ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಪಿಎಫ್ ಖಾತೆ ಹೊಂದಿರುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ ಅಂತ ಹೇಳಬಹುದು.
ಹೌದು ಒಂದು ವೇಳೆ ನೀವೇನಾದರೂ ಪಿ ಎಫ್ ಖಾತೆ ಹೊಂದಿದ್ದರೆ ಈ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಆ ಸಿಹಿ ಸುದ್ದಿ ಏನಿದೆ ಎಂಬ ಮಾಹಿತಿ ನಿಮಗೆ ಗೊತ್ತಿರುವುದಿಲ್ಲ ಹಾಗೂ ತಿಳಿಯುವುದು ಕಷ್ಟವಾಗುತ್ತದೆ ಹೀಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ ಹಾಗೆ ಕೇಂದ್ರ ಸರಕಾರ ಏನು ಗುಡ್ ನ್ಯೂಸ್ ನೀಡಿದೆ ಅಂತ ತಿಳಿದುಕೊಳ್ಳಬಹುದು.
ಇದೀಗ ಭಾರತದ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತೊಂದು ಮಹತ್ವದ ಸಿಹಿ ಸುದ್ದಿ ನೀಡಿದೆ.
2025–26ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ (EPF) ಖಾತೆಗಳಲ್ಲಿ ಜಮೆಯಾಗಿರುವ ಹಣಕ್ಕೆ ಶೇಕಡಾ 8.25 ರಷ್ಟು ಬಡ್ಡಿ ದರವನ್ನು ಮುಂದುವರಿಸಲು EPFO ನಿರ್ಧರಿಸಿದೆ.
PFO ಬಡ್ಡಿ ದರ ಅಪ್ಡೇಟ್:

ನೌಕರರ ಭವಿಷ್ಯ ನಿಧಿ (EPF) ಭಾರತದಲ್ಲಿ ಉದ್ಯೋಗಿಗಳಿಗೆ ಅತ್ಯಂತ ನಂಬಿಕೆಯ ಉಳಿತಾಯ ಮತ್ತು ನಿವೃತ್ತಿ ಭದ್ರತಾ ಯೋಜನೆಯಾಗಿದೆ.
ಪ್ರತಿಮಾಸ ಉದ್ಯೋಗಿ ಮತ್ತು ಉದ್ಯೋಗದಾತರಿಂದ ಜಮೆಯಾಗುವ ಹಣವು ದೀರ್ಘಕಾಲದ ಉಳಿತಾಯವಾಗಿ ಬೆಳೆದು, ನಿವೃತ್ತಿಯ ಸಮಯದಲ್ಲಿ ಆರ್ಥಿಕ ಭದ್ರತೆ ಒದಗಿಸುತ್ತದೆ ಅಂತ ಹೇಳಬಹುದು ಹಾಗೆ ಇದರಿಂದ ಬಹಳಷ್ಟು ಹುದ್ದೆಗಳು ಹಣವನ್ನು ಉಳಿಸಿಕೊಂಡಿದ್ದಾರೆ.
ಇದೀಗ ಪ್ರಸ್ತುತ 2025–26ನೇ ಸಾಲಿಗೆ EPFO ಶೇಕಡಾ 8.25% ಬಡ್ಡಿ ದರವನ್ನು ಮುಂದುವರಿಸಿರುವುದು, ಉದ್ಯೋಗಿಗಳ ಉಳಿತಾಯಕ್ಕೆ ಉತ್ತಮ ಲಾಭ ಸಿಗುವಂತೆ ಮಾಡುತ್ತದೆ.
ಸಿಬಿಟಿ ಸಭೆಯ ಪ್ರಮುಖ ನಿರ್ಧಾರಗಳು:
PPF ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಸಭೆಯಲ್ಲಿ ಈ ಒಂದು ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಆರ್ಥಿಕ ಅಂಶಗಳನ್ನು ವಿಶ್ಲೇಷಿಸಿ, ಉದ್ಯೋಗಿಗಳ ಹಿತದೃಷ್ಟಿಯಿಂದ ಶೇಕಡಾ 8.25 ಬಡ್ಡಿ ದರವನ್ನು ಮುಂದುವರಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು.
ಈ ನಿರ್ಧಾರ ವಿಶೇಷವಾಗಿರುವುದು ಏಕೆಂದರೆ ಇದು ಸತತ ಮೂರನೇ ವರ್ಷವೂ ಅದೇ ಬಡ್ಡಿದರವನ್ನು ಕಾಯ್ದುಕೊಂಡಿರುವುದು. ಇದರಿಂದ EPFOಯ ಹೂಡಿಕೆ ತಂತ್ರಗಳು ಮತ್ತು ಆರ್ಥಿಕ ನಿರ್ವಹಣೆ ಬಲವಾಗಿರುವುದು ಸ್ಪಷ್ಟವಾಗುತ್ತದೆ.
ಉದ್ಯೋಗಿಗಳ ಮೇಲೆ ಬೀರುವ ಪ್ರಭಾವ ಏನು..?
ನೋಡಿ ಈ ಒಂದು ನಿರ್ಧಾರದಿಂದ ದೇಶಾದ್ಯಂತ ಇರುವ ಸುಮಾರು 7 ರಿಂದ 8 ಕೋಟಿ EPFO ಚಂದಾದಾರರಿಗೆ ನೇರ ಲಾಭವಾಗಲಿದೆ. ಹೇಗೆಂದರೆ ಇದು ಹೆಚ್ಚಿನ ಬಡ್ಡಿದರ ದೊರೆಯುತ್ತೆ, ನಿಮ್ಮ PF ಖಾತೆಯಲ್ಲಿರುವ ಹಣ ವೇಗವಾಗಿ ಬೆಳೆದು, ನಿವೃತ್ತಿ ಸಮಯದಲ್ಲಿ ಹೆಚ್ಚಿನ ಮೊತ್ತ ಕೈಗೆ ಸಿಗುವುದು.
ಇದರಿಂದಾಗುವ ಪ್ರಮುಖ ಲಾಭಗಳು:

- ದೀರ್ಘಾವಧಿಯ ಉಳಿತಾಯಕ್ಕೆ ಉತ್ತಮ ವೃದ್ಧಿ
- ನಿವೃತ್ತಿ ಜೀವನಕ್ಕೆ ಭದ್ರತೆ
- ಬ್ಯಾಂಕ್ ಫಿಕ್ಸ್ಡ್ ಡಿಪಾಸಿಟ್ಗಳಿಗೆ ಹೋಲಿಸಿದರೆ ಹೆಚ್ಚು ಸ್ಥಿರ ಆದಾಯ
- ತೆರಿಗೆ ರಿಯಾಯಿತಿಯೊಂದಿಗೆ ಉಳಿತಾಯದ ಲಾಭ
ಈ ಬಡ್ಡಿದರವು ವಿಶೇಷವಾಗಿ ಯುವ ಉದ್ಯೋಗಿಗಳಿಗೆ ಭವಿಷ್ಯದ ಆರ್ಥಿಕ ಯೋಜನೆ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಅಂತ ಹೇಳಬಹುದು ಯಾಕೆಂದರೆ ಒಂದು ಬಾರಿ ವಿಚಾರ ಮಾಡಿ ನೋಡಿ.
ಕಳೆದ ಕೆಲವು ವರ್ಷಗಳ EPF ಬಡ್ಡಿ ದರಗಳ ಇತಿಹಾಸ ಹಾಗೂ ಅದರ ವಿವರ:
EPFO ಕಳೆದ ಕೆಲವು ವರ್ಷಗಳಲ್ಲಿ ಬಡ್ಡಿದರವನ್ನು ವಿವಿಧ ಆರ್ಥಿಕ ಪರಿಸ್ಥಿತಿಗಳ ಆಧಾರದಲ್ಲಿ ಪರಿಷ್ಕರಿಸಿದೆ. ಈ ಕೆಳಗಿನಂತಿದೆ ನೋಡಿ ಮಾಹಿತಿ:
- 2025–26: 8.25%
- 2024–25: 8.25%
- 2023–24: 8.25%
- 2022–23: 8.15%
- 2021–22: 8.10%
- 2020–21: 8.50%
ಬಡ್ಡಿ ಹಣ ಖಾತೆಗೆ ಯಾವಾಗ ಜಮೆಯಾಗುತ್ತದೆ..?
CBT ಸಭೆಯಲ್ಲಿ ತೆಗೆದುಕೊಳ್ಳಲಾದ ಈ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವಾಲಯದ ಅಂತಿಮ ಅನುಮೋದನೆಗೆ ಕಳುಹಿಸಲಾಗುತ್ತದೆ ಆದ ನಂತರ ಸರ್ಕಾರದ ಒಪ್ಪಿಗೆ ಸಿಕ್ಕ ನಂತರ, ಬಡ್ಡಿ ಹಣವನ್ನು ಎಲ್ಲಾ ಅರ್ಹ ಚಂದಾದಾರರ EPF ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯಲ್ಲಿ ಅಥವಾ ಮುಂದಿನ ಕೆಲವು ತಿಂಗಳಲ್ಲಿ ಬಡ್ಡಿ ಜಮೆಯಾಗುತ್ತದೆ. ಉದ್ಯೋಗಿಗಳು ತಮ್ಮ EPF ಖಾತೆಯ ಬ್ಯಾಲೆನ್ಸ್ ಅನ್ನು ಆನ್ಲೈನ್ ಪೋರ್ಟಲ್, UMANG ಆಪ್ ಅಥವಾ ಮಿಸ್ಡ್ ಕಾಲ್ ಸೇವೆಯ ಮೂಲಕ ಸುಲಭವಾಗಿ ಪರಿಶೀಲಿಸಬಹುದು.
EPF ಖಾತೆಯ ಬಡ್ಡಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ?
EPF ಬಡ್ಡಿಯನ್ನು ಪ್ರತಿಮಾಸದ ಸರಾಸರಿ ಬ್ಯಾಲೆನ್ಸ್ ಮೇಲೆ ಲೆಕ್ಕ ಹಾಕಲಾಗುತ್ತದೆ. ವರ್ಷಾಂತ್ಯದಲ್ಲಿ ಒಟ್ಟಾರೆ ಲೆಕ್ಕಾಚಾರ ಮಾಡಿ, ಬಡ್ಡಿ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ.
ಉದಾಹರಣೆಗೆ ತಿಳಿಸುವುದಾದರೆ, ನಿಮ್ಮ EPF ಖಾತೆಯಲ್ಲಿ ವರ್ಷಪೂರ್ತಿ ಸರಾಸರಿ ₹1,00,000 ಇದ್ದರೆ, 8.25% ಬಡ್ಡಿದರದಂತೆ ಸುಮಾರು ₹8,250 ಬಡ್ಡಿಯಾಗಿ ಜಮೆಯಾಗುತ್ತದೆ. ಇದು ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವಾಗುತ್ತದೆ.
EPF ಯೋಜನೆ ಯಾಕೆ ಅತ್ಯುತ್ತಮ ಉಳಿತಾಯ ಮಾರ್ಗ?
EPF ಕೇವಲ ಬಡ್ಡಿ ದರದಿಂದ ಮಾತ್ರವಲ್ಲ, ಅದರ ಭದ್ರತೆ, ಸ್ಥಿರತೆ ಮತ್ತು ತೆರಿಗೆ ಲಾಭಗಳಿಂದಲೂ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಸರ್ಕಾರಿ ನಿಯಂತ್ರಣದಲ್ಲಿರುವುದರಿಂದ, ಇದು ಅತ್ಯಂತ ಸುರಕ್ಷಿತವಾಗಿದೆ ಒಂದು ವೇಳೆ ನಿಮಗೆ 60 ವರ್ಷ ಆದ ನಂತರ ರಿಟೈರ್ ಆದಮೇಲೆ ಬಡ್ಡಿ ಸಮೇತ ಹಣ ಸಿಗುತ್ತೆ.
ಮುಖ್ಯ ಕಾರಣಗಳು:
- ಮಾರುಕಟ್ಟೆ ಅಪಾಯ ಕಡಿಮೆ
- ತೆರಿಗೆ ವಿನಾಯಿತಿಗಳು
- ನಿವೃತ್ತಿಗೆ ದಿಟ್ಟ ಆರ್ಥಿಕ ಬೆಂಬಲ
- ಕಡ್ಡಾಯ ಉಳಿತಾಯ ಅಭ್ಯಾಸ