ಗೃಹಲಕ್ಷ್ಮಿ 26ನೇ ಕಂತಿನ ಹಣ ಬಿಡುಗಡೆ! ಇಂದೆ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

ಗೃಹಲಕ್ಷ್ಮಿ 26ನೇ  ಕಂತಿನ ಹಣ ಬಿಡುಗಡೆಯಾಗಿದೆ ನಿಮಗೇನಾದರೂ ಇನ್ನೂವರೆಗೂ ಗೃಹಲಕ್ಷ್ಮಿ 26ನೇ ಕಂತಿನ ಹಣ ಬಿಡುಗಡೆಯಾಗದೆ ಇಂದಲ್ಲಿ ಈ ಒಂದು ಲೇಖನ ನಿಮಗಾಗಿ ಇದೆ ಕೊನೆವರೆಗೂ ಓದಿ. 

WhatsApp Group Join Now
Telegram Group Join Now

ಹಾಗೆ ಇಂದಿನ ಈ ಒಂದು ಲೇಖನವನ್ನ ನಿಮ್ಮ ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಿ ಏಕೆಂದರೆ ಬಹಳ ಉಪಯುಕ್ತ ಮಾಹಿತಿ ಆಗಿದೆ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೂ ಕೆಲವೊಂದಿಷ್ಟು ಕಂತಿನ ಹಣ ಬಂದಿಲ್ಲ ಇದರ ಕಾರಣ ಹೇಗೆ ಬಂದಿಲ್ಲ ಎಂಬ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಹಾಗೆ ಏನು ಮಾಡಬೇಕು ಎಂದು ಸಹ ತಿಳಿಸಲಾಗಿದೆ ಹಣ ಬರದಿದ್ದರೆ. 

ನಿಮಗೆಲ್ಲ ತಿಳಿದಿರಬಹುದು ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿರುವ ಒಂದು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. 

ಕುಟುಂಬದ ಮುಖ್ಯ ಮಹಿಳಾ ಸದಸ್ಯೆಗೆ ಪ್ರತಿ ತಿಂಗಳು ನೇರವಾಗಿ ಹಣ ಸಹಾಯ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ, ಕುಟುಂಬದ ನಿರ್ವಹಣೆ ಮತ್ತು ಮಹಿಳಾ ಸಬಲೀಕರಣವನ್ನು ಸಾಧಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈಗ ಸದ್ಯ ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಅಪ್‌ಡೇಟ್ ಹೊರಬಿದ್ದಿದ್ದು, ರಾಜ್ಯದ 21 ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆ.

 ಪ್ರಸ್ತುತ ಈ ಲೇಖನದಲ್ಲಿ 26ನೇ ಕಂತಿನ ಸಂಪೂರ್ಣ ಮಾಹಿತಿ, ಹಣ ಜಮಾ ಸ್ಥಿತಿ, ವಿಳಂಬಕ್ಕೆ ಕಾರಣಗಳು, ಹಣ ಬರದಿದ್ದರೆ ಏನು ಮಾಡಬೇಕು, ಮುಂದಿನ ಕಂತಿನ ನಿರೀಕ್ಷೆ ಮತ್ತು ಯೋಜನೆಯ ಮಹತ್ವವನ್ನು ಸರಳವಾಗಿ ವಿವರಿಸಲಾಗಿದೆ.

26ನೇ ಕಂತಿನ ಹಣ ಬಿಡುಗಡೆ  ಇತ್ತೀಚಿನ ಅಪ್‌ಡೇಟ್:

ನೋಡಿ 2026ರ ಫೆಬ್ರವರಿ 17ರಿಂದ ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ

ಈಗಾಗಲೇ ಸದ್ಯ ದೊರಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಈಗಾಗಲೇ ಸುಮಾರು 55ರಿಂದ 60 ಶೇಕಡಾ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗಿದೆ.

ಹಲವಾರು ಜಿಲ್ಲೆಗಳ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬಂದಿರುವುದನ್ನು ದೃಢಪಡಿಸಿದ್ದು, ಉಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಶೀಘ್ರದಲ್ಲೇ ಹಣ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

25ನೇ ಮತ್ತು 26ನೇ ಕಂತಿನ ಹಣ ಒಟ್ಟಿಗೆ ₹4000 ಜಮಾ..?

ಈ ಬಾರಿ ಒಂದು ವಿಶೇಷ ಸಂಗತಿ ಏನೆಂದರೆ ಈ ಮೊದಲು ಹಿಂದಿನ 25ನೇ ಕಂತಿನ ಹಣ ತಲುಪದೇ ಉಳಿದ ಫಲಾನುಭವಿಗಳಿಗೆ 25ನೇ ಹಾಗೂ 26ನೇ ಕಂತುಗಳನ್ನು ಒಟ್ಟಿಗೆ ಸೇರಿಸಿ ₹4000 ಜಮಾ ಮಾಡಲಾಗಿದೆ.

ಅಂದರೆ ಈ ಕೆಳಗಿನ ಅಂತಿತ ಮಾಹಿತಿ ತಿಳಿದುಕೊಳ್ಳಿ:

  • 25ನೇ ಕಂತು ಬಾಕಿ ಇದ್ದವರು → ₹2000 + ₹2000 = ಒಟ್ಟು ₹4000
  • 25ನೇ ಕಂತು ಪಡೆದವರು → ಕೇವಲ 26ನೇ ಕಂತಿನ ₹2000

ಹಣ ಜಮಾ ಆಗಿರುವ 21 ಜಿಲ್ಲೆಗಳ ಪಟ್ಟಿ:

ಸದ್ಯಕ್ಕೆ ಕರ್ನಾಟಕದ 21 ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿರುವುದು ದೃಢಪಟ್ಟಿದೆ. ಆ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ:

  • ಬಾಗಲಕೋಟೆ
  • ಕೊಪ್ಪಳ
  • ಚಿಕ್ಕಬಳ್ಳಾಪುರ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ದಕ್ಷಿಣ
  • ಮೈಸೂರು
  • ಕೋಲಾರ
  • ದಾವಣಗೆರೆ
  • ರಾಮನಗರ
  • ಉತ್ತರ ಕನ್ನಡ
  • ಕಲಬುರಗಿ
  • ತುಮಕೂರು
  • ಶಿವಮೊಗ್ಗ
  • ಹಾಸನ
  • ಗದಗ
  • ಕೊಡಗು
  • ರಾಯಚೂರು
  • ಉಡುಪಿ
  • ಯಾದಗಿರಿ

ಕೆಲವು ಜಿಲ್ಲೆಗಳಲ್ಲಿ ಹಣ ವಿಳಂಬವಾಗಿರುವ ಕಾರಣವೇನು..?

ಮಂಡ್ಯ, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹಣ ತಲುಪಲು ಸ್ವಲ್ಪ ವಿಳಂಬವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಡಿಬಿಟಿ (ನೇರ ನಗದು ವರ್ಗಾವಣೆ) ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳು.

ಸರ್ಕಾರದ ಸ್ಪಷ್ಟನೆ ಪ್ರಕಾರ:

  • ಬ್ಯಾಂಕ್ ಸರ್ವರ್ ಸಮಸ್ಯೆ
  • ಆಧಾರ್-ಬ್ಯಾಂಕ್ ಲಿಂಕ್ ದೋಷ
  • ಖಾತೆ ವಿವರಗಳಲ್ಲಿ ತಪ್ಪು
  • ಡಿಬಿಟಿ ಸಿಸ್ಟಮ್ ತಾಂತ್ರಿಕ ಅಡಚಣೆ

ಇವುಗಳೇ ವಿಳಂಬಕ್ಕೆ ಕಾರಣವಾಗಿದ್ದು, ಇದರಲ್ಲಿ ಯಾವುದೇ ತಾರತಮ್ಯ ಅಥವಾ ಭೇದಭಾವ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಹಾಗಾದ್ರೆ ಹಣ ಬರೆದಿದ್ದರೆ ಏನು ಮಾಡಬೇಕು ಈ ಕೆಳಗಿನಂತಿದೆ ನೋಡಿ ಮಾಹಿತಿ.

ಹಣ ಬರದಿದ್ದರೆ ಏನು ಮಾಡಬೇಕು?

ನಿಮ್ಮ ಖಾತೆಗೆ ಇನ್ನೂ ಹಣ ಜಮಾ ಆಗದಿದ್ದರೆ ಆತಂಕಪಡಬೇಕಾಗಿಲ್ಲ. ಕೆಳಗಿನ ಕ್ರಮಗಳನ್ನು ಅನುಸರಿಸಿ:

1. ಅರ್ಜಿ ಸ್ಥಿತಿ ಪರಿಶೀಲನೆ

ಹತ್ತಿರದ ನಾಗರಿಕ ಸೇವಾ ಕೇಂದ್ರ (CSC) ಅಥವಾ ಸಂಬಂಧಿಸಿದ ಇಲಾಖೆಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನೀಡಿ ಅರ್ಜಿಯ ಸ್ಟೇಟಸ್ ಪರಿಶೀಲಿಸಿ.

2. DBT ಸ್ಥಿತಿ ತಿಳಿದುಕೊಳ್ಳಿ

ಸ್ಟೇಟಸ್‌ನಲ್ಲಿ ಈ ಸಂದೇಶಗಳು ಕಾಣಿಸಬಹುದು:

  • Push to DBT Success – ಹಣ ಶೀಘ್ರದಲ್ಲೇ ನಿಮ್ಮ ಖಾತೆಗೆ ಬರಲಿದೆ
  • Income Tax / GST Payer – ನೀವು ತೆರಿಗೆ ಪಾವತಿದಾರರಾಗಿದ್ದರೆ ಯೋಜನೆಯ ಹಣ ಸಿಗುವುದಿಲ್ಲ
  • Rejected / Pending – ದಾಖಲೆ ದೋಷ ಅಥವಾ ಪರಿಶೀಲನೆ ಬಾಕಿ

3. ಬ್ಯಾಂಕ್ ಖಾತೆ ಪರಿಶೀಲನೆ

ನಿಮ್ಮ ಬ್ಯಾಂಕ್ ಖಾತೆ:

  • ಆಧಾರ್‌ಗೆ ಲಿಂಕ್ ಆಗಿದೆಯೇ?
  • ಖಾತೆ ಸಕ್ರಿಯವಾಗಿದೆಯೇ?
  • DBT ಎನೇಬಲ್ ಆಗಿದೆಯೇ?

ಈ ಮೇಲ್ಗಡೆ ತಿಳಿಸಿರುವ ಹಾಗೆ ಖಚಿತಪಡಿಸಿಕೊಳ್ಳಿ.

ಹಳೆಯ ಬಾಕಿ ಹಣದ ಅಪ್‌ಡೇಟ್ (ಫೆಬ್ರವರಿ – ಮಾರ್ಚ್ 2025)

ಈಗಾಗಲೇ ಕೆಲವು ಫಲಾನುಭವಿಗಳಿಗೆ ಹಿಂದಿನ ವರ್ಷದ ಫೆಬ್ರವರಿ ಮತ್ತು ಮಾರ್ಚ್ 2025ರ ಹಣ ಬಾಕಿ ಉಳಿದಿದೆ. ಪ್ರಸ್ತುತ ಈ ಬಾಕಿ ಹಣದ ವಿವರಗಳು ಸ್ಟೇಟಸ್‌ನಲ್ಲಿ ತೋರಿಸುತ್ತಿಲ್ಲ.

ಸರ್ಕಾರದ ಮಾಹಿತಿ ಪ್ರಕಾರ:

  • ಹಣಕಾಸು ಇಲಾಖೆಯಿಂದ ₹5000 ಕೋಟಿ ಅನುದಾನ ಬಿಡುಗಡೆ ಆದ ನಂತರ
  • ಈ ಬಾಕಿ ಹಣವನ್ನು ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು

ಅಂದರೆ, ಮುಂದಿನ ಕೆಲವು ತಿಂಗಳಲ್ಲಿ ಈ ಬಾಕಿ ಹಣ ಕೂಡ ಲಭ್ಯವಾಗುವ ನಿರೀಕ್ಷೆ ಇದೆ.

FAQ:

1. ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣ ಯಾವ ದಿನದಿಂದ ಜಮಾ ಆಗುತ್ತಿದೆ?

2026ರ ಫೆಬ್ರವರಿ 17ರಿಂದ ಹಂತ ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತಿದೆ.

2. ನನಗೆ 25ನೇ ಕಂತು ಬಂದಿಲ್ಲ. ಈಗ ಎಷ್ಟು ಹಣ ಸಿಗುತ್ತದೆ?

25ನೇ ಕಂತು ಬಾಕಿ ಇದ್ದವರಿಗೆ 25ನೇ ಮತ್ತು 26ನೇ ಕಂತುಗಳನ್ನು ಸೇರಿಸಿ ಒಟ್ಟು ₹4000 ಜಮಾ ಮಾಡಲಾಗುತ್ತಿದೆ.

3. ಹಣ ಇನ್ನೂ ಬರದೇ ಇದ್ದರೆ ಏನು ಮಾಡಬೇಕು?

ಹತ್ತಿರದ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಚೀಟಿ ಸಂಖ್ಯೆಯಿಂದ ಅರ್ಜಿ ಸ್ಥಿತಿ ಪರಿಶೀಲಿಸಬೇಕು ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ E-KYC ಆಗಿದೆ ಇಲ್ಲವೇ ಎಂದು ಪರಿಶೀಲಿಸಿ.

4. ಯಾವ ಕಾರಣಕ್ಕೆ ಹಣ ತಡೆಹಿಡಿಯಲಾಗುತ್ತದೆ?

ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿದ್ದರೆ, ಅಥವಾ ಬ್ಯಾಂಕ್-ಆಧಾರ್ ಲಿಂಕ್ ದೋಷ ಇದ್ದರೆ ಹಣ ತಡೆಹಿಡಿಯಬಹುದು.

5. ಹಳೆಯ ಬಾಕಿ ಹಣ ಯಾವಾಗ ಸಿಗುತ್ತದೆ?

ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆದ ನಂತರ, ಹಂತ ಹಂತವಾಗಿ ಬಾಕಿ ಹಣ ಜಮಾ ಮಾಡುವ ಸಾಧ್ಯತೆ ಇದೆ.

Leave a Comment

WhatsApp Logo Join WhatsApp Group!