ನಮ್ಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೆ ನೆನಪಿಗೆ ಬರುವುದು ಉಚಿತಮನೆ. ಹೌದು ನೀವು ಸರಿಯಾಗಿ ಓದಿದ್ದೀರಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಅದರಲ್ಲಿಯೂ ಮನೆ ಇಲ್ಲದವರಿಗೆ ಒಟ್ಟು ಈಗ ಪ್ರಸ್ತುತ 2.67 ಲಕ್ಷ ರೂಪಾಯಿ ಸಬ್ಸಿಡಿ ಸಿಗುತ್ತಿದೆ ಹೀಗಾಗಿ ಒಂದು ವೇಳೆ ನಿಮ್ಮ ಹತ್ತಿರ ಮನೆ ಇಲ್ಲದಿದ್ದರೆ ನೀವು ಬೇಗನೆ ಅರ್ಜಿ ಸಲ್ಲಿಸಿ ಕೊನೆ ದಿನಾಂಕ ಡಿಸೆಂಬರ್ 31 2025.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಒಂದು ವೇಳೆ ಇನ್ನುವರೆಗೂ ಅರ್ಜಿ ಸಲ್ಲಿಸಿ ಇದ್ದಲ್ಲಿ ಡಿಸೆಂಬರ್ 31 2025 ದಿನಾಂಕವಾಗಿದೆ 2.67 ಲಕ್ಷ ಸಬ್ಸಿಡಿ ಒಂದಿಗೆ ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿ ನೀವು ತಿಳಿದುಕೊಳ್ಳಬೇಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಕನಸು ಅದನ್ನ ನನಸು ಮಾಡಬೇಕೆಂದು ವಿಶೇಷವಾಗಿ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ಸ್ವಂತ ಪಕ್ಕಾ ಮನೆ ಹೊಂದುವುದು ಜೀವನದ ದೊಡ್ಡ ಗುರಿಯಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಭೂಮಿ ಬೆಲೆ, ಕಟ್ಟಡ ಸಾಮಗ್ರಿಗಳ ದುಬಾರಿ ದರ, ಕಾರ್ಮಿಕ ವೆಚ್ಚ ಪ್ರತಿಯೊಂದು ಸೇರಿ ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ವರ್ಷಗಟ್ಟಲೆ ದುಡಿದು ಕೂಡ ಮನೆ ಕಟ್ಟುವಷ್ಟು ಹಣ ಕೂಡಿಸುವುದಂದರೆ ಅನೇಕ ಕುಟುಂಬಗಳಿಗೆ ಸಾಧ್ಯವಾಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಲಕ್ಷಾಂತರ ಕುಟುಂಬಗಳಿಗೆ ಹೊಸ ಆಶಾಕಿರಣವಾಗಿದೆ. “ಎಲ್ಲರಿಗೂ ವಸತಿ” ಎಂಬ ಉದ್ದೇಶದೊಂದಿಗೆ 2015ರಲ್ಲಿ ಆರಂಭವಾದ ಈ ಯೋಜನೆ, ಸ್ವಂತ ಮನೆ ಇಲ್ಲದವರಿಗೆ ಅಥವಾ ಕಚ್ಚಾ ಮನೆಗಳಲ್ಲಿ ವಾಸಿಸುವವರಿಗೆ ಆರ್ಥಿಕ ನೆರವು ನೀಡುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಬೇರೆ–ಬೇರೆ ರೀತಿಯಲ್ಲಿ ಈ ಯೋಜನೆಯ ಲಾಭ ಸಿಗುತ್ತಿದೆ.
ಪ್ರಸ್ತುತ ಇಂದಿನ ಈ ಲೇಖನದಲ್ಲಿ ಪಿಎಂ ಆವಾಸ್ ಯೋಜನೆಯ ಸಂಪೂರ್ಣ ಮಾಹಿತಿ, ಅರ್ಹತೆ, ಸಬ್ಸಿಡಿ ವಿವರ, ಅರ್ಜಿ ಸಲ್ಲಿಸುವ ವಿಧಾನ, ಕರ್ನಾಟಕದಲ್ಲಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಹಾಗೂ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
ನೋಡಿ ಸಮಾನವಾಗಿ ನಾವು ಯಾವುದೇ ಒಂದು ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದರೆ ಮೊದಲು ಯಾವ ಈ ಯೋಜನೆ ಎಂದರೇನು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಾಗಿ ನಾವು ಈ ಕೆಳಗಡೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು ಎಂಬ ಮಾಹಿತಿಯನ್ನು ಒದಗಿಸಿದ್ದೇವೆ ಗಮನಿಸಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು?
Table of Contents
ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಸತಿ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಗುರಿ ಎಂದರೆ 2025ರೊಳಗೆ ದೇಶದ ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಪಕ್ಕಾ ಮನೆ ಒದಗಿಸುವುದು. ಮನೆ ಇಲ್ಲದವರು, ಕಚ್ಚಾ ಮನೆಗಳಲ್ಲಿ ವಾಸಿಸುವವರು ಹಾಗೂ ಬಾಡಿಗೆ ಮನೆಯಲ್ಲಿರುವ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಯೋಜನೆ ಬಹಳ ಉಪಯುಕ್ತವಾಗಿದೆ ಅಂತ ಹೇಳಬಹುದು ಹಾಗೆ ಅಂದರೆ ಏನು ಕೂಡ ಕಡಿಮೆನೇ ಇಲ್ಲ.

ಈ ಯೋಜನೆಯಡಿಯಲ್ಲಿ ಸರ್ಕಾರ ನೇರವಾಗಿ ಮನೆ ಕಟ್ಟಿಕೊಡುವುದಿಲ್ಲ. ಬದಲಾಗಿ, ಮನೆ ಕಟ್ಟಿಕೊಳ್ಳಲು ಅಥವಾ ಮನೆ ಖರೀದಿಸಲು ಬೇಕಾದ ಹಣದ ಮೇಲೆ ನೇರ ಸಹಾಯಧನ (Subsidy) ಅಥವಾ ಬಡ್ಡಿ ರಿಯಾಯಿತಿ ನೀಡುತ್ತದೆ. ಇದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ ಮತ್ತು ಮನೆ ಕಟ್ಟುವ ಕನಸು ನನಸಾಗುತ್ತದೆ ಅಂತ ಹೇಳಬಹುದು.
ಪಿಎಂ ಆವಾಸ್ ಯೋಜನೆಯ ವಿಧಗಳೆಷ್ಟು..?
ಅರ್ಜಿ ಸಲ್ಲಿಸುವ ಮುನ್ನ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G):
ಈ ಯೋಜನೆ ಹಳ್ಳಿಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗಾಗಿ ರೂಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಇಲ್ಲದವರು ಅಥವಾ ಮಣ್ಣಿನ ಮನೆ, ಶೀಟ್ ಮನೆ, ಹಳೆಯ ಕಚ್ಚಾ ಮನೆಗಳಲ್ಲಿ ವಾಸಿಸುವವರು ಈ ಯೋಜನೆಯ ಲಾಭ ಪಡೆಯಬಹುದು. ಸರ್ಕಾರ ನೇರವಾಗಿ ಹಣ ಸಹಾಯ ಒದಗಿಸುತ್ತೆ ಮತ್ತು ಮನೆ ಕಟ್ಟುವ ಜವಾಬ್ದಾರಿ ಫಲಾನುಭವಿಯದೇ ಆಗಿರುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (PMAY-U):
ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು, ಸ್ವಂತ ಮನೆ ಕಟ್ಟಲು ಅಥವಾ ಖರೀದಿಸಲು ಬಯಸುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ನಗರ ಯೋಜನೆಯಲ್ಲಿ ಮುಖ್ಯವಾಗಿ ಗೃಹ ಸಾಲದ ಬಡ್ಡಿ ಸಬ್ಸಿಡಿ (CLSS – Credit Linked Subsidy Scheme) ಸಿಗುತ್ತದೆ ಎಂದು ಹೇಳಬಹುದು.
ಪಿಎಂ ಆವಾಸ್ ಯೋಜನೆಯ ಮುಖ್ಯ ಉದ್ದೇಶಗಳೇನು..?
ಪಿಎಂ ಆವಾಸ್ ಯೋಜನೆ ಕೇವಲ ಮನೆ ಕಟ್ಟಿಸುವ ಯೋಜನೆಯಲ್ಲ. ಇದರ ಹಿಂದೆ ಹಲವಾರು ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳಿವೆ.
- ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸುರಕ್ಷಿತ ಹಾಗೂ ಗೌರವಯುತ ವಸತಿ ಒದಗಿಸುವುದು
- ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡುವುದು
- ಆರೋಗ್ಯಕರ ಜೀವನಕ್ಕೆ ಅನುಕೂಲವಾಗುವ ಪಕ್ಕಾ ಮನೆಗಳನ್ನು ಒದಗಿಸುವುದು
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಕ್ರಮ ವಸತಿ ಕಡಿಮೆ ಮಾಡುವುದು
- ದೇಶದ ಒಟ್ಟಾರೆ ಅಭಿವೃದ್ಧಿಗೆ ವಸತಿ ಕ್ಷೇತ್ರದ ಮೂಲಕ ವೇಗ ನೀಡುವುದು
ಅರ್ಜಿ ಸಲ್ಲಿಸಿದರೆ ಎಷ್ಟು ಹಣ ಸಿಗುತ್ತದೆ?
ಪಿಎಂ ಆವಾಸ್ ಯೋಜನೆಯಲ್ಲಿನ ಹಣಕಾಸು ಸಹಾಯ ನಿಮ್ಮ ವಾಸಸ್ಥಳ (ಗ್ರಾಮೀಣ/ನಗರ) ಮತ್ತು ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ಹೀಗಾಗಿ ಗಮನಿಸಬೇಕಾಗುತ್ತದೆ ಪ್ರತಿಯೊಂದು ಮಾಹಿತಿಯನ್ನು ಅರ್ಜಿ ಸಲ್ಲಿಸುವ ಮುನ್ನ.
ಗ್ರಾಮೀಣ ಪ್ರದೇಶದವರಿಗೆ (PMAY-G)
ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಸರ್ಕಾರ ನೇರವಾಗಿ ಹಣ ಸಹಾಯ ನೀಡುತ್ತದೆ.
- ಸಮತಟ್ಟಾದ ಪ್ರದೇಶಗಳು: ₹1,20,000
- ಗುಡ್ಡಗಾಡು/ಪರ್ವತ ಪ್ರದೇಶಗಳು: ₹1,30,000
ಅರ್ಜಿ ಸಲ್ಲಿಸುವುದರಿಂದ ಆಗುವ ಹೆಚ್ಚುವರಿ ಲಾಭಗಳು:

- ಸ್ವಚ್ಛ ಭಾರತ ಅಭಿಯಾನ: ಶೌಚಾಲಯ ನಿರ್ಮಾಣಕ್ಕೆ ₹12,000
- MGNREGA: ಸುಮಾರು 90 ದಿನಗಳ ಕೂಲಿ (₹20,000ಕ್ಕೂ ಹೆಚ್ಚು)
ಒಟ್ಟಾರೆ, ಗ್ರಾಮೀಣ ಫಲಾನುಭವಿಗಳಿಗೆ ಮನೆ ಕಟ್ಟಲು ಸಾಕಷ್ಟು ಆರ್ಥಿಕ ನೆರವು ಸಿಗುತ್ತದೆ.
ನಗರ ಪ್ರದೇಶದವರಿಗೆ (PMAY-U)
ನಗರ ಪ್ರದೇಶದವರಿಗೆ ನೇರವಾಗಿ ಹಣ ನೀಡುವುದಿಲ್ಲ. ಬದಲಾಗಿ, ಗೃಹ ಸಾಲದ ಮೇಲೆ ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ ಗಮನಿಸಿ.
EWS (ಆರ್ಥಿಕವಾಗಿ ದುರ್ಬಲ ವರ್ಗ)
- ವಾರ್ಷಿಕ ಆದಾಯ: ₹3 ಲಕ್ಷದೊಳಗೆ
- ಬಡ್ಡಿ ಸಬ್ಸಿಡಿ: 6.5% ವರೆಗೆ
LIG (ಕಡಿಮೆ ಆದಾಯ ವರ್ಗ)
- ವಾರ್ಷಿಕ ಆದಾಯ: ₹3 ರಿಂದ ₹6 ಲಕ್ಷ
MIG (ಮಧ್ಯಮ ಆದಾಯ ವರ್ಗ)
- ವಾರ್ಷಿಕ ಆದಾಯ: ₹6 ರಿಂದ ₹18 ಲಕ್ಷ (ಹಳೆಯ ನಿಯಮದಂತೆ)
ಒಟ್ಟಾರೆ ಸಿಗುವ ಲಾಭ: ಗರಿಷ್ಠವಾಗಿ ₹2.67 ಲಕ್ಷದವರೆಗೆ ಸಾಲದ ಮೊತ್ತ ಕಡಿಮೆಯಾಗುತ್ತದೆ. ಇದು ನೇರವಾಗಿ ನಿಮ್ಮ ಬ್ಯಾಂಕ್ ಸಾಲ ಖಾತೆಗೆ ಜಮೆಯಾಗುತ್ತದೆ.
ಪಿಎಂ ಆವಾಸ್ ಯೋಜನೆಗೆ ಇರಬೇಕಾದ ಅರ್ಹತೆಗಳು..?
ಈ ಯೋಜನೆಯ ಲಾಭ ಪಡೆಯಲು ಕೆಲವು ಮುಖ್ಯ ಅರ್ಹತೆಗಳನ್ನು ಉರಿಸಬೇಕಾಗುತ್ತೆ ಈ ಎಲ್ಲ ಅರ್ಹತೆಗಳನ್ನು ಈ ಕೆಳಗಿನಂತೆ ಒದಗಿಸಲಾಗಿದೆ ಗಮನಿಸಿ.
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು
- ಅರ್ಜಿದಾರರ ಹೆಸರಿನಲ್ಲಿ ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಭಾರತದಲ್ಲಿ ಎಲ್ಲಿಯೂ ಪಕ್ಕಾ ಮನೆ ಇರಬಾರದು
- ಈ ಹಿಂದೆ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ವಸತಿ ಯೋಜನೆಯ ಲಾಭ ಪಡೆದಿರಬಾರದು
- ಹೊಸದಾಗಿ ಮನೆ ಕಟ್ಟುವವರು ಅಥವಾ ಹಳೆಯ ಮನೆಯನ್ನು ವಿಸ್ತರಿಸುವವರು ಅರ್ಜಿ ಹಾಕಬಹುದು
- ನಗರ ಯೋಜನೆಯಲ್ಲಿ ಆದಾಯ ಮಿತಿಯೊಳಗೆ ಇರಬೇಕು
ಪಿಎಂ ಆವಾಸ್ ಯೋಜನೆಗೆ ಬೇಕಾಗುವ ಮುಖ್ಯ ದಾಖಲೆಗಳು:
ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ.
- ಆಧಾರ್ ಕಾರ್ಡ್ (ಕಡ್ಡಾಯ)
- ಬ್ಯಾಂಕ್ ಪಾಸ್ಬುಕ್ (ಆಧಾರ್ ಲಿಂಕ್ ಆಗಿರಬೇಕು)
- ಪ್ಯಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (SC/ST/OBC ಇದ್ದಲ್ಲಿ)
- ರೇಷನ್ ಕಾರ್ಡ್
- ಸ್ವಂತ ಜಾಗದ ದಾಖಲೆಗಳು (ಗ್ರಾಮೀಣ ಯೋಜನೆಗೆ)
- ಪಾಸ್ಪೋರ್ಟ್ ಅಳತೆಯ ಫೋಟೋ
ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ:
ಆನ್ಲೈನ್ ಮೂಲಕ ಅರ್ಜಿ (ನಗರ ಪ್ರದೇಶ)
- ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ
- “Citizen Assessment” ಆಯ್ಕೆಯನ್ನು ಕ್ಲಿಕ್ ಮಾಡಿ
- ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಅರ್ಹತೆ ಪರಿಶೀಲಿಸಿ
- ಅರ್ಜಿ ಫಾರ್ಮ್ನಲ್ಲಿ ಹೆಸರು, ವಿಳಾಸ, ಬ್ಯಾಂಕ್ ವಿವರ, ಆದಾಯ ಮಾಹಿತಿ ಭರ್ತಿ ಮಾಡಿ
- ಎಲ್ಲಾ ವಿವರಗಳನ್ನು ಪರಿಶೀಲಿಸಿ “Submit” ಕ್ಲಿಕ್ ಮಾಡಿ
- ಅರ್ಜಿ ಸಂಖ್ಯೆ (Application ID) ಅನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ
ಆಫ್ಲೈನ್ ಮೂಲಕ ಅರ್ಜಿ ವಿಧಾನ (ಗ್ರಾಮೀಣ ಪ್ರದೇಶ):
ಗ್ರಾಮೀಣ ಭಾಗದವರು ಈ ಕೆಳಗಡೆ ಸುತ್ತಿರುವ ಹಾಗೆ ಅರ್ಜಿ ಸಲ್ಲಿಸಬಹುದು.
- ನಿಮ್ಮ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ
- ಪಿಡಿಒ ಅಥವಾ ಕಾರ್ಯದರ್ಶಿಯಿಂದ ಅರ್ಜಿ ಫಾರ್ಮ್ ಪಡೆದು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಜೋಡಿಸಿ ಸಲ್ಲಿಸಿ
- ಹತ್ತಿರದ CSC (ಗ್ರಾಮ ಒನ್) ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಬಹುದು
ಕರ್ನಾಟಕದಲ್ಲಿ ಪಿಎಂ ಆವಾಸ್ ಸ್ಟೇಟಸ್ ಚೆಕ್ ಮಾಡುವ ವಿಧಾನ ಹೇಗೆ..?
ಕರ್ನಾಟಕದಲ್ಲಿ ಪಿಎಂ ಆವಾಸ್ ಯೋಜನೆಯ ಅನುಷ್ಠಾನವನ್ನು ರಾಜೀವ್ ಗಾಂಧಿ ವಸತಿ ನಿಗಮ ನೋಡಿಕೊಳ್ಳುತ್ತದೆ ಹೆಚ್ಚಿನ ಮಾಹಿತಿ ಬೇಕೆಂದರೆ ಹತ್ತಿರ ಇರುವಂತ ನಾಡಕಚೇರಿಗೆ ಬೇಡಿ ನೀಡಿ ಅಥವಾ ಗ್ರಾಮ ಪಂಚಾಯಿತಿ ಬೇಟಿ ನೀಡಬಹುದು.
ಸ್ಟೇಟಸ್ ಚೆಕ್ ಮಾಡಲು:
- ashraya.karnataka.gov.in ವೆಬ್ಸೈಟ್ಗೆ ಹೋಗಿ
- “Beneficiary Status” ಆಯ್ಕೆಮಾಡಿ
- ಜಿಲ್ಲೆ ಮತ್ತು Beneficiary Code ನಮೂದಿಸಿ
- ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ
ಇದರ ಜೊತೆಗೆ, ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪ್ರಕಟವಾಗುವ ಹೊಸ ಪಟ್ಟಿಯಲ್ಲೂ ನಿಮ್ಮ ಹೆಸರು ಪರಿಶೀಲಿಸಬಹುದು.
ಪಿಎಂ ಆವಾಸ್ ಯೋಜನೆಯಿಂದಾಗುವ ಪ್ರಮುಖ ಲಾಭಗಳು:

- ಬಡ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಮನೆ ಕನಸು ನನಸಾಗುತ್ತದೆ
- ಮಹಿಳೆಯರ ಹೆಸರಿನಲ್ಲಿ ಮನೆ ನೋಂದಣಿ ಆಗುವುದರಿಂದ ಭದ್ರತೆ ಹೆಚ್ಚಾಗುತ್ತದೆ
- ಗೃಹ ಸಾಲದ ಹೊರೆ ಕಡಿಮೆಯಾಗುತ್ತದೆ
- ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಸಮಾನ ಅವಕಾಶ
- ದೀರ್ಘಾವಧಿಯ ಆರ್ಥಿಕ ಸ್ಥಿರತೆ ಸಿಗುತ್ತದೆ
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಬಹು ಮುಖ್ಯ ಅಂಶಗಳು:
- ಎಲ್ಲಾ ದಾಖಲೆಗಳು ಸರಿಯಾಗಿರಬೇಕು
- ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕಾರವಾಗಬಹುದು
- ಅರ್ಜಿ ಸಂಖ್ಯೆ ತಪ್ಪದೆ ಉಳಿಸಿಕೊಳ್ಳಿ
- ಕೊನೆಯ ದಿನಾಂಕ (ಡಿ.31) ಒಳಗೆ ಅರ್ಜಿ ಸಲ್ಲಿಸಿ
ನಮ್ಮ ಕೊನೆಯ ಮಾತು:
ಪ್ರಧಾನ ಮಂತ್ರಿ ಆವಾಸ್ ಯೋಜನೆ ಇಂದು ಲಕ್ಷಾಂತರ ಕುಟುಂಬಗಳ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ ಹಾಗೂ ಮುಂದೆ ತರುತ್ತದೆ ಇರುತ್ತೆ. ಸ್ವಂತ ಮನೆ ಎನ್ನುವ ಕನಸು ಬಡವರಿಗೆ ಅಸಾಧ್ಯ ಎಂದು ಭಾಸವಾಗುತ್ತಿದ್ದ ಕಾಲ ಈಗ ಹಳೆಯದಾಗಿದೆ. ಸರ್ಕಾರ ನೀಡುತ್ತಿರುವ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ, ಕಡಿಮೆ ಆದಾಯದಲ್ಲಿಯೂ ಸುರಕ್ಷಿತ ಮತ್ತು ಗೌರವಯುತ ಜೀವನ ಸಾಧ್ಯ ಅಂತ ಹೇಳಬಹುದು.
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ಪಿಎಂ ಆವಾಸ್ ಯೋಜನೆಗೆ ಕೊನೆಯ ದಿನಾಂಕ ಯಾವುದು?
ಪ್ರಸ್ತುತ ಮಾಹಿತಿಯಂತೆ, ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕವಾಗಿದೆ. ಸಮಯದೊಳಗೆ ಅರ್ಜಿ ಸಲ್ಲಿಸುವುದು ಬಹಳ ಉತ್ತಮ.
2. ಈಗಾಗಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಅರ್ಜಿ ಹಾಕಬಹುದೇ?
ಹೌದು. ನಿಮ್ಮ ಹೆಸರಿನಲ್ಲಿ ಪಕ್ಕಾ ಮನೆ ಇಲ್ಲದಿದ್ದರೆ ಅರ್ಜಿ ಹಾಕಬಹುದು.
3. ಮಹಿಳೆಯರ ಹೆಸರಿನಲ್ಲಿ ಮನೆ ಕಡ್ಡಾಯವೇ?
ಕಡ್ಡಾಯವಲ್ಲ. ಆದರೆ ಸಾಧ್ಯವಾದಷ್ಟು ಮಹಿಳೆಯರ ಹೆಸರಿನಲ್ಲಿ ಅಥವಾ ಸಹ-ಹೆಸರಿನಲ್ಲಿ ಮನೆ ನೋಂದಣಿ ಮಾಡಲಾಗುತ್ತದೆ.
4. ಪಿಎಂ ಆವಾಸ್ ಯೋಜನೆಯ ಹಣ ನೇರವಾಗಿ ಕೈಗೆ ಸಿಗುತ್ತದೆಯೇ?
ಗ್ರಾಮೀಣ ಯೋಜನೆಯಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ನಗರ ಯೋಜನೆಯಲ್ಲಿ ಬಡ್ಡಿ ಸಬ್ಸಿಡಿ ರೂಪದಲ್ಲಿ ಸಾಲದ ಮೊತ್ತ ಕಡಿಮೆಯಾಗುತ್ತದೆ.
5. ಅರ್ಜಿ ತಿರಸ್ಕೃತವಾದರೆ ಮತ್ತೆ ಅರ್ಜಿ ಹಾಕಬಹುದೇ?
ಹೌದು. ತಪ್ಪುಗಳನ್ನು ಸರಿಪಡಿಸಿ ಮುಂದಿನ ಹಂತದಲ್ಲಿ ಮತ್ತೆ ಅರ್ಜಿ ಹಾಕಬಹುದು.