ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವಂತ ಅನ್ನಭಾಗ್ಯ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬದುಕಿಗೆ ದೊಡ್ಡ ಆಸರೆಯಾಗಿದೆ.
ಲಕ್ಷಾಂತರ ಕುಟುಂಬಗಳಿಗೆ ಪ್ರತಿ ತಿಂಗಳು ಉಚಿತ ಅಥವಾ ಅತಿ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ ನಿಮಗೂ ಸಹ ತಿಳಿದಿರಬಹುದು.
ಆದರೆ, ಸರ್ಕಾರ ನೀಡುವ ಈ ಸೌಲಭ್ಯವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ.
ಮನೆಯ ಬಳಕೆಗೆ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ ಅಂದರೆ ನೀವು ರೇಷನ್ ಅಂಗಡಿಗಳಲ್ಲಿ ರೇಷನ್ ಪಡೆದುಕೊಂಡು ಕಾಳ ಸಂತೆಯಲ್ಲಿ ಅದನ್ನು ಮಾಡುತ್ತೀರಿ. ಇದೆ ಬಹುದೊಡ್ಡ ಕಾರಣವಾಗಿದೆ.
ಗಮನಿಸಿ ನೀವೇನಾದರೂ ಪಡಿತರ ಚೀಟಿದಾರರಾಗಿದ್ದು, ಸರ್ಕಾರ ನೀಡುವ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದರೆ, ಇಂದೇ ಎಚ್ಚೆತ್ತುಕೊಳ್ಳಿ. ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಶಾಶ್ವತವಾಗಿ ರದ್ದಾಗುವ ಸಾಧ್ಯತೆ ಇದೆ. ಇದು ಕೇವಲ ಎಚ್ಚರಿಕೆಯಲ್ಲ, ಕಾನೂನು ಪ್ರಕಾರ ಕೈಗೊಳ್ಳುವ ಕಠಿಣ ಕ್ರಮವಾಗಿದೆ.
ಸರ್ಕಾರದ ಖಡಕ್ ಎಚ್ಚರಿಕೆ: ಅಕ್ಕಿ ಮಾರಿದರೆ ಕಾದಿದೆ ಬಹುದೊಡ್ಡ ಕಂಟಕ..!

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಬಡ ಕುಟುಂಬಗಳಿಗೆ ನೀಡಲಾಗುವ ಆಹಾರ ಧಾನ್ಯವನ್ನು ಮಾರಾಟ ಮಾಡುವುದು, ಅಕ್ರಮವಾಗಿ ಸಂಗ್ರಹಿಸುವುದು ಅಥವಾ ಬೇರೆ ಉದ್ದೇಶಕ್ಕೆ ಬಳಸುವುದು ಕಾನೂನು ಬಾಹಿರವಾಗಿದೆ . ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ 2026ರ ಫೆಬ್ರವರಿಯಿಂದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.
ಇತ್ತೀಚಿನ ದಿನಗಳಲ್ಲಿ ಪಡಿತರ ಅಕ್ಕಿಯನ್ನು ಖಾಸಗಿ ವ್ಯಾಪಾರಿಗಳಿಗೆ ಅಥವಾ ಹೋಟೆಲ್ಗಳಿಗೆ ಮಾರಾಟ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಅರ್ಹ ಬಡ ಕುಟುಂಬಗಳಿಗೆ ಸಿಗಬೇಕಾದ ಅಕ್ಕಿ ಮಾರುಕಟ್ಟೆಗೆ ಹೋಗುತ್ತಿದ್ದು, ನಿಜವಾದ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ ಒಂದು ಬಾರಿ ಯೋಚನೆ ಮಾಡಿ ನೋಡಿದರೆ ನೂರಕ್ಕೆ ನೂರಕ್ಕೆ ಸರಿ ಅನಿಸಿತು ನೋಡಿ ಬಡವರಿಗೆ ಸಿಗಬೇಕಾದದ್ದು ಬಡವರಿಗೆ ಸಿಗಬೇಕು.
ನಿಯಮ ಉಲ್ಲಂಘನೆ ಮಾಡಿದರೆ ಏನಾಗುತ್ತದೆ?
ಇಲ್ಲಿ ಗಮನಿಸಿ ನೀವು ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ಸಾಬೀತಾದರೆ, ಈ ಕೆಳಗಿನ ಶಿಕ್ಷೆಗಳು ಕಾದಿವೆ:
1. ಕಾರ್ಡ್ ಅಮಾನತು
ನಿಮ್ಮ ರೇಷನ್ ಕಾರ್ಡ್ ಅನ್ನು ಕನಿಷ್ಠ 6 ತಿಂಗಳ ಕಾಲ ತಕ್ಷಣವೇ ಅಮಾನತು ಮಾಡಲಾಗುತ್ತದೆ. ಈ ಅವಧಿಯಲ್ಲಿ ನೀವು ಯಾವುದೇ ಪಡಿತರ ಪಡೆಯಲು ಸಾಧ್ಯವಾಗುವುದಿಲ್ಲ. ಅಂದರೆ 6 ತಿಂಗಳವರೆಗೆ ರೇಷನ್ ಪಡೆಯಲು ಬರುವುದಿಲ್ಲ.
2. ಭಾರೀ ದಂಡ
ನೀವು ಮಾರಾಟ ಮಾಡಿದ ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ಹೊರಗಿನ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುತ್ತದೆ. ಇದು ಸಾವಿರಾರು ರೂಪಾಯಿಗಳವರೆಗೆ ಹೋಗಬಹುದು.
3. ಕ್ರಿಮಿನಲ್ ಕೇಸ್ ಹಾಕಲಾಗುತ್ತೆ
ದೊಡ್ಡ ಮಟ್ಟದಲ್ಲಿ ಅಕ್ರಮ ವ್ಯವಹಾರ ನಡೆಸಿದ್ದೆ ಆದಲ್ಲಿ, ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಜೈಲು ಶಿಕ್ಷೆಯ ಸಾಧ್ಯತೆಯೂ ಇರುತ್ತದೆ.
ಫೆಬ್ರವರಿ 2026: ಯಾರಿಗೆ ಎಷ್ಟು ಅಕ್ಕಿ ಸಿಗಲಿದೆ?
ಸರ್ಕಾರ ಒಂದೆಡೆ ಕಠಿಣ ಕ್ರಮ ಕೈಗೊಂಡಿದ್ದರೆ, ಮತ್ತೊಂದೆಡೆ ಅರ್ಹ ಕುಟುಂಬಗಳಿಗೆ ಉತ್ತಮ ವ್ಯವಸ್ಥೆಯನ್ನೂ ಮಾಡಿದೆ. 2026ರ ಫೆಬ್ರವರಿ ತಿಂಗಳಿನಲ್ಲಿ ಪಡಿತರ ಹಂಚಿಕೆ ಈ ರೀತಿ ಇರಲಿದೆ:
ಅಂತ್ಯೋದಯ (AAY) ಕಾರ್ಡ್
ಪ್ರತಿ ಕಾರ್ಡ್ಗೆ ಕೇಂದ್ರ ಸರ್ಕಾರದಿಂದ 35 ಕೆಜಿ ಸಾರವರ್ಧಿತ ಅಕ್ಕಿ ನೀಡಲಾಗುತ್ತದೆ.
ಬಿಪಿಎಲ್ (PHH) ಕಾರ್ಡ್
ಕಾರ್ಡ್ನಲ್ಲಿರುವ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಸಾರವರ್ಧಿತ ಅಕ್ಕಿ ಸಿಗುತ್ತದೆ.
ಅನ್ನಭಾಗ್ಯದ ‘ಹೆಚ್ಚುವರಿ’ ಅಕ್ಕಿ ಯಾರಿಗೆ..?
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ, 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಅಕ್ಕಿ ನೀಡಲಾಗುತ್ತದೆ. ಅಂದರೆ, ಪ್ರತಿ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಉಚಿತವಾಗಿ ದೊರೆಯುತ್ತದೆ.
ಗಮನಿಸಿ: ನಿಮ್ಮ ಕಾರ್ಡ್ನಲ್ಲಿ 1, 2 ಅಥವಾ 3 ಸದಸ್ಯರಿದ್ದರೆ, ಈ ಹೆಚ್ಚುವರಿ ಅಕ್ಕಿ ನಿಮಗೆ ಅನ್ವಯಿಸುವುದಿಲ್ಲ.
ಉದಾಹರಣೆ: ನೋಡಿ ಈ ಕೆಳಗಿನಂದಿದೆ ಗಮನಿಸಿ.
- ಒಂದು ಬಿಪಿಎಲ್ ಕಾರ್ಡ್ನಲ್ಲಿ 4 ಜನರಿದ್ದರೆ:
ಕೇಂದ್ರದಿಂದ 20 ಕೆಜಿ + ರಾಜ್ಯದಿಂದ 20 ಕೆಜಿ = ಒಟ್ಟು 40 ಕೆಜಿ ಅಕ್ಕಿ. - ಅದೇ ಕಾರ್ಡ್ನಲ್ಲಿ 3 ಜನರಿದ್ದರೆ:
ಕೇವಲ 15 ಕೆಜಿ ಮಾತ್ರ ಸಿಗುತ್ತದೆ.
ಪಡಿತರ ಅಕ್ಕಿಯ ಗುಣಮಟ್ಟ: ಪ್ಲಾಸ್ಟಿಕ್ ಅಕ್ಕಿ ಅಲ್ಲ!
ನಿಮಗೆಲ್ಲ ತಿಳಿದಿರಬಹುದು ಇತ್ತೀಚೆಗೆ ಕೆಲವರು ಪಡಿತರ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸಂಪೂರ್ಣ ತಪ್ಪು. ಸರ್ಕಾರ ನೀಡುತ್ತಿರುವುದು ಸಾರವರ್ಧಿತ (Fortified) ಅಕ್ಕಿ. ಇದರಲ್ಲಿ ಕಬ್ಬಿಣಾಂಶ, ವಿಟಮಿನ್ ಮತ್ತು ಪೋಷಕಾಂಶಗಳನ್ನು ಸೇರಿಸಲಾಗಿದ್ದು, ಜನರ ಆರೋಗ್ಯ ಸುಧಾರಣೆಯ ಉದ್ದೇಶದಿಂದ ನೀಡಲಾಗುತ್ತಿದೆ. ಇದು ಸೇವನೆಗೆ ಸಂಪೂರ್ಣ ಸುರಕ್ಷಿತ.
ಎಲ್ಲಿ ಬೇಕಾದರೂ ರೇಷನ್ ಪಡೆಯುವ ಸೌಲಭ್ಯ ಇದೆ:
‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯಡಿ, ನೀವು ರಾಜ್ಯದ ಅಥವಾ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ನಿಮ್ಮ ಪಡಿತರ ಪಡೆಯಬಹುದು. ಕೆಲಸ, ವಿದ್ಯಾಭ್ಯಾಸ ಅಥವಾ ಬೇರೆ ಕಾರಣಕ್ಕಾಗಿ ಊರಿಗೆ ಹೋಗಿದ್ದರೂ, ಅಲ್ಲಿಯೇ ನಿಮ್ಮ ರೇಷನ್ ಪಡೆಯುವ ಅವಕಾಶ ಇರುತ್ತದೆ ಇದು ಬಹಳ ಜನಕ್ಕೆ ಗೊತ್ತಿರಲ್ಲ.
ಪಡಿತರೆ ಗಮನಿಸಿ ಅನ್ಯಾಯವಾದರೆ ಸುಮ್ಮನಿರಬೇಡಿ!

ನ್ಯಾಯಬೆಲೆ ಅಂಗಡಿಯವರು ಅಕ್ಕಿ ಕಡಿಮೆ ನೀಡಿದರೆ, ಹಣ ಕೇಳಿದರೆ ಅಥವಾ ಬೇರೆ ತೊಂದರೆ ಕೊಟ್ಟರೆ ತಕ್ಷಣ ದೂರು ನೀಡಿ.
- ಟೋಲ್ ಫ್ರೀ ಸಹಾಯವಾಣಿ: 1967
- ನೇರ ದೂರು: ನಿಮ್ಮ ತಾಲೂಕು ತಹಶೀಲ್ದಾರ್ ಕಚೇರಿ ಅಥವಾ ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ.
ನಮ್ಮ ಕೊನೆಯ ಮಾತು:
ಸರ್ಕಾರದ ಯೋಜನೆಗಳು ಬಡವರ ಹಸಿವು ನೀಗಿಸಲು ಮತ್ತು ಬದುಕಿಗೆ ನೆರವಾಗಲು ರೂಪುಗೊಂಡಿವೆ. ಇವುಗಳನ್ನು ದುರುಪಯೋಗಪಡಿಸಿಕೊಂಡು ಕಾನೂನು ಸಮಸ್ಯೆಗೆ ಸಿಲುಕಿಕೊಳ್ಳುವುದು ಬುದ್ಧಿವಂತಿಕೆಯಲ್ಲ. ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ, ಮನೆಯ ಬಳಕೆಗೆ ಮಾತ್ರ ಉಪಯೋಗಿಸಿ ಅಂತ ಹೇಳುತ್ತಾ ಇಂದಿನ ಒಂದು ಲೇಖನ ಇಲ್ಲಿಗೆ ಕೊನೆಗೊಳ್ಳುತ್ತದೆ.
FAQ:
1. ಪಡಿತರ ಅಕ್ಕಿ ಮಾರಾಟ ಮಾಡಿದರೆ ರೇಷನ್ ಕಾರ್ಡ್ ಶಾಶ್ವತ ರದ್ದು ಆಗುತ್ತದೆಯೇ?
ಹೌದು. ಮರುಮರು ನಿಯಮ ಉಲ್ಲಂಘಿಸಿದರೆ ಅಥವಾ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದ್ದರೆ, ರೇಷನ್ ಕಾರ್ಡ್ ಶಾಶ್ವತವಾಗಿ ರದ್ದಾಗುವ ಸಾಧ್ಯತೆ ಇದೆ.
2. ಎಷ್ಟು ಅಕ್ಕಿ ಸಿಗುತ್ತದೆ ಎಂಬುದು ಹೇಗೆ ಲೆಕ್ಕ ಹಾಕುತ್ತಾರೆ?
ಕಾರ್ಡ್ನಲ್ಲಿ ಇರುವ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಸಿಗುತ್ತದೆ.
3. 3 ಸದಸ್ಯರ ಕುಟುಂಬಕ್ಕೆ ಹೆಚ್ಚುವರಿ ಅಕ್ಕಿ ಸಿಗುತ್ತದೆಯೇ?
ಇಲ್ಲ. 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ ಮಾತ್ರ ಹೆಚ್ಚುವರಿ ಅಕ್ಕಿ ಸಿಗುತ್ತದೆ.
4. ಪಡಿತರ ಅಂಗಡಿಯಲ್ಲಿ ಹಣ ಕೇಳಿದರೆ ಏನು ಮಾಡಬೇಕು?
ತಕ್ಷಣ 1967 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಬೇಕು.
5. ಸಾರವರ್ಧಿತ ಅಕ್ಕಿ ಆರೋಗ್ಯಕ್ಕೆ ಸುರಕ್ಷಿತವೇ?
ಹೌದು. ಇದರಲ್ಲಿ ಪೋಷಕಾಂಶಗಳನ್ನು ಸೇರಿಸಲಾಗಿದ್ದು, ಇದು ಆರೋಗ್ಯಕ್ಕೆ ಲಾಭಕರವಾಗುತ್ತದೆ ಮತ್ತು ಸೇವನೆಗೆ ಸಂಪೂರ್ಣ ಸುರಕ್ಷಿತ.