ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ 2026.
ನೀವೇನಾದ್ರೂ ಮೊಬೈಲ್ ಕ್ಯಾಂಟೀನ್ ಆರಂಭಿಸಬೇಕು ಅಥವಾ ಮೊಬೈಲ್ ಕ್ಯಾಂಟೀನ್ ಆರಂಭಿಸಬೇಕಂತ ನಿಮ್ಮ ತಲೆಯಲ್ಲಿ ಯೋಜನೆ ಇದೆಯೇ ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಅಂತ ಹೇಳಬಹುದು.
ಏಕೆಂದರೆ ಸರ್ಕಾರವೇ ನೀಡುತ್ತಿದೆ 5 ಲಕ್ಷಗಳವರೆಗೆ ಮೊಬೈಲ್ ಕ್ಯಾಂಟೀನ್ ಹಾಕಲು ಸಬ್ಸಿಡಿ.
ನಿಮಗೆಲ್ಲ ಇಂದಿನ ಈ ಯುಗದಲ್ಲಿ ತಿಳಿದಿರಬಹುದು ಇಂದಿನ ದಿನಗಳಲ್ಲಿ ನಿರುದ್ಯೋಗವು ಯುವಜನತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ಅವಕಾಶಗಳು ಸೀಮಿತವಾಗಿರುವುದರಿಂದ ಅನೇಕ ಯುವಕ-ಯುವತಿಯರು ಸ್ವ ಉದ್ಯೋಗದ ಕಡೆ ಗಮನ ಹರಿಸುತ್ತಿದ್ದಾರೆ. ಈ ಹಿನ್ನೆಲೆ ಯಲ್ಲಿ, ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.
ಅವುಗಳಲ್ಲಿ ಪ್ರಮುಖವಾದ ಯೋಜನೆಯೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ. ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಫುಡ್ ಟ್ರಕ್ ಅಥವಾ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದಿಂದ ಆರ್ಥಿಕ ನೆರವು ಮತ್ತು ಉಚಿತ ತರಬೇತಿ ನೀಡಲಾಗುತ್ತದೆ.
ಮೊಬೈಲ್ ಕ್ಯಾಂಟೀನ್ ಯೋಜನೆಯ ಉದ್ದೇಶ:

ಈ ಯೋಜನೆಯ ಮುಖ್ಯ ಉದ್ದೇಶಗಳು ಈ ಕೆಳಗಿನಂತಿದೆ ಗಮನಿಸಿ:
- ನಿರುದ್ಯೋಗಿ ಯುವಕರಿಗೆ ಸ್ವ ಉದ್ಯೋಗದ ಅವಕಾಶ ಕಲ್ಪಿಸುವುದು
- ಆರ್ಥಿಕವಾಗಿ ಹಿಂದುಳಿದ ವರ್ಗದ ಸಬಲೀಕರಣ
- ಪ್ರವಾಸಿ ತಾಣಗಳಲ್ಲಿ ಶುದ್ಧ ಮತ್ತು ಗುಣಮಟ್ಟದ ಆಹಾರ ಒದಗಿಸುವುದು
- ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು
ಮೊಬೈಲ್ ಕ್ಯಾಂಟೀನ್ ಎಂದರೇನು..?
ಮೊಬೈಲ್ ಕ್ಯಾಂಟೀನ್ ಎಂದರೆ ಒಂದು ವಾಹನದ ಮೇಲೆ ಅಡುಗೆ ವ್ಯವಸ್ಥೆಯನ್ನು ಅಳವಡಿಸಿ, ವಿವಿಧ ಸ್ಥಳಗಳಿಗೆ ತೆರಳಿ ಆಹಾರ ಮಾರಾಟ ಮಾಡುವ ವ್ಯವಸ್ಥೆಗೆ ಮೊಬೈಲ್ ಕ್ಯಾಂಟೀನ್ ಅಂತ ಕರೆಯುತ್ತೇವೆ. ಇದನ್ನು ಸಾಮಾನ್ಯವಾಗಿ ಫುಡ್ ಟ್ರಕ್ ಎಂದು ಕರೆಯಲಾಗುತ್ತದೆ.
ಇದರಿಂದ ಆಗುವ ಲಾಭಗಳೇನು:
- ಕಡಿಮೆ ಬಂಡವಾಳದಲ್ಲಿ ವ್ಯವಹಾರ ಆರಂಭಿಸಬಹುದು
- ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ವ್ಯಾಪಾರ ಮಾಡಬಹುದು
- ಸ್ಥಳ ಬದಲಾಯಿಸಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು
ಸರ್ಕಾರ ನೀಡುವ ಸಬ್ಸಿಡಿ ಮೊತ್ತ ಹಾಗೂ ವಿವರ:
ಈ ಯೋಜನೆಯಡಿ ಸರ್ಕಾರದಿಂದ:
- ಒಟ್ಟು ವೆಚ್ಚದ 70% ವರೆಗೆ ಸಬ್ಸಿಡಿ
- ಗರಿಷ್ಠ ₹5,00,000 ವರೆಗೆ ಆರ್ಥಿಕ ನೆರವು
ಉದಾಹರಣೆಗೆ, ಒಟ್ಟು ವೆಚ್ಚ ₹7 ಲಕ್ಷವಾದರೆ, ಸರ್ಕಾರದಿಂದ ₹4.9 ಲಕ್ಷ ಸಬ್ಸಿಡಿ ಸಿಗುತ್ತದೆ. ಉಳಿದ ಮೊತ್ತವನ್ನು ಅಭ್ಯರ್ಥಿಯೇ ಭರಿಸಬೇಕು.
ಉಚಿತ ತರಬೇತಿ ವ್ಯವಸ್ಥೆ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ.
ತರಬೇತಿಯಲ್ಲಿ ಕಲಿಸುವ ವಿಷಯಗಳು:

- ಆಹಾರ ತಯಾರಿಕೆ
- ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ
- ಗ್ರಾಹಕ ಸೇವೆ
- ಲೆಕ್ಕಪತ್ರ ನಿರ್ವಹಣೆ
- ಮಾರಾಟ ತಂತ್ರಗಳು
ಅರ್ಹತಾ ಮಾನದಂಡಗಳು:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿರಬೇಕು
- ವಯಸ್ಸು: 20 ರಿಂದ 45 ವರ್ಷ
- ಕನಿಷ್ಠ SSLC ಪಾಸ್
- ಮಾನ್ಯವಾದ ಲಘು ವಾಹನ ಚಾಲನಾ ಪರವಾನಗಿ (LMV License)
- ವಾರ್ಷಿಕ ಆದಾಯ:
- ಗ್ರಾಮೀಣ: ₹1.50 ಲಕ್ಷ ಒಳಗೆ
- ನಗರ: ₹2 ಲಕ್ಷ ಒಳಗೆ
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಈ ದಾಖಲೆಗಳು ಬೇಕಾಗುತ್ತವೆ:
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- SSLC ಅಂಕಪಟ್ಟಿ
- ಚಾಲನಾ ಪರವಾನಗಿ
- ಪಾಸ್‌ಪೋರ್ಟ್ ಸೈಜ್ ಫೋಟೋ
- ಶಪಥ ಪತ್ರ (Affidavit)
- ಯೋಜನಾ ವರದಿ (Project Report)
ಅರ್ಜಿ ಸಲ್ಲಿಸುವ ವಿಧಾನ..?
ಈ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆ ಇಲ್ಲ. ಅಭ್ಯರ್ಥಿಗಳು ತಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ನೇರವಾಗಿ ಭೇಟಿ ನೀಡಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಆಗುವ ಆದಾಯ:
ಮೊಬೈಲ್ ಕ್ಯಾಂಟೀನ್ ವ್ಯವಹಾರದಿಂದ ಸರಾಸರಿ:
- ತಿಂಗಳಿಗೆ ಮಾರಾಟ: ₹80,000 – ₹1,50,000
- ವೆಚ್ಚ: ₹40,000 – ₹60,000
- ಶುದ್ಧ ಲಾಭ: ₹30,000 – ₹70,000
ಸರಿಯಾದ ಸ್ಥಳ, ಗುಣಮಟ್ಟದ ಆಹಾರ ಮತ್ತು ಉತ್ತಮ ಸೇವೆಯಿಂದ ಇನ್ನಷ್ಟು ಆದಾಯ ಗಳಿಸಬಹುದು.
ನಮ್ಮ ಕೊನೆಯ ಮಾತು:
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ ನಿರುದ್ಯೋಗಿ ಯುವಕರಿಗೆ ಒಂದು ಅತ್ಯುತ್ತಮ ಅವಕಾಶ ತಂದಿದೆ ಅಂತ ಹೇಳಬಹುದು ಸರ್ಕಾರದಿಂದ ಸಿಗುವ ಆರ್ಥಿಕ ನೆರವು ಮತ್ತು ಉಚಿತ ತರಬೇತಿಯಿಂದ ಸ್ವ ಉದ್ಯೋಗ ಆರಂಭಿಸಿ ಸ್ಥಿರ ಆದಾಯ ಗಳಿಸಬಹುದು. ನಿಮಗೇನಾದರೂ ಆಸಕ್ತಿ ಇದ್ದರೆ ಹಾಗೆ ಅರ್ಹರಾಗಿದ್ದರೆ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು FAQ:
1. ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ ಎಂದರೇನು?
ಸ್ವ ಉದ್ಯೋಗ ಆರಂಭಿಸಲು SC/ST ಅಭ್ಯರ್ಥಿಗಳಿಗೆ ಸರ್ಕಾರದಿಂದ ಹಣಕಾಸು ನೆರವು ನೀಡುವ ಯೋಜನೆ.
2. ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
SC ಅಥವಾ ST ವರ್ಗಕ್ಕೆ ಸೇರಿದ 20–45 ವರ್ಷದೊಳಗಿನ SSLC ಪಾಸ್ ಅಭ್ಯರ್ಥಿಗಳು.
3. ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತದೆ?
70% ವರೆಗೆ ಅಥವಾ ಗರಿಷ್ಠ ₹5 ಲಕ್ಷ.
4. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಕೇವಲ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
5. ಮಹಿಳೆಯರು ಅರ್ಜಿ ಸಲ್ಲಿಸಬಹುದೇ?
ಹೌದು, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇದೆ.