ಫಾರೆಸ್ಟ್ ಗಾರ್ಡ್ ಮತ್ತು ಜೈಲ್ ಸಿಬ್ಬಂದಿ ಭರ್ಜರಿ ನೇಮಕಾತಿ 2026.!SSLC,PUC ಆದವರಿಗೆ ಸುವರ್ಣ ಅವಕಾಶ.! ತಿಂಗಳಿಗೆ ₹19,500 – ₹62,000ರೂ. ಸಂಬಳ.!!

ನಮಸ್ಕ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

MPESB Recruitment 2026 Notification

WhatsApp Group Join Now
Telegram Group Join Now

 ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಫಾರೆಸ್ಟ್ ಗಾರ್ಡ್  ಮತ್ತು ಜೈಲ್ ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದಾರೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

 ನೋಡಿ ಸಾಮಾನ್ಯವಾಗಿ ನಾವು ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾಗಲಿ ಅದು ಫಾರೆಸ್ಟ್ ಗಾರ್ಡ್ ಆಗಿರಬಹುದು ಅಥವಾ ಜೈಲ್ ಸಿಬ್ಬಂದಿ ಅಥವಾ ಇನ್ಯಾವುದೇ ಸರ್ಕಾರಿ ಹುದ್ದೆ ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ. 

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು ಹಾಗೆ ಕೊನೆ ದಿನಾಂಕ..? ಯಾವುದಾದರೂ ಅರ್ಜಿ ಶುಲ್ಕ ಇರುತ್ತಾ ಅಥವಾ ಇಲ್ಲ.. ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಮತ್ತು ನೋಟಿಫಿಕೇಶನ್ PDF ಹೇಗೆ ಸಿಗುತ್ತೆ?..?

 ಈ ಮೇಲ್ಗಡೆ ತಿಳಿಸಿರುವ ಹಾಗೆ ಇಂತಹ ಹಲವಾರು ಪ್ರಶ್ನೆಗಳು ಅಭ್ಯರ್ಥಿಗಳಿಗೆ ಹುಟ್ಟಿಕೊಳ್ಳುತ್ತೆ ಹೀಗಾಗಿ ಅಭ್ಯರ್ಥಿಗಳಿಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ಆರಾಮಾಗಿ ಅರ್ಜಿ ಸಲ್ಲಿಸಬಹುದು ಹಾಗೆ ಬೇರೆ ಮಾಹಿತಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಇದೇ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇರುತ್ತೆ.

ನೋಡಿ ಈ ಒಂದು ಹುದ್ದೆಗಳು ಇರುವಂತದ್ದು ಮಧ್ಯಪ್ರದೇಶದಲ್ಲಿ ಆದರೆ ಗಮನ ಬರಲಿ ಕರ್ನಾಟಕದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು ನಿಮಗೆಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ನೇಮಕಾತಿಯ ಸಂಕ್ಷಿಪ್ತ ಮಾಹಿತಿ:

  • ನೇಮಕಾತಿ ಮಂಡಳಿ: ಮಧ್ಯಪ್ರದೇಶ ಉದ್ಯೋಗಿಗಳ ಆಯ್ಕೆ ಮಂಡಳಿ (MPESB)
  • ಸಂಬಂಧಪಟ್ಟ ಇಲಾಖೆ: ಮಧ್ಯಪ್ರದೇಶ ಅರಣ್ಯ ಇಲಾಖೆ ಮತ್ತು ಕಾರಾಗೃಹ ಇಲಾಖೆ
  • ಹುದ್ದೆಗಳ ಹೆಸರು: ಫಾರೆಸ್ಟ್ ಗಾರ್ಡ್, ಜೈಲ್ ಪ್ರಹರಿ, ಫೀಲ್ಡ್ ಗಾರ್ಡ್
  • ಒಟ್ಟು ಹುದ್ದೆಗಳು: 1679
  • ಉದ್ಯೋಗ ಸ್ಥಳ: ಮಧ್ಯಪ್ರದೇಶ
  • ವೇತನ ಶ್ರೇಣಿ: ₹19,500 – ₹62,000 (7ನೇ ವೇತನ ಆಯೋಗದ ಪ್ರಕಾರ)
  • ಅರ್ಜಿ ವಿಧಾನ: ಆನ್‌ಲೈನ್

ಹುದ್ದೆಗಳ ವಿವರ:

 Vacancy Details ಅನ್

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ವನರಕ್ಷಕ (Vanrakshak)728
ಕ್ಷೇತ್ರ ರಕ್ಷಕ (Kshetra Rakshak)169
ಜೈಲು ಪ್ರಹರಿ (Jail Prahari)757
ಜೈಲು ಅಧೀಕ್ಷಕ (Jail Superintendent)25
ಒಟ್ಟು ಹುದ್ದೆಗಳು1679

ಶೈಕ್ಷಣಿಕ ಅರ್ಹತೆ

ಫಾರೆಸ್ಟ್ ಗಾರ್ಡ್ / ಫೀಲ್ಡ್ ಗಾರ್ಡ್

  • ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.

ಜೈಲ್ ಪ್ರಹರಿ

  • 12ನೇ ತರಗತಿ (PUC) ಅಥವಾ 11ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 33 ವರ್ಷ

ವಿಶೇಷ ಸೂಚನೆ:
ಮಧ್ಯಪ್ರದೇಶದ ಮೂಲ ನಿವಾಸಿಗಳಿಗೆ ಮಾತ್ರ SC/ST/OBC ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.
ಕರ್ನಾಟಕ ಮತ್ತು ಇತರ ರಾಜ್ಯಗಳ ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಇರುವುದಿಲ್ಲ.

ದೈಹಿಕ ಅರ್ಹತಾ ಮಾನದಂಡಗಳ

ಪುರುಷ ಅಭ್ಯರ್ಥಿಗಳು

ಈ ಹುದ್ದೆಗಳು ಯೂನಿಫಾರ್ಮ್ ಸೇವೆಗೆ ಸೇರಿರುವುದರಿಂದ ದೈಹಿಕ ಸಾಮರ್ಥ್ಯ  ಅಗತ್ಯವಾಗಿರುತ್ತೆ..

  • ಎತ್ತರ: ಕನಿಷ್ಠ 163 ಸೆಂ.ಮೀ
  • ಎದೆ: 79 ಸೆಂ.ಮೀ + 5 ಸೆಂ.ಮೀ ವಿಸ್ತರಣೆ
  • ಓಟ/ನಡೆ: 25 ಕಿ.ಮೀ – 4 ಗಂಟೆಯಲ್ಲಿ (ಫಾರೆಸ್ಟ್ ಗಾರ್ಡ್)

ಮಹಿಳಾ ಅಭ್ಯರ್ಥಿಗಳು

  • ಎತ್ತರ: ಕನಿಷ್ಠ 150 ಸೆಂ.ಮೀ
  • ನಡೆ: 14 ಕಿ.ಮೀ – 4 ಗಂಟೆಯಲ್ಲಿ

ಜೈಲ್ ಪ್ರಹರಿ ಹುದ್ದೆಗೆ 800 ಮೀಟರ್ ಓಟ ಮತ್ತು ಶಾಟ್‌ಪುಟ್ ಪರೀಕ್ಷೆ ಇರಲಿದೆ.

ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೇ? – ಸಂಪೂರ್ಣ ಸ್ಪಷ್ಟನೆ..!

ಹೌದು. ಕರ್ನಾಟಕದ ಅಭ್ಯರ್ಥಿಗಳು ಖಂಡಿತವಾಗಿಯೂ ಅರ್ಜಿ ಸಲ್ಲಿಸಬಹುದು. ಆದರೆ ಕೆಲವು ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ:

1️⃣ ಮೀಸಲಾತಿ ಸೌಲಭ್ಯ ಇಲ್ಲ

ಕರ್ನಾಟಕದ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗ (General / UR) ಎಂದು ಮಾತ್ರ ಪರಿಗಣಿಸಲಾಗುತ್ತದೆ. SC/ST/OBC ಮೀಸಲಾತಿ ಅನ್ವಯಿಸುವುದಿಲ್ಲ.

2️⃣ ವಯೋಮಿತಿ ಸಡಿಲಿಕೆ ಇಲ್ಲ

ಗರಿಷ್ಠ ವಯಸ್ಸು 33 ವರ್ಷ ಮೀರಬಾರದು.

3️⃣ ಭಾಷಾ ಜ್ಞಾನ – ಹಿಂದಿ ಅಗತ್ಯ

ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಯುತ್ತದೆ. ಮಧ್ಯಪ್ರದೇಶದಲ್ಲಿ ಕೆಲಸ ಮಾಡಲು ಹಿಂದಿ ಭಾಷೆಯ ಮೂಲ ಜ್ಞಾನ ಅಗತ್ಯ.

4️⃣ ಪರೀಕ್ಷಾ ಕೇಂದ್ರಗಳು ಮಧ್ಯಪ್ರದೇಶದಲ್ಲೇ

ಎಲ್ಲ ಪರೀಕ್ಷೆಗಳು ಭೋಪಾಲ್, ಇಂದೋರ್, ಜಬಲ್ಪುರ್, ಗ್ವಾಲಿಯರ್ ಮುಂತಾದ ನಗರಗಳಲ್ಲಿ ನಡೆಯುತ್ತವೆ. ಪ್ರಯಾಣ ವೆಚ್ಚ ಅಭ್ಯರ್ಥಿಯದೇ.

5️⃣ MP Rojgar Portal ನೋಂದಣಿ ಕಡ್ಡಾಯ

ಅರ್ಜಿ ಸಲ್ಲಿಸುವ ಮೊದಲು ಮಧ್ಯಪ್ರದೇಶ ಉದ್ಯೋಗ ಪೋರ್ಟಲ್‌ನಲ್ಲಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ..?

ಹಂತ 1: ಲಿಖಿತ ಪರೀಕ್ಷೆ (CBT) – 100 ಅಂಕಗಳು

ವಿಷಯಗಳು:

  • ಸಾಮಾನ್ಯ ಜ್ಞಾನ
  • ಸಾಮಾನ್ಯ ಹಿಂದಿ
  • ಸಾಮಾನ್ಯ ಇಂಗ್ಲಿಷ್
  • ಗಣಿತ
  • ಸಾಮಾನ್ಯ ವಿಜ್ಞಾನ

ಹಂತ 2: ದೈಹಿಕ ಅಳತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ (PST & PET)

ಹಂತ 3: ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ

ವರ್ಗಶುಲ್ಕ
ಸಾಮಾನ್ಯ (ಕರ್ನಾಟಕ ಅಭ್ಯರ್ಥಿಗಳು)₹500
MP Online ಪೋರ್ಟಲ್ ಶುಲ್ಕ₹60

ಅರ್ಜಿ ಸಲ್ಲಿಸುವ ವಿಧಾನ..?

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. MP Rojgar Portal ನಲ್ಲಿ ನೋಂದಣಿ
  3. ಲಾಗಿನ್ ಮಾಡಿ ಅರ್ಜಿ ಫಾರ್ಮ್ ಭರ್ತಿ
  4. ದಾಖಲೆ ಅಪ್‌ಲೋಡ್
  5. ಶುಲ್ಕ ಪಾವತಿ
  6. ಫಾರ್ಮ್ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • SSLC / PUC ಅಂಕಪಟ್ಟಿ
  • ಜನ್ಮ ದಿನಾಂಕ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ಗುರುತಿನ ಚೀಟಿ
  • ಇನ್ನು ಹೆಚ್ಚಿನ ದಾಖಲೆ ಕೇಳಿದರೆ ಒದಗಿಸಬೇಕು.

ಪರೀಕ್ಷಾ ತಯಾರಿ ಸಲಹೆಗಳು:

  • ಪ್ರತಿದಿನ ಸಾಮಾನ್ಯ ಜ್ಞಾನ ಅಭ್ಯಾಸ
  • ಹಿಂದಿ ಭಾಷೆಯ ಓದು-ಬರಹ ಅಭ್ಯಾಸ
  • ಗಣಿತ ಮತ್ತು ವಿಜ್ಞಾನ ಮೂಲಭೂತ ತಯಾರಿ
  • ದೈಹಿಕ ಸಾಮರ್ಥ್ಯ ಹೆಚ್ಚಿಸಲು ದಿನನಿತ್ಯ ವ್ಯಾಯಾಮ

ಅರ್ಜಿ ಪ್ರಮುಕ ದಿನಾಂಕ:

  • ಪ್ರಾರಂಭ 27 ಫೆಬ್ರುವರಿ 2026
  • ಕೊನೆ ದಿನಾಂಕ 14 ಮಾರ್ಚ್ 2026.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

ನಮ್ಮ ಕೊನೆಯ ಮಾತು:

MPESB ಫಾರೆಸ್ಟ್ ಗಾರ್ಡ್ ಮತ್ತು ಜೈಲ್ ಸಿಬ್ಬಂದಿ ನೇಮಕಾತಿ 2026 ಕರ್ನಾಟಕದ ಅಭ್ಯರ್ಥಿಗಳಿಗೆ ಮಹತ್ವದ ಸರ್ಕಾರಿ ಉದ್ಯೋಗ ಅವಕಾಶವಾಗಿದೆ ಅಂತ ಹೇಳುತ್ತಾ ನೀವೇನಾದರೂ 10ನೇ ಹಾಗೂ 12ನೇ ತರಗತಿ ಉತ್ತೀರ್ಣರಾದ  ಯುವಕರಾಗಿದ್ದರೆ ಅಥವಾ ಯುವತಿ ರಾಗಿದ್ದರೆ ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಸ್ಪರ್ಧೆ ಹೆಚ್ಚು ಇರುವುದರಿಂದ ಮುಂಚಿತ ತಯಾರಿ ಮತ್ತು ಸಮಯಕ್ಕೆ ಅರ್ಜಿ ಸಲ್ಲಿಸುವುದು ಅತ್ಯಗತ್ಯ.

ಸಾಮಾನ್ಯ ಪ್ರಶ್ನೆಗಳು FAQ:

1. ಕರ್ನಾಟಕದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆಯಾ?
ಹೌದು, ಸಂಪೂರ್ಣ ಅವಕಾಶ ಇದೆ.

2. ಮೀಸಲಾತಿ ಸೌಲಭ್ಯ ಸಿಗುತ್ತದೆಯಾ?
ಇಲ್ಲ.

3. ಪರೀಕ್ಷೆ ಯಾವ ಭಾಷೆಯಲ್ಲಿ?
ಹಿಂದಿ ಮತ್ತು ಇಂಗ್ಲಿಷ್.

4. ಕನಿಷ್ಠ ವಿದ್ಯಾರ್ಹತೆ ಏನು?
10ನೇ ಮತ್ತು 12ನೇ ತರಗತಿ.

5. ಮಹಿಳೆಯರು ಅರ್ಜಿ ಸಲ್ಲಿಸಬಹುದೇ?
ಹೌದು.

6. ವಯೋಮಿತಿ ಎಷ್ಟು?
18 ರಿಂದ 33 ವರ್ಷ.

7. ಉದ್ಯೋಗ ಸ್ಥಳ ಎಲ್ಲಿದೆ?
ಮಧ್ಯಪ್ರದೇಶ.

8. ವೇತನ ಎಷ್ಟು?
₹19,500 ರಿಂದ ₹62,000.

9. ಪರೀಕ್ಷೆ ಆನ್‌ಲೈನ್ ಅಥವಾ ಆಫ್‌ಲೈನ್?
ಕಂಪ್ಯೂಟರ್ ಆಧಾರಿತ.

10. ಸರ್ಕಾರಿ ಉದ್ಯೋಗ ಭದ್ರತೆ ಇದೆಯೇ?
ಹೌದು, ಸಂಪೂರ್ಣ ಭದ್ರತೆ.

Leave a Comment

WhatsApp Logo Join WhatsApp Group!