ಅಗ್ನಿವೀರ್ ನೇಮಕಾತಿ 2026.!25,000+ ಬೃಹತ್ ಹುದ್ದೆಗಳ ನೇಮಕಾತಿ.! ಜಸ್ಟ್ 8ನೇ,10ನೇ ತರಗತಿ ,PUC ಪಾಸ್ ಆದರೆ ಸಾಕು.! 30,000ರೂ. ಸಂಬಳ.!!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಅಗ್ನಿವೀರ್ 25000 ಹೆಚ್ಚು ಹುದ್ದೆಗಳ ನೇಮಕಾತಿ ನಡೆಯುತ್ತಿದೆ. 

WhatsApp Group Join Now
Telegram Group Join Now

ಹೌದು ಅಗ್ನಿವೀರ್ 25,000 ಹೆಚ್ಚು ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಇದು ಅಂದಾಜು ಪ್ರಕಾರವಾಗಿ ನಿಮಗೆಲ್ಲ ತಿಳಿಸಲಾಗಿದೆ.

ನೋಡಿ ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ನಾವು  ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು  ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.

 ಉದಾಹರಣೆಗೆ ತಿಳಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಪ್ರತಿ ತಿಂಗಳ ವೇತನ ಎಷ್ಟು.? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತೆ.

ನೋಡಿ  ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಎಲ್ಲರೂ ಈ ಲೇಖನವನ್ನು ಕೊನೆವರೆಗೂ ಓದಿ ಅರ್ಜಿ ಸಲ್ಲಿಸಿ.

ಭಾರತೀಯ ಸೇನೆಯು ಅಗ್ನಿಪಥ ಯೋಜನೆ ಅಡಿಯಲ್ಲಿ ಅಗ್ನಿವೀರ್ ನೇಮಕಾತಿ 2026 ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ದೇಶದ ಯುವಕರಿಗೆ ಸೇನೆ ಸೇರಲು ಇದು ಅತ್ಯುತ್ತಮ  ಸುವರ್ಣ ಅವಕಾಶವಾಗಿದೆ ಅಂತ ಹೇಳಬಹುದು. ಈ ನೇಮಕಾತಿಯ ಮೂಲಕ ಜನರಲ್ ಡ್ಯೂಟಿ (GD), ಟೆಕ್ನಿಕಲ್, ಕ್ಲರ್ಕ್/ಸ್ಟೋರ್ ಕೀಪರ್ ಮತ್ತು ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಹುದ್ದೆಗಳ  ನೇಮಕಾತಿ ನಡೆಯಲಿದೆ.

ಈ ನೇಮಕಾತಿ ಭಾರತದಾದ್ಯಂತ ಅನ್ವ ಯವಾಗಿದ್ದು, 8ನೇ, 10ನೇ ಹಾಗೂ 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಯುವಕರಿಗೆ ಶಿಸ್ತು, ದೇಶಸೇವೆ, ಉತ್ತಮ ವೇತನ, ಭವಿಷ್ಯದ ಭದ್ರತೆ ಮತ್ತು ವೃತ್ತಿ ಬೆಳವಣಿಗೆ ಒದಗಿಸುವ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಉದ್ಯೋಗ ಇದಾಗಿದೆ.

ಸಂಕ್ಷಿಪ್ತ ಅವಲೋಕನ:

ವಿವರಮಾಹಿತಿ
ಸಂಸ್ಥೆಭಾರತೀಯ ಸೇನೆ
ಉದ್ಯೋಗ ಪ್ರಕಾರಕೇಂದ್ರ ಸರ್ಕಾರಿ
ಹುದ್ದೆ ಹೆಸರುಅಗ್ನಿವೀರ್ (GD, Technical, Clerk, Tradesman)
ಒಟ್ಟು ಹುದ್ದೆಗಳು25,000+ (ಅಂದಾಜು)
ವೇತನ₹30,000 – ₹40,000 ಪ್ರತಿ ತಿಂಗಳು
ಅರ್ಜಿ ವಿಧಾನಆನ್‌ಲೈನ್
ಅರ್ಹತೆ8ನೇ / 10ನೇ / 12ನೇ ತರಗತಿ
ವಯಸ್ಸು17½ ರಿಂದ 21 ವರ್ಷ
ಕೊನೆಯ ದಿನಾಂಕ01 ಏಪ್ರಿಲ್ 2026
ಅಧಿಕೃತ ವೆಬ್‌ಸೈಟ್joinindianarmy.nic.in

 ಹುದ್ದೆಗಳ ವಿವರ:

  • ಅಗ್ನಿವೀರ್ ಜನರಲ್ ಡ್ಯೂಟಿ (GD)
  • ಅಗ್ನಿವೀರ್ ಟೆಕ್ನಿಕಲ್
  • ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್
  • ಅಗ್ನಿವೀರ್ ಟ್ರೇಡ್ಸ್‌ಮ್ಯಾನ್

 ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ:

  • GD / Tradesman: 8ನೇ ಅಥವಾ 10ನೇ ತರಗತಿ (ಕನಿಷ್ಠ 45% ಅಂಕಗಳು)
  • Clerk / Technical: 12ನೇ ತರಗತಿ (ವಿಜ್ಞಾನ / ವಾಣಿಜ್ಯ / ಕಲೆ ವಿಭಾಗ)

ವಯಸ್ಸಿನ ಮಿತಿ:

  • ಕನಿಷ್ಠ: 17½ ವರ್ಷ
  • ಗರಿಷ್ಠ: 21 ವರ್ಷ
  • ಜನ್ಮ ದಿನಾಂಕ: 01 ಜುಲೈ 2005 ರಿಂದ 01 ಜುಲೈ 2009ರ ನಡುವೆ ಜನಿಸಿದವರು

ಎತ್ತರ ಮತ್ತು ದೈಹಿಕ ಮಾನದಂಡ ಮಾಹಿತಿ:

  • ಕನಿಷ್ಠ ಎತ್ತರ: 162 ಸೆಂ.ಮೀ
  • ಎದೆ: ಕನಿಷ್ಠ 5 ಸೆಂ.ಮೀ ವಿಸ್ತರಣೆ
  • ತೂಕ: ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ

 ವೇತನ ಮತ್ತು ಸೌಲಭ್ಯಗಳು:

ವರ್ಷತಿಂಗಳ ವೇತನ
1ನೇ ವರ್ಷ₹30,000
2ನೇ ವರ್ಷ₹33,000
3ನೇ ವರ್ಷ₹36,500
4ನೇ ವರ್ಷ₹40,000

ಸೇವಾ ನಿಧಿ ಪ್ಯಾಕೇಜ್:

4 ವರ್ಷಗಳ ಸೇವೆಯ ನಂತರ ₹11.71 ಲಕ್ಷ ಸೇವಾ ನಿಧಿ (Seva Nidhi) ಮೊತ್ತ ಒದಗಿಸಲಾಗುತ್ತದೆ.

ಇತರೆ ಸೌಲಭ್ಯಗಳು:

  • DA, TA, HRA
  • ವೈದ್ಯಕೀಯ ಸೌಲಭ್ಯ
  • ವಿಮಾ ರಕ್ಷಣೆ
  • ಪಿಂಚಣಿ ಪ್ರಯೋಜನ (ಅವಕಾಶ)
  • ದೇಶ ಸೇವೆಯ ಗೌರವ

 ಅರ್ಜಿ ಶುಲ್ಕ:

ವರ್ಗಶುಲ್ಕ
ಎಲ್ಲಾ ಅಭ್ಯರ್ಥಿಗಳು₹250

 ಆಯ್ಕೆ ಪ್ರಕ್ರಿಯೆ ಹೇಗೆ..?

ಹಂತ 1: ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE)

ಹಂತ 2: ಭೌತಿಕ ಪರೀಕ್ಷೆ (PFT), ದೈಹಿಕ ಅಳತೆ, ವೈದ್ಯಕೀಯ ಪರೀಕ್ಷೆ ಇರುತ್ತೆ.

ಅಂತಿಮ ಆಯ್ಕೆ:  ಮೆರಿಟ್ ಆಧಾರದ ಮೇಲೆ.

 ಪರೀಕ್ಷಾ ಮಾದರಿ ಮತ್ತು ಸಿಲಬಸ್:

ವಿಷಯಗಳು:

  • ಸಾಮಾನ್ಯ ಜ್ಞಾನ
  • ಗಣಿತ
  • ವಿಜ್ಞಾನ
  • ಲಾಜಿಕಲ್ ರೀಸನಿಂಗ್

ಪರೀಕ್ಷಾ ಅವಧಿ: 60 ನಿಮಿಷ
ಪ್ರಶ್ನೆಗಳ ಸಂಖ್ಯೆ: 50
ನೆಗಟಿವ್ ಮಾರ್ಕಿಂಗ್: ಇಲ್ಲ(ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ)

ಸಿದ್ಧತೆ ಸಲಹೆ:

  • ದಿನನಿತ್ಯ ಓದು ಅಭ್ಯಾಸ
  • ಮಾದರಿ ಪ್ರಶ್ನೆಪತ್ರಿಕೆ ಅಭ್ಯಾಸ
  • ದೈಹಿಕ ಫಿಟ್ನೆಸ್ ಮೇಲೆ ಗಮನ

 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಘಟನೆದಿನಾಂಕ
ಅರ್ಜಿ ಆರಂಭ13 ಫೆಬ್ರವರಿ 2026
ಕೊನೆಯ ದಿನ01 ಏಪ್ರಿಲ್ 2026
CEE ಪರೀಕ್ಷೆ01 – 15 ಜೂನ್ 2026

 ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: joinindianarmy.nic.in
  2. ಹೊಸ ಅಭ್ಯರ್ಥಿಯಾಗಿ ನೋಂದಣಿ ಮಾಡಿ
  3. ಲಾಗಿನ್ ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  5. ಶುಲ್ಕ ಪಾವತಿ ಮಾಡಿ
  6. ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ ಇದು ಬಹಳ ಮುಖ್ಯವಾಗಿರುತ್ತೆ.

ಬೇಕಾಗುವ ಮುಖ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • SSLC / PUC ಅಂಕಪಟ್ಟಿ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
  • ಆದಾಯ ಪ್ರಮಾಣಪತ್ರ
  • ಪಾಸ್ಪೋರ್ಟ್ ಸೈಸ್ ಫೋಟೋ
  • ಸಹಿ
  • ನಿವಾಸ ಪ್ರಮಾಣಪತ್ರ

ಅಭ್ಯರ್ಥಿಗಳಿಗಾಗಿ ಉಪಯುಕ್ತ ಸಲಹೆಗಳು:

  • ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ
  • ದೈಹಿಕ ತಯಾರಿಗೆ ಈಗಿನಿಂದಲೇ ಅಭ್ಯಾಸ ಆರಂಭಿಸಿ
  • ನಕಲಿ ಜಾಹೀರಾತುಗಳಿಂದ ದೂರವಿರಿ

ನಮ್ಮ ಕೊನೆ ಮಾತು:

ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ 2026 ದೇಶಸೇವೆಗೆ ಮತ್ತು ಭವಿಷ್ಯ ನಿರ್ಮಾಣಕ್ಕೆ ಅತ್ಯುತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಮಹತ್ವದ ಅವಕಾಶವನ್ನು ನಿಮ್ಮದಾಗಿಸಿಕ್ಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

 FAQ:

1)ಅಗ್ನಿವೀರ್ ನೇಮಕಾತಿ 2026 ಗೆ ಯಾರು ಅರ್ಜಿ ಸಲ್ಲಿಸಬಹುದು?

ಉತ್ತರ:
8ನೇ, 10ನೇ ಅಥವಾ 12ನೇ ತರಗತಿ ಉತ್ತೀರ್ಣರಾದ 17½ ರಿಂದ 21 ವರ್ಷದೊಳಗಿನ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. ವೈದ್ಯಕೀಯ ಹಾಗೂ ದೈಹಿಕ ಮಾನದಂಡಗಳನ್ನು   ಪೂರೈಸಿರುವ ವಿದ್ಯಾರ್ಥಿಗಳು.

2)ಮಹಿಳಾ ಅಭ್ಯರ್ಥಿಗಳು ಅಗ್ನಿವೀರ್ ನೇಮಕಾತಿಗೆ ಅರ್ಜಿ ಹಾಕಬಹುದೇ?

ಉತ್ತರ:
ಹೌದು, ಭಾರತೀಯ ಸೇನೆಯ ನಿಯಮಗಳ ಪ್ರಕಾರ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ಇದೆ, ಆದರೆ ಆಯ್ಕೆ ಪ್ರಕ್ರಿಯೆ ಮತ್ತು ಹುದ್ದೆಗಳು ಅಧಿಸೂಚನೆ ಆಧಾರಿತವಾಗಿರುತ್ತವೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

3)ಅಗ್ನಿವೀರ್ ವೇತನ ಎಷ್ಟು?

ಉತ್ತರ:
1ನೇ ವರ್ಷ ₹30,000, 2ನೇ ವರ್ಷ ₹33,000, 3ನೇ ವರ್ಷ ₹36,500 ಮತ್ತು 4ನೇ ವರ್ಷ ₹40,000 ತಿಂಗಳ ವೇತನ ನೀಡಲಾಗುತ್ತದೆ.

4)ಸೇವಾ ನಿಧಿ (Seva Nidhi) ಎಂದರೇನು?

ಉತ್ತರ:
4 ವರ್ಷಗಳ ಸೇವೆಯ ನಂತರ ಸರ್ಕಾರದಿಂದ ₹11.71 ಲಕ್ಷ ಮೊತ್ತದ ಸೇವಾ ನಿಧಿ ಪ್ಯಾಕೇಜ್ ನೀಡಲಾಗುತ್ತದೆ.

5)ಅರ್ಜಿ ಶುಲ್ಕ ಎಷ್ಟು ಮತ್ತು ಹೇಗೆ ಪಾವತಿಸಬೇಕು?

ಉತ್ತರ:
ಎಲ್ಲಾ ಅಭ್ಯರ್ಥಿಗಳಿಗೆ ₹250 ಶುಲ್ಕವಿದ್ದು, ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / UPI / ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಪಾವತಿ ಮಾಡಬೇಕು.

6)ಅಗ್ನಿವೀರ್ ಪರೀಕ್ಷೆ ಯಾವ ಭಾಷೆಯಲ್ಲಿ ಇರುತ್ತದೆ?

ಉತ್ತರ:
ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ನಡೆಯುತ್ತದೆ.

8) ದೈಹಿಕ ಪರೀಕ್ಷೆಯಲ್ಲಿ ಯಾವ ಯಾವ ಹಂತಗಳಿವೆ?

ಉತ್ತರ:

  1. 1.6 ಕಿಮೀ ಓಟ
  2. ಪುಲ್-ಅಪ್ಸ್
  3. ಲಾಂಗ್ ಜಂಪ್
  4. ಜಿಗ್-ಜಾಗ್ ಬ್ಯಾಲನ್ಸ್
  5. ವೈದ್ಯಕೀಯ ಪರೀಕ್ಷೆ

8) ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಉತ್ತರ:
ಮೊದಲು ಆನ್‌ಲೈನ್ ಪರೀಕ್ಷೆ (CEE), ನಂತರ ಫಿಜಿಕಲ್ ಟೆಸ್ಟ್ + ವೈದ್ಯಕೀಯ ಪರೀಕ್ಷೆ, ಅಂತಿಮವಾಗಿ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ.

9) ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಹಾಕಬಹುದೇ?

ಉತ್ತರ:
ಹೌದು, ಅರ್ಹತೆ ಇದ್ದಲ್ಲಿ ಅಭ್ಯರ್ಥಿಗಳು ಬಹು ಹುದ್ದೆಗಳಿಗೆ ಅರ್ಜಿ ಸಲ್ಲಿಸುಬಹುದು, ಆದರೆ ಆಯ್ಕೆ ಒಂದೇ ಹುದ್ದೆಗೆ ಮಾತ್ರ ಸಿಗುತ್ತದೆ.

10)ಅಗ್ನಿವೀರ್ ಸೇವೆಯ ನಂತರ ಶಾಶ್ವತ ಸೇನಾ ಉದ್ಯೋಗ ಸಿಗುತ್ತದೆಯೇ?

ಉತ್ತರ:
4 ವರ್ಷಗಳ ಸೇವೆಯ ನಂತರ ಸುಮಾರು 25% ಅಭ್ಯರ್ಥಿಗಳಿಗೆ ಶಾಶ್ವತ ಸೇನಾ ಸೇವೆಗೆ ಅವಕಾಶ ನೀಡಲಾಗುತ್ತದೆ.

11)ಅರ್ಜಿ ಕೊನೆಯ ದಿನ ಯಾವುದು?

ಉತ್ತರ:
01 ಏಪ್ರಿಲ್ 2026 ಕೊನೆಯ ದಿನವಾಗಿದೆ.

Leave a Comment