ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಆರ್ ಬಿ ಐ ನೇಮಕಾತಿ 2026 ಯಾವುದೇ ಡಿಗ್ರಿ ಪಾಸ್ ಆಗಿರುವಂತ ಅಭ್ಯರ್ಥಿಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆ ಆಯ್ಕೆ ಆದರೆ ಅಭ್ಯರ್ಥಿಗಳಿಗೆ 45,000 ಇಂದ ಹಿಡಿದು 47,000 ವರೆಗೆ ಸಂಬಳ ಸಿಗುತ್ತೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತುತ Assistant ಹುದ್ದೆಗಳ ನೇಮಕಾತಿಗಾಗಿ 2026ರ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ದೇಶದ ವಿವಿಧ ನಗರಗಳಲ್ಲಿ ಒಟ್ಟು 650 ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಕನಸು ಕಂಡಿರುವ ಯುವಕರಿಗೆ ಇದು ಅತ್ಯುತ್ತಮ ಸುವರ್ಣ ಅವಕಾಶ ಎನ್ನಬಹುದು.
ಈ ನೇಮಕಾತಿಗೆ 16 ಫೆಬ್ರವರಿ 2026 ರಿಂದ 8 ಮಾರ್ಚ್ 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪದವೀಧರರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಬಯಸುವ ಅಭ್ಯರ್ಥಿಗಳು ಮತ್ತು ಸರ್ಕಾರಿ ಉದ್ಯೋಗದ ಭದ್ರತೆಯನ್ನು ಹುಡುಕುತ್ತಿರುವವರಿಗೆ ಇದು ಒಂದು ಮಹತ್ವದ ಅವಕಾಶವಾಗಿದೆ.
ಪ್ರಮುಖ ಮಾಹಿತಿ ಸಂಕ್ಷಿಪ್ತವಾಗಿ:

| ವಿವರ | ಮಾಹಿತಿ |
| ಸಂಸ್ಥೆ | ಭಾರತೀಯ ರಿಸರ್ವ್ ಬ್ಯಾಂಕ್ (RBI) |
| ಹುದ್ದೆ | Assistant |
| ಒಟ್ಟು ಹುದ್ದೆಗಳು | 650 |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರ |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಜಿ ಅವಧಿ | 16 ಫೆಬ್ರವರಿ – 8 ಮಾರ್ಚ್ 2026 |
| ಅಧಿಕೃತ ವೆಬ್‌ಸೈಟ್ | www.rbi.org.in |
ಹುದ್ದೆಗಳ ವಿವರ:
ಈ ನೇಮಕಾತಿಯಲ್ಲಿ ಮುಂಬೈ ವಲಯಕ್ಕೆ ಅತಿಹೆಚ್ಚು 249 ಹುದ್ದೆಗಳು ಲಭ್ಯವಿದ್ದು, ಇತರ ಪ್ರಮುಖ ನಗರಗಳ ವಿವರ ಈ ಕೆಳಗಿನಂತಿದೆ ಗಮನಿಸಿ:
- ಮುಂಬೈ – 249
- ಚೆನ್ನೈ – 53
- ಕಾನ್ಪುರ & ಲಖನೌ – 50
- ನವದೆಹಲಿ – 49
- ಗುವಾಹಟಿ – 36
- ಭೋಪಾಲ್ – 30
- ಬೆಂಗಳೂರು – 24
ದಯವಿಟ್ಟು ಗಮನಿಸಿ ನೋಡಿ ಈ ಹುದ್ದೆಗಳು ದೇಶದ ವಿವಿಧ ಪ್ರಾದೇಶಿಕ ಕಚೇರಿಗಳಿಗೆ ಹಂಚಿಕೆ ಮಾಡಲಾಗಿದೆ.
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ:
ಯಾವುದೇ ವಿಷಯದಲ್ಲಿ ಪದವಿ (Graduation) ಕನಿಷ್ಠ 50% ಅಂಕಗಳೊಂದಿಗೆ ಪಡೆದಿರಬೇಕು.
SC / ST / PwBD ಅಭ್ಯರ್ಥಿಗಳಿಗೆ ಪಾಸ್ ಕ್ಲಾಸ್ ಸಾಕಾಗುತ್ತೆ.
ವಯೋಮಿತಿ:
01-02-2026 ರಂದು 20 ರಿಂದ 28 ವರ್ಷ ಒಳಗಿರಬೇಕು.
ವಯೋ ಸಡಿಲಿಕೆ:
- SC / ST – 5 ವರ್ಷ
- OBC – 3 ವರ್ಷ
- PwBD – 10 ವರ್ಷ
ಸ್ಥಳೀಯ ಭಾಷಾ ಜ್ಞಾನ:
ಅರ್ಜಿದಾರರು ತಮ್ಮ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು ಇದನ್ನ ಸಹ ಗಮನದಲ್ಲಿಟ್ಟುಕೊಳ್ಳಿ. ಈ ಕುರಿತು Language Proficiency Test (LPT) ನಡೆಯಲಿದೆ.
ಸಂಬಳ ಮತ್ತು ಸೌಲಭ್ಯಗಳು:

RBI Assistant ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳಿಗೆ ಸುಮಾರು ₹45,000 ರಿಂದ ₹47,000 ವರೆಗೆ ಒಟ್ಟು ವೇತನ (Gross Salary) ಲಭ್ಯವಾಗುತ್ತದೆ.
ಇದರೊಳಗೆ:
- ಮೂಲ ವೇತನ
- ಡಿಎ (DA)
- ಎಚ್‌ಆರ್‌ಎ (HRA)
- ಸಾರಿಗೆ ಭತ್ಯೆ
- ವೈದ್ಯಕೀಯ ಸೌಲಭ್ಯ
- ಪಿಎಫ್ ಮತ್ತು ಪಿಂಚಣಿ
ಇದಲ್ಲದೆ ಉತ್ತಮ ಉದ್ಯೋಗ ಭದ್ರತೆ ಮತ್ತು ಪ್ರೋಮೋಶನ್ ಅವಕಾಶಗಳಿವೆ.
ಅರ್ಜಿ ಶುಲ್ಕ
| ವರ್ಗ | ಶುಲ್ಕ |
| ಸಾಮಾನ್ಯ / OBC / EWS | ₹450 + GST |
| SC / ST / PwBD / ಮಾಜಿ ಸೈನಿಕ | ₹50 + GST |
ಆಯ್ಕೆ ಪ್ರಕ್ರಿಯೆ:
RBI Assistant ನೇಮಕಾತಿ 3 ಹಂತಗಳಲ್ಲಿ ನಡೆಯಲಿದೆ:
- Prelims ಪರೀಕ್ಷೆ – ಇಂಗ್ಲಿಷ್, ಗಣಿತ, ರೀಸನಿಂಗ್ (100 ಅಂಕ)
- Mains ಪರೀಕ್ಷೆ – 200 ಅಂಕ
- Language Proficiency Test (LPT)
ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅಂತಿಮ ಆಯ್ಕೆ ಸಿಗುತ್ತದೆ.
ಪ್ರಮುಖ ದಿನಾಂಕಗಳು:
| ಘಟನೆ | ದಿನಾಂಕ |
| ಅಧಿಸೂಚನೆ ಬಿಡುಗಡೆ | 16 ಫೆಬ್ರವರಿ 2026 |
| ಅರ್ಜಿ ಪ್ರಾರಂಭ | 16 ಫೆಬ್ರವರಿ 2026 |
| ಕೊನೆಯ ದಿನ | 8 ಮಾರ್ಚ್ 2026 |
| ಪ್ರಿಲಿಮ್ಸ್ ಪರೀಕ್ಷೆ | 11 ಏಪ್ರಿಲ್ 2026 (ತಾತ್ಕಾಲಿಕ) |
| ಮೇನ್ಸ್ ಪರೀಕ್ಷೆ | 7 ಜೂನ್ 2026 (ತಾತ್ಕಾಲಿಕ) |
ಅರ್ಜಿ ಸಲ್ಲಿಸುವ ವಿಧಾನ:
ಈ ಕೆಳಗಡೆ ಅರಬಿ ಚಲಿಸುವ ವಿಧಾನದ ಕುರಿತು ಹಂತ ಹಂತವಾಗಿ ತಿಳಿಸಲಾಗಿದೆ ಗಮನಿಸಿ.
- www.rbi.org.in ವೆಬ್‌ಸೈಟ್‌ಗೆ ಭೇಟಿ ನೀಡಿ
- “Recruitment” ವಿಭಾಗದಲ್ಲಿ RBI Assistant 2026 ಲಿಂಕ್ ಕ್ಲಿಕ್ ಮಾಡಿ
- ಹೊಸ ನೋಂದಣಿ ಮಾಡಿ
- ಫಾರ್ಮ್ ಭರ್ತಿ ಮಾಡಿ
- ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಶುಲ್ಕ ಪಾವತಿಸಿ
- ಫಾರ್ಮ್ ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ನಮ್ಮ ಕೊನೆಯ ಮಾತು:
RBI Assistant 2026 ನೇಮಕಾತಿ ದೇಶದ ಅತ್ಯಂತ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅಪರೂಪದ ಸುವರ್ಣ ಅವಕಾಶವಾಗಿದೆ ಅಂತ ಹೇಳಬಹುದು ಹಾಗೆ ಅರ್ಹ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF Short notification | Click HereClick here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ:
1) RBI Assistant 2026 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
👉 ಉತ್ತರ: RBI Assistant 2026 ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 8 ಮಾರ್ಚ್ 2026 ಆಗಿದೆ. ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ, ಏಕೆಂದರೆ ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
2) RBI Assistant ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಏನು?
👉 ಉತ್ತರ: ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ (Graduation) ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
SC / ST / PwBD ಅಭ್ಯರ್ಥಿಗಳಿಗೆ ಪಾಸ್ ಕ್ಲಾಸ್ ಸಾಕು.
3) RBI Assistant 2026 ಪರೀಕ್ಷೆಯಲ್ಲಿ ಎಷ್ಟು ಹಂತಗಳಿವೆ?
👉 ಉತ್ತರ: ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:
- ಪ್ರಿಲಿಮ್ಸ್ ಪರೀಕ್ಷೆ (Prelims)
- ಮೇನ್ಸ್ ಪರೀಕ್ಷೆ (Mains)
- ಸ್ಥಳೀಯ ಭಾಷಾ ನಿಪುಣತೆ ಪರೀಕ್ಷೆ (Language Proficiency Test – LPT)
4) RBI Assistant ಹುದ್ದೆಗೆ ಮಾಸಿಕ ಸಂಬಳ ಎಷ್ಟು ಸಿಗುತ್ತದೆ?
👉 ಉತ್ತರ: RBI Assistant ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸರಾಸರಿ ₹45,000 ರಿಂದ ₹47,000 ವರೆಗೆ ಒಟ್ಟು ವೇತನ (Gross Salary) ಲಭ್ಯವಾಗುತ್ತದೆ. ಇದರಲ್ಲಿ ಡಿಎ, ಎಚ್‌ಆರ್‌ಎ, ಟಿಎ, ವೈದ್ಯಕೀಯ ಸೌಲಭ್ಯ, ಪಿಎಫ್ ಮತ್ತು ಪಿಂಚಣಿ ಸೌಲಭ್ಯಗಳು ಸೇರಿವೆ.
5) ಕರ್ನಾಟಕ ಅಭ್ಯರ್ಥಿಗಳು ಯಾವ ಭಾಷಾ ಪರೀಕ್ಷೆ ಬರೆಯಬೇಕು?
👉 ಉತ್ತರ: ಕರ್ನಾಟಕ ರಾಜ್ಯದಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಭಾಷಾ ನಿಪುಣತೆ ಪರೀಕ್ಷೆ (LPT – Kannada) ಬರೆಯಬೇಕು. ಅಭ್ಯರ್ಥಿಗಳು ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.