ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಸ್ವಯಂ ಉದ್ಯೋಗಕ್ಕೆ ಒಂದು ಲಕ್ಷ ಸಾಲ ಇದರ ಜೊತೆಗೆ ಸಹಾಯಧನ ಹಾಗೆ ಇಷ್ಟೇ ಅಲ್ಲದೆ ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.
ಹೌದು ನೀವು ಸರಿಯಾಗಿ ಓದಿದ್ದೀರಿ ನೀವೇನಾದರೂ ಸ್ವಯಂ ಉದ್ಯೋಗಕ್ಕೋಸ್ಕರ ಹಣ ಬೇಕು ಅಂತ ಅಲಿವಂತಿದ್ದರೆ ಒಂದು ನಿಮಿಷ ನಿಲ್ಲಿ ಈ ಒಂದು ಮಾಹಿತಿಯನ್ನು ಕೊನೆಯ ಓದಿ ಸರ್ಕಾರವೇ ನೀಡುತ್ತೆ ನಿಮಗೆ ಒಂದು ಲಕ್ಷ ರುಪಾಯಿ ಸಾಲ ಜೊತೆಗೆ ಸಹಾಯಧನ ಎಷ್ಟೇ ಅಲ್ಲದೆ ಇದರಿಂದ ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಸಂಪೂರ್ಣ ಮಾಹಿತಿಯನ್ನು ನಿಮಗಂತೆ ನಾವು ಈ ಕೆಳಗಡೆ ವಿವರವಾಗಿ ನೀಡುತ್ತೇವೆ ಒಂದು ವೇಳೆ ನಿಮಗೆ ಯಾವುದೇ ತರಹದ ಪ್ರಶ್ನೆ ಬಂದಿದೆ ಆದಲ್ಲಿ ನೀವು ಕಮೆಂಟ್ ಮಾಡಬಹುದು.
ಹಾಗೆ ಉದ್ಯೋಗಹಬ್ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರ ಸರಕಾರಿ ಯೋಜನೆಗಳ ಕುರಿತು ಅಧಿಕೃತ ಮಾಹಿತಿ ಹಾಗೂ ಸರ್ಕಾರದ ಪ್ರತಿಯೊಂದು ಯೋಜನೆಗಳ ಕುರಿತು ಅಪ್ಡೇಟ್ ಒದಗಿಸುತ್ತೇವೆ. ಇಷ್ಟೇ ಅಲ್ಲದೆ ನಿಮಗೆ ಸರಕಾರಿ ಹುದ್ದೆಗಳ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ಅದು ಕೇಂದ್ರ ಸರ್ಕಾರದಾಗಿರಬಹುದು ಅಥವಾ ರಾಜ್ಯ ಸರ್ಕಾರದ ಆಗಿರಬಹುದು ಪ್ರತಿಯೊಂದು ಮಾಹಿತಿ ನಿಮಗಿಲ್ಲಿ ಸಿಗುತ್ತೆ ಹೀಗೆ ನೀವು ಪ್ರತಿದಿನ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳುವುದಾದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಚಾನಲ್ ಆಗಿ ಏಕೆಂದರೆ ನಾವು ಇಲ್ಲಿ ನಿಮಗೆ ಪ್ರತಿದಿನ ಇದೇ ತರ ಮಾಹಿತಿಗಳನ್ನ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.
ನೀವೇನಾದರೂ ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ನಮ್ಮ ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಯುವಕರು ಮತ್ತು ಯುವತಿ ರಾಗಿದ್ದರೆ ನಿಮಗಂತಲೇ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಹತ್ವದ ಆರ್ಥಿಕ ಬೆಂಬಲವನ್ನು ನೀಡುತ್ತಿದೆ. ಸ್ವಂತ ಉದ್ಯಮ ಆರಂಭಿಸುವ ಕನಸು ಕಂಡಿರುವವರಿಗೆ ಈ ಯೋಜನೆ ದೊಡ್ಡ ಅವಕಾಶವಾಗಿದೆ ಅಂತ ಹೇಳಬಹುದು ಇಷ್ಟೇ ಅಲ್ಲದೆ ಈ ಕೆಳಗಿನಂತೆ ತಿಳಿಸಲಾಗಿದೆ ನೀವು ಮಾಹಿತಿಯನ್ನು ಗಮನಿಸಬಹುದು.
ನೋಡಿ ದಯವಿಟ್ಟು ಗಮನಿಸಿ ಪ್ರಸ್ತುತ ಈ ಒಂದು ಯೋಜನೆಯು ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಮೂಲಕ ಜಾರಿಗೊಂಡಿರುವ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲದ ಜೊತೆಗೆ ಸಹಾಯಧನವನ್ನೂ ಒದಗಿಸಲಾಗುತ್ತೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ. ಇಷ್ಟೇ ಅಲ್ಲದೆ ಪ್ರಸ್ತುತ ಈಗಾಗಲೇ ಸಾವಿರಾರು ಯುವಕರು ಈ ಯೋಜನೆಯ ಮೂಲಕ ತಮ್ಮದೇ ಆದ ಸಣ್ಣ ಉದ್ಯಮಗಳನ್ನು ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ನೋಡಿ ಇಂದಿನ ಈ ಲೇಖನದಲ್ಲಿ ಯೋಜನೆಯ ಉದ್ದೇಶ, ಲಾಭಗಳು, ಅರ್ಹತೆ, ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಮರುಪಾವತಿ ನಿಯಮಗಳು ಮತ್ತು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳ ಕುರಿತು ಸಂಪೂರ್ಣ ವಿವರ ನೀಡಲಾಗಿದೆ.
ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ನಾವು ಯಾವುದೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವವಾಗುತ್ತೆ ಇದೀಗ ಪ್ರಸ್ತುತ ಉದ್ಯೋಗಹಬ್ ಜಾಲತಾಣದ ಮೂಲಕ ನೀವು ಸರ್ಕಾರಿ ಯೋಜನೆ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹೀಗೆ ತಿಳಿದುಕೊಳ್ಳುವಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವ ಆಗುತ್ತೆ ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರಾಗಿರುತ್ತಾರೆ ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಇಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಯಾವುದಾದರೂ ಅರ್ಜಿ ಶುಲ್ಕ ಇರುತ್ತಾ? ಹಾಗೆ ಹಣ ಹೇಗೆ ಕಂತು ಕಂತುಗಳ ಮೂಲಕ ಬರುತ್ತ ಒಮ್ಮೆಲೇ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಾ ಎಂಬ ಹಲವಾರು ರೀತಿಯ ಪ್ರಶ್ನೆಗಳು ಇರುತ್ತೆ ಇಂದಿನ ಈ ಒಂದು ಲೇಖನದಲ್ಲಿ ಕಂಪ್ಲೀಟ್ ಮಾಹಿತಿಯನ್ನು ನೀಡಲಾಗಿದೆ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಿನಂತಿದೆ ನೋಡಿ ಉತ್ತರ.
ಮೊದಲು ನಾವು ಯಾವುದೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಆ ಯೋಜನೆ ಯಾವುದು ಹಾಗೆ ಯೋಜನೆ ಎಂದರೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಂತಲೆ ನಾವು ಈ ಕೆಳಗಡೆ ಈ ಯೋಜನೆಯದು ಹಾಗೂ ಯಾರಿಗಾಗಿ ಯೋಜನೆ ಎಂಬುದನ್ನ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.
ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ ತಿಳಿದುಕೊಳ್ಳಿ:

Table of Contents
ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಬಹುಪಾಲು ಯುವಕರು ಶಿಕ್ಷಣ ಪಡೆದಿದ್ದರೂ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ನೇರ ಸಾಲ ಯೋಜನೆಯನ್ನು ಜಾರಿಗೆ ತಂದಿರುವ ಯೋಜನೆ ಇದಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ:
- ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವುದು
- ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ಸಹಾಯ ನೀಡುವುದು
- ಸಹಾಯಧನದ ಮೂಲಕ ಸಾಲದ ಭಾರವನ್ನು ಕಡಿಮೆ ಮಾಡುವುದು
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವುದು
- ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರ ನೀಡುವುದು
ಯೋಜನೆಯ ಲಾಭಗಳ ಸಂಪೂರ್ಣ ವಿವರ ಈ ಕೆಳಕಂಡಂತಿದೆ:
ಇಲ್ಲಿಗೆ ಮನಸಿ ಟ್ವಿಟರ್ ನಲ್ಲಿ ಸರ್ಕಾರವೇ ಮಾಹಿತಿಯನ್ನು ಒದಗಿಸಲಾಗಿದೆ ಪ್ರೂಫ್ ನೋಡಬಹುದು ಸ್ವಯಂ ಉದ್ಯೋಗಕ್ಕೆ ₹1 ಲಕ್ಷ ಸಾಲ + ಸಹಾಯಧನ .
ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ವಿವಿಧ ರೀತಿಯ ಆರ್ಥಿಕ ನೆರವು ಒದಗಿಸಲಾಗುತ್ತದೆ ಈ ಎಲ್ಲಾ ಹಾರ್ದಿಕ ನೆರವು ಕುರಿತು ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನಿಸಿ ಯೋಜನೆ ವಿಧ ಹಾಗೂ ಒಟ್ಟು ಮೊತ್ತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಸಾಲ ಮತ್ತು ಸಹಾಯಧನ ವಿವರ
| ಯೋಜನೆಯ ವಿಧ | ಒಟ್ಟು ಮೊತ್ತ | ಸಹಾಯಧನ | ಸಾಲ |
| ಸಾಮಾನ್ಯ ಉದ್ಯಮ | ₹1,00,000 | ₹50,000 | ₹50,000 |
| ಪಶು ಸಂಗೋಪನೆ | ₹50,000 | ₹25,000 | ₹25,000 |
ಸಾಲದ ಮೊತ್ತವನ್ನು ಕೇವಲ ನಾಲ್ಕು ಶೇಕಡಾ ಬಡ್ಡಿದರದಲ್ಲಿ ಮರುಪಾವತಿಸಬಹುದಾಗಿದೆ. ಮರುಪಾವತಿ ಅವಧಿ 30 ಕಂತುಗಳಾಗಿದ್ದು, ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ ಹೌದು ಒಂದು ವೇಳೆ ನೀವು ಸಬ್ಸಿಡಿ ಪಡೆದುಕೊಂಡಿದ್ದೆ ಆದಲ್ಲಿ ಹಣ ಮರುಪಾವತಿ ಮಾಡಬೇಕು ಸರ್ಕಾರಕ್ಕೆ ಇನ್ನುಳಿದಿರುವಂತದ್ದು. ಹೀಗೆ ಮರುಪಾವತಿ ಮಾಡಲು ನಿಮಗೆ 30 ಕಂತುಗಳು ಸಿಗುತ್ತೆ.
ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಸೌಲಭ್ಯ:
ಸಣ್ಣ ಮಟ್ಟದ ವ್ಯಾಪಾರ ಆರಂಭಿಸಲು ಬಯಸುವವರಿಗೆ ₹50,000 ಮೊತ್ತದ ಯೋಜನೆಯೂ ಲಭ್ಯವಿದೆ ಇಷ್ಟೇ ಅಲ್ಲದೆ ಇದರಲ್ಲಿ ಮೊದಲು ಅರ್ಧ ಮೊತ್ತ ಸಹಾಯಧನವಾಗಿರುತ್ತದೆ.
ಯಾವ ಯಾವ ಉದ್ಯಮಗಳಿಗೆ ಸಾಲ ಸಿಗುತ್ತದೆ..?

ಈ ಯೋಜನೆ ಕೇವಲ ಚರ್ಮ ಆಧಾರಿತ ಉದ್ಯಮಗಳಿಗೆ ಮಾತ್ರ ಸೀಮಿತವಲ್ಲ. ಕೆಳಕಂಡ ಅನೇಕ ಉದ್ಯಮಗಳಿಗೆ ಸಾಲ ಸೌಲಭ್ಯ ಲಭ್ಯ ಇರುತ್ತೆ ನಿಮಗಂತಲೇ ಈ ಕೆಳಗಡೆ ಯಾವ ಯಾವ ಉದ್ಯಮಗಳಿಗೆ ಸಾಲ ಸಿಗುತ್ತೆ ಎಂಬುದರ ಕಂಪ್ಲೀಟ್ ಮಾಹಿತಿ ಇದೆ ಗಮನಿಸಿ.
- ಪೆಟ್ಟಿಗೆ ಅಂಗಡಿ ಅಥವಾ ಚಿಕ್ಕ ವ್ಯಾಪಾರ ಮಳಿಗೆ
- ಟೈಲರಿಂಗ್ ಮತ್ತು ಬಟ್ಟೆ ಹೊಲಿಗೆ ಕೆಲಸ
- ರೆಡಿಮೇಡ್ ಬಟ್ಟೆ ಅಂಗಡಿ
- ಕುರಿ, ಮೇಕೆ, ಕೋಳಿ ಸಾಕಾಣಿಕೆ
- ಹಣ್ಣು, ತರಕಾರಿ, ಮೀನು ಮಾರಾಟ
- ಟೀ ಅಥವಾ ಕಾಫಿ ಅಂಗಡಿ
- ಸಣ್ಣ ಸೇವಾ ಉದ್ಯಮಗಳು
- ಗ್ರಾಮೀಣ ಹಸ್ತವ್ಯವಸ್ಥೆಗಳು
ಅರ್ಹತಾ ಮಾನದಂಡಗಳು ಏನೇನ್ ಇರಬೇಕು..?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲ ನಿರ್ದಿಷ್ಟ ಅರ್ಹತೆಗಳನ್ನು ಉರಿಸಬೇಕಾಗುತ್ತೆ ಉದಾಹರಣೆಗೆ ತಿಳಿಸುವುದಾದರೆ ಯಾವ ಜಾತಿಗೆ ಹಾಗೂ ವಯಸ್ಸು ಹೀಗೆ ನಿಮಗಂತೆ ಈ ಕೆಳಗಡೆ ಇದೆ ನೋಡಿ ಮಾಹಿತಿ.
ಜಾತಿ ಮತ್ತು ವಯಸ್ಸು
- ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
- ವಯಸ್ಸು 18 ರಿಂದ 50 ವರ್ಷದೊಳಗಿರಬೇಕು
ಆದಾಯ ಮಿತಿ
- ಗ್ರಾಮೀಣ ಪ್ರದೇಶ: ವಾರ್ಷಿಕ ಕುಟುಂಬ ಆದಾಯ ₹1.5 ಲಕ್ಷ ಮೀರಬಾರದು
- ನಗರ ಪ್ರದೇಶ: ವಾರ್ಷಿಕ ಕುಟುಂಬ ಆದಾಯ ₹2 ಲಕ್ಷ ಮೀರಬಾರದು
ಇನ್ನಿತರೆ ನಿಯಮಗಳು:
- ಕುಟುಂಬದಲ್ಲಿ ಯಾರೂ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರಬಾರದು
- ಹಿಂದೆ ಇದೇ ರೀತಿಯ ಸರ್ಕಾರಿ ಸಾಲ ಯೋಜನೆಯ ಲಾಭ ಪಡೆದಿರಬಾರದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಪಟ್ಟಿ:
ಅರ್ಜಿ ಸಲ್ಲಿಸುವಾಗ ಕೆಳಕಂಡ ದಾಖಲೆಗಳು ಅಗತ್ಯವಿರುತ್ತವೆ ಅರ್ಜಿ ಸಲ್ಲಿಸಲು ಬಯಸುತ್ತಿರುವವರು ಗಮನಿಸಬಹುದು:
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್ ಪ್ರತಿ
- ತರಬೇತಿ ಪ್ರಮಾಣ ಪತ್ರ (ಇದ್ದಲ್ಲಿ)
- ಯೋಜನಾ ವರದಿ (ಯಾವ ಉದ್ಯಮ ಆರಂಭಿಸುತ್ತೀರಿ ಎಂಬ ವಿವರ)
- ಪಾಸ್‌ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ ಈ ಕೆಳಗಿನಂತಿದೆ:
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುತ್ತದೆ.
ಹಂತ 1
ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2
ಮುಖಪುಟದಲ್ಲಿರುವ ಇಲಾಖೆಗಳು ಮತ್ತು ಸೇವೆಗಳು ವಿಭಾಗವನ್ನು ಆಯ್ಕೆ ಮಾಡಿ.
ಹಂತ 3
ಸಮಾಜ ಕಲ್ಯಾಣ ಇಲಾಖೆ ಆಯ್ಕೆ ಮಾಡಿ.
ಹಂತ 4
ನೇರ ಸಾಲ ಯೋಜನೆ ಆಯ್ಕೆಯನ್ನು ತೆರೆಯಿರಿ.
ಹಂತ 5
ಮೊಬೈಲ್ ಸಂಖ್ಯೆಯನ್ನು ನಮೂದಿಸಿ ದೃಢೀಕರಣ ಪಡೆದುಕೊಳ್ಳಿ.
ಹಂತ 6
ವೈಯಕ್ತಿಕ ವಿವರಗಳು, ವಿಳಾಸ, ಬ್ಯಾಂಕ್ ಮಾಹಿತಿ ಭರ್ತಿ ಮಾಡಿ.
ಹಂತ 7
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಹಂತ 8
ಅರ್ಜಿಯ ಸಂಖ್ಯೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಇದು ಬೇಕಾಗುತ್ತೆ.
ಅರ್ಜಿ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆ:
ನೋಡಿ ನೀವು ಅರ್ಜಿ ಸಲ್ಲಿಸುತ್ತೀರಾ ನಂತರ ಅರ್ಜಿ ಪರಿಶೀಲನೆ ಹೇಗೆ ಆಯ್ಕೆ ಪ್ರಕ್ರಿಯೆ ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿರುತ್ತೆ ನಿಮಗಂತಲೇ ಈ ಕೆಳಗಡೆ ಹಂತ ಹಂತವಾಗಿ ಒದಗಿಸಲಾಗಿದೆ..
- ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸುತ್ತದೆ
- ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತದೆ
- ಆಯ್ಕೆಯಾದವರಿಗೆ ನಿಗಮದ ಮೂಲಕ ಮಾಹಿತಿ ನೀಡಲಾಗುತ್ತದೆ
- ಸಾಲದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ
ಸಾಲ ಮರುಪಾವತಿ ನಿಯಮಗಳೇನು..?
ಈ ಒಂದು ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಂಡರೆ ನಂತರ ಸಾಲದ ಮರುಪಾವತಿ ನಿಯಮಗಳೇನು ತಿಳಿದುಕೊಳ್ಳಬೇಕು ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಬಡ್ಡಿದರ: ವರ್ಷಕ್ಕೆ ನಾಲ್ಕು ಶೇಕಡಾ
- ಕಂತುಗಳ ಸಂಖ್ಯೆ: 30
- ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಹೆಚ್ಚುವರಿ ದಂಡ ಇರುವುದಿಲ್ಲ
ಸಹಾಯವಾಣಿ ಮತ್ತು ಸಂಪರ್ಕ ವಿವರ:

ಯಾವುದೇ ಸಮಸ್ಯೆ ಅಥವಾ ಮಾಹಿತಿ ಬೇಕಾದಲ್ಲಿ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ:
9482300400
8277799990
ಕಚೇರಿ ವಿಳಾಸ:
ಖಾದಿ ಭವನ, ವಸಂತನಗರ, ಬೆಂಗಳೂರು.
ನಮ್ಮ ಕೊನೆಯ ಮಾತು:
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಯುವಕರಿಗೆ ಸ್ವಾವಲಂಬನೆ ಸಾಧಿಸಲು ಉತ್ತಮ ಅವಕಾಶ ಇದಾಗಿದೆ ಅಂತ ಹೇಳಬಹುದು. ಸಹಾಯಧನದೊಂದಿಗೆ ಸಾಲ ಸಿಗುವುದರಿಂದ ಆರ್ಥಿಕ ಭಾರ ಕಡಿಮೆಯಾಗುತ್ತದೆ. ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೆ ಅರ್ಜಿ ಸಲ್ಲಿಸುವುದು ಒಳಿತು ಅಂತ ನಮ್ಮ ಅನಿಸಿಕೆ.
FAQ
ಪ್ರಶ್ನೆ 1: ಈ ಯೋಜನೆಗೆ ಯಾರು ಅರ್ಹರು?
ಪರಿಶಿಷ್ಟ ಜಾತಿಗೆ ಸೇರಿದ, 18–50 ವರ್ಷದೊಳಗಿನ, ಆದಾಯ ಮಿತಿಯೊಳಗಿನ ನಿರುದ್ಯೋಗಿಗಳು ಅರ್ಹರು.
ಪ್ರಶ್ನೆ 2: ಮಹಿಳೆಯರಿಗೆ ಮೀಸಲಾತಿ ಇದೆಯೇ?
ಹೌದು. ಮಹಿಳಾ ಅರ್ಜಿದಾರರಿಗೆ 33% ಶೇಕಡಾ ಮೀಸಲಾತಿ ನೀಡಲಾಗಿದೆ.
ಪ್ರಶ್ನೆ 3: ಅಂಗವಿಕಲರು ಅರ್ಜಿ ಸಲ್ಲಿಸಬಹುದೇ?
ಹೌದು. ದೈಹಿಕ ಅಂಗವಿಕಲರಿಗೆ ಐದು ಶೇಕಡಾ ಮೀಸಲಾತಿ ಇದೆ.
ಪ್ರಶ್ನೆ 4: ಸರ್ಕಾರಿ ನೌಕರರ ಕುಟುಂಬದವರು ಅರ್ಜಿ ಹಾಕಬಹುದೇ?
ಇಲ್ಲ. ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದರೆ ಅರ್ಹತೆ ಇರುವುದಿಲ್ಲ.
ಪ್ರಶ್ನೆ 5: ಸಾಲ ಮರುಪಾವತಿ ಹೇಗೆ ಮಾಡಬೇಕು?
ಬ್ಯಾಂಕ್ ಮೂಲಕ ತಿಂಗಳ ಕಂತುಗಳಲ್ಲಿ ಪಾವತಿಸಬೇಕು.
ಪ್ರಶ್ನೆ 6: ಯೋಜನಾ ವರದಿ ಎಂದರೆ ಏನು?
ನೀವು ಆರಂಭಿಸಲು ಬಯಸುವ ಉದ್ಯಮದ ಸಂಪೂರ್ಣ ವಿವರವೇ ಯೋಜನಾ ವರದಿ.
ಪ್ರಶ್ನೆ 7: ಅರ್ಜಿ ತಿರಸ್ಕೃತವಾದರೆ ಮತ್ತೆ ಹಾಕಬಹುದೇ?
ಮುಂದಿನ ಅಧಿಸೂಚನೆ ಬಂದಾಗ ಮತ್ತೆ ಅರ್ಜಿ ಹಾಕಬಹುದು.
ಪ್ರಶ್ನೆ 8: ಸಾಲ ಯಾವ ಬ್ಯಾಂಕ್ ಮೂಲಕ ಸಿಗುತ್ತದೆ?
ಸರ್ಕಾರ ಸೂಚಿಸಿದ ಬ್ಯಾಂಕ್ ಮೂಲಕ.
ಪ್ರಶ್ನೆ 9: ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ಬೇರೆ ನಿಯಮಗಳಿವೆಯೇ?
ಹೌದು. ಆದಾಯ ಮಿತಿಯಲ್ಲಿ ವ್ಯತ್ಯಾಸವಿದೆ.
ಪ್ರಶ್ನೆ 10: ಆಯ್ಕೆ ಪಟ್ಟಿ ಎಲ್ಲಿ ಪ್ರಕಟವಾಗುತ್ತದೆ?
ಜಿಲ್ಲಾ ನಿಗಮ ಕಚೇರಿಗಳ ಸೂಚನಾ ಫಲಕದಲ್ಲಿ.