ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಕರ್ನಾಟಕ ಸರ್ಕಾರ ಮಹಿಳೆಯರ ಆರ್ಥಿಕ ಸಬಲಿಕರಣಕ್ಕಾಗಿ ಆರಂಭಿಸಿದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವಂತ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆಯ ಮುಖ್ಯ ಮಹಿಳೆಗೆ ಪ್ರತಿ ತಿಂಗಳು ₹2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈಗ ಈ ಯೋಜನೆಯ 27ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಹೊರಬಂದಿದೆ.

ಮಾರ್ಚ್ 9, 2026 ರಿಂದ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ DBT (Direct Benefit Transfer) ಮೂಲಕ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ಕೆಲವು ಜಿಲ್ಲೆಗಳ ಫಲಾನುಭವಿಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ.
ಮೊದಲ ಹಂತದಲ್ಲಿ ಹಣ ಪಡೆಯುತ್ತಿರುವ ಜಿಲ್ಲೆಗಳು..?
ಈ ಬಾರಿ ಮೊದಲ ಹಂತದಲ್ಲಿ ಕೆಳಗಿನ 7 ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿದೆ:
- ಬೆಳಗಾವಿ
- ಬಾಗಲಕೋಟೆ
- ಚಿತ್ರದುರ್ಗ
- ಕೋಲಾರ
- ಬೆಂಗಳೂರು ಗ್ರಾಮಾಂತರ
- ಗದಗ
- ಕೊಪ್ಪಳ
ಗೃಹಲಕ್ಷ್ಮಿ ಹಣ ಬಂದಿದೆಯೇ ಎಂದು ಪರಿಶೀಲಿಸುವ ವಿಧಾನ..?
ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ ಎಂದು ಸುಲಭವಾಗಿ ಪರಿಶೀಲಿಸಬಹುದು. ಅದಕ್ಕಾಗಿ DBT Karnataka ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಪ್ಲೇ ಸ್ಟೋರ್ ಮೂಲಕ.

ಪರಿಶೀಲಿಸುವ ವಿಧಾನ ಈ ಕೆಳಗಿನಂತಿದೆ ಗಮನಿಸಿ:
- ಮೊದಲು DBT Karnataka ಆಪ್ ಡೌನ್ಲೋಡ್ ಮಾಡಿ
- ಆಧಾರ್ ಸಂಖ್ಯೆಯನ್ನು ನಮೂದಿಸಿ
- ಮೊಬೈಲ್ಗೆ ಬರುವ OTP ಅನ್ನು ನಮೂದಿಸಿ ಲಾಗಿನ್ ಆಗಿ
- “Payment Status” ವಿಭಾಗವನ್ನು ತೆರೆಯಿರಿ
- ಅಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾದ ವಿವರಗಳನ್ನು ನೋಡಬಹುದು.
ನಮ್ಮ ಕೊನೆಯ ಮಾತು:
ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಬಿಡುಗಡೆ ಪ್ರಾರಂಭವಾಗಿರುವುದು ಲಕ್ಷಾಂತರ ಮಹಿಳೆಯರಿಗೆ ಸಂತಸದ ವಿಷಯ ತಂದಿದೆ ಅಂತ ಹೇಳಬಹುದು. ಮೊದಲ ಹಂತದಲ್ಲಿ 7 ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮೆಯಾಗುತ್ತಿದ್ದು, ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲೇ ಹಣ ಜಮೆಯಾಗುವ ನಿರೀಕ್ಷೆ ಇದೆ. ಫಲಾನುಭವಿಗಳು DBT Karnataka ಆಪ್ ಮೂಲಕ ತಮ್ಮ ಹಣದ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
DBT APP LINK: CLICK HERE
FAQ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು:
1. ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಯಾವಾಗ ಬಿಡುಗಡೆ ಆಯಿತು?
ಮಾರ್ಚ್ 9, 2026 ರಿಂದ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
2. ಮೊದಲ ಹಂತದಲ್ಲಿ ಯಾವ ಜಿಲ್ಲೆಗಳಿಗೆ ಹಣ ಜಮೆಯಾಗಿದೆ?
ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಹಣ ಜಮೆಯಾಗುತ್ತಿದೆ.
3. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹೇಗೆ ಪರಿಶೀಲಿಸಬಹುದು?
DBT Karnataka ಮೊಬೈಲ್ ಆಪ್ ಬಳಸಿ ಆಧಾರ್ ಮತ್ತು OTP ಮೂಲಕ ಲಾಗಿನ್ ಮಾಡಿ Payment Status ನಲ್ಲಿ ಪರಿಶೀಲಿಸಬಹುದು.
4. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಎಷ್ಟು ಹಣ ಸಿಗುತ್ತದೆ?
ಈ ಯೋಜನೆಯಡಿ ಮನೆಯ ಮುಖ್ಯ ಮಹಿಳೆಗೆ ಪ್ರತಿ ತಿಂಗಳು ₹2000 ನೀಡಲಾಗುತ್ತದೆ.
5. ಉಳಿದ ಜಿಲ್ಲೆಗಳವರಿಗೆ ಹಣ ಯಾವಾಗ ಬರುತ್ತದೆ?
ಉಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಹಂತ ಹಂತವಾಗಿ ಶೀಘ್ರದಲ್ಲೇ ಹಣ ಜಮೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.