವಿಷ್ಯದ ಭದ್ರತೆಯನ್ನು ನೀಡುತ್ತದೆ. ಒಂದು ಸಣ್ಣ ಉದ್ಯೋಗವೇ ಮುಂದೆ ದೊಡ್ಡ ಸಾಧನೆಯಾಗಿ ರೂಪಾಂತರವಾಗಿ ಗೊಳ್ಳಬಹುದು ಎಂದರೇನು ಕಮ್ಮಿ ಇಲ್ಲ.

ನಮ್ಮ ಕೊನೆಯ ಮಾತು:

ಉದ್ಯೋಗಿನಿ ಯೋಜನೆ ಮಹಿಳೆಯರ ಜೀವನದಲ್ಲಿ ಆರ್ಥಿಕ ಬೆಳಕು ಚೆಲ್ಲುವಂತಹ ಮಹತ್ವದ ಯೋಜನೆಯಾಗಿದೆ ಅಂತ ಹೇಳಬಹುದು. ಸ್ವಂತ ಉದ್ಯೋಗದ ಕನಸು ಇದ್ದು, ಹಣಕಾಸಿನ ಕೊರತೆಯಿಂದ ಹಿಂದೆ ಸರಿಯುತ್ತಿದ್ದ ಮಹಿಳೆಯರಿಗೆ ಇದು ಸುವರ್ಣಾವಕಾಶ. ಸರಿಯಾದ ಮಾಹಿತಿ, ಸ್ವಲ್ಪ ಧೈರ್ಯ ಮತ್ತು ಪರಿಶ್ರಮ ಇದ್ದರೆ, ಸರ್ಕಾರದ ಈ ಯೋಜನೆಯ ನೆರವಿನಿಂದ ನೀವು ನಿಮ್ಮದೇ ಯಶಸ್ಸಿನ ಕಥೆಯನ್ನು ಮಹಿಳೆಯರು ಬರೆಯಬಹುದಾಗಿದೆ.

ಕೈಯಲ್ಲಿ ಹಣವಿಲ್ಲ ಎಂದು ಸುಮ್ಮನೆ ಕೂರುವ ಬದಲು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲುವ ಪ್ರಯತ್ನವನ್ನು ಇಂದಿನಿಂದಲೇ ಆರಂಭಿಸಿ.

FAQ

1. ಉದ್ಯೋಗಿನಿ ಯೋಜನೆಗೆ ಪುರುಷರು ಅರ್ಜಿ ಹಾಕಬಹುದೇ?

ಇಲ್ಲ. ಈ ಯೋಜನೆ ಸಂಪೂರ್ಣವಾಗಿ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದೆ.

2. ಒಂದೇ ಕುಟುಂಬದಲ್ಲಿ ಇಬ್ಬರು ಮಹಿಳೆಯರು ಅರ್ಜಿ ಹಾಕಬಹುದೇ?

ಸಾಮಾನ್ಯವಾಗಿ ಒಂದೇ ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅಧಿಕಾರಿಗಳನ್ನು ಭೇಟಿ ನೀಡಿ.

3. ಉದ್ಯೋಗಿನಿ ಸಾಲಕ್ಕೆ ಬಡ್ಡಿದರ ಎಷ್ಟು?

ಬಡ್ಡಿದರವನ್ನು ಸಂಬಂಧಿತ ಬ್ಯಾಂಕ್ ನಿಗದಿಪಡಿಸುತ್ತದೆ, ಆದರೆ ಸಬ್ಸಿಡಿ ಇರುವುದರಿಂದ ಒಟ್ಟು ಭಾರ ಕಡಿಮೆ ಆಗುತ್ತದೆ.

4. ಈ ಯೋಜನೆಗೆ ಗ್ಯಾರಂಟಿ ಬೇಕೇ?

ಸಾಲ ಮೊತ್ತ ಮತ್ತು ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಗ್ಯಾರಂಟಿ ಅಥವಾ ಜಾಮೀನು ಕೇಳಬಹುದು.

5. ಈಗಾಗಲೇ ಒಂದು ಸಣ್ಣ ಉದ್ಯೋಗ ಇದ್ದರೆ ಅರ್ಜಿ ಹಾಕಬಹುದೇ?

ಹೌದು. ಉದ್ಯೋಗ ವಿಸ್ತರಣೆಗೆ ಸಹ ಈ ಯೋಜನೆಯಡಿ ಸಾಲ ಪಡೆಯಬಹುದು, ಆದರೆ ಅಧಿಕಾರಿಗಳ ಅನುಮತಿ ಅಗತ್ಯ.

Leave a Comment