ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಆಧಾರ್ ಆಪರೇಟರ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದ್ದು ಕೇವಲ ಪಿಯುಸಿ ಪಾಸ್ ಆಗಿರುವಂತವರಿಗೆ ನೇಮಕಾತಿ ನಡೆಯುತ್ತಿದೆ ಹಾಗೆ ಆಯ್ಕೆ ಆದವರಿಗೆ 15,000 ದಿಂದ ಹಿಡಿದು 25000ಗಳ ವರೆಗೆ ಸಂಬಳ ಸಿಗುತ್ತೆ.
ನಿಮಗೇನಾದರೂ ಪಿಯುಸಿ ಆಗಿದ್ದರೆ ಹಾಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇಂಥ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮುಂದಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ನೀವು ಸರಿಯಾದ ಜಾಗಕ್ಕೆ ಸರಿಯಾದ ಲೇಖನವನ್ನ ಓದಲು ಬಂದಿದ್ದೀರಿ.
ತಿಳಿದಿರಬಹುದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಕಾರ್ಯನಿರ್ವಹಿಸುವ CSC ಇ-ಗವರ್ನನ್ಸ್ ಸರ್ವೀಸ್ಸ್ ಇಂಡಿಯಾ ಲಿಮಿಟೆಡ್ ಆಗಿದೆ.
ಪ್ರಸ್ತುತ ಈ ಸಂಸ್ಥೆಯಿಂದ CSC ಆಧಾರ್ ನೇಮಕಾತಿ 2026 ಅಧಿಸೂಚನೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ನೇಮಕಾತಿ ಮೂಲಕ ಆಧಾರ್ ಆಪರೇಟರ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಒಟ್ಟು 252 ಖಾಲಿ ಹುದ್ದೆಗಳು ನೇಮಕಾತಿ ಮಾಡಲಾಗುತ್ತದೆ.

ಗಮನಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ, ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳ Aadhaar Seva Kendra (ASK) ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಈ ನೇಮಕಾತಿ ಒದಗಿಸುತ್ತದೆ. ಸರ್ಕಾರಿ ಬೆಂಬಲಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ವೃತ್ತಿ ಸಿಗುವಂತ ಹುದ್ದೆ ಅಂತ ಹೇಳಬಹುದು.
ಸಂಕ್ಷಿಪ್ತ ವಿವರ:
| ವಿವರ | ಮಾಹಿತಿ |
| ಸಂಸ್ಥೆ | CSC ಇ-ಗವರ್ನನ್ಸ್ ಸರ್ವೀಸ್ಸ್ ಇಂಡಿಯಾ ಲಿಮಿಟೆಡ್ |
| ಹುದ್ದೆಗಳು | Aadhaar Operator, Supervisor |
| ಒಟ್ಟು ಹುದ್ದೆಗಳು | 252 |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರ (ಒಪ್ಪಂದ ಆಧಾರಿತ) |
| ಕೆಲಸ ಸ್ಥಳ | ಭಾರತಾದ್ಯಂತ |
| ಸಂಬಳ | ₹15,000 – ₹25,000 |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಜಿ ಆರಂಭ | 11 ಫೆಬ್ರವರಿ 2026 |
| ಕೊನೆಯ ದಿನ | 10 ಮಾರ್ಚ್ 2026 |
ಹುದ್ದೆಗಳ ವಿಂಗಡಣೆ:
- ಕರ್ನಾಟಕ – 34
- ಉತ್ತರ ಪ್ರದೇಶ – 35
- ಮಧ್ಯಪ್ರದೇಶ – 27
- ಮಹಾರಾಷ್ಟ್ರ – 25
- ರಾಜಸ್ಥಾನ – 18
- ಕೇರಳ – 17
- ಅಸ್ಸಾಂ – 11
- ಪಂಜಾಬ್ – 10
- ತೆಲಂಗಾಣ – 10
- ಇತರ ರಾಜ್ಯಗಳು – ಉಳಿದ ಹುದ್ದೆಗಳು
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ:
- 12ನೇ ತರಗತಿ (PUC) ಪಾಸ್ ಅಥವಾ ಪದವಿ ಪೂರ್ಣಗೊಳಿಸಿರುವವರು
- NSEIT ನಡೆಸುವ Aadhaar Operator / Supervisor ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಮಾಣಪತ್ರ ಕಡ್ಡಾಯ
ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 40 ವರ್ಷ
- ಮೀಸಲಾತಿ: SC/ST/OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ
ಸಂಬಳ ಮತ್ತು ಸೌಲಭ್ಯಗಳು:

- ಆಧಾರ್ ಆಪರೇಟರ್:Aadhaar Operator: ₹15,000 – ₹20,000
- ಸೂಪರ್ವೈಸರ್ Supervisor: ₹20,000 – ₹25,000
- ಇನ್ನಿತರೆ ಪ್ರಯೋಜನಗಳು: ಉದ್ಯೋಗ ಭದ್ರತೆ, ಕಾರ್ಯಕ್ಷಮತೆಯ ಆಧಾರದ ಮೇಲೆ ಇನ್ಸೆಂಟಿವ್, ಸ್ಥಳೀಯ ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ, ವೃತ್ತಿ ಬೆಳವಣಿಗೆ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?
- ಅರ್ಜಿ ಪರಿಶೀಲನೆ
- ದಾಖಲೆ ಪರಿಶೀಲನೆ
- ಇಂಟರ್ವ್ಯೂ ಮತ್ತು ಟೈಪಿಂಗ್ ಟೆಸ್ಟ್
- ಅಂತಿಮ ಮೆರಿಟ್ ಪಟ್ಟಿ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ಗೆ ಭೇಟಿ
- ನೇಮಕಾತಿ ಲಿಂಕ್ ಕ್ಲಿಕ್ ಮಾಡಿ
- ವೈಯಕ್ತಿಕ ವಿವರಗಳ ನಮೂದು
- ದಾಖಲೆ ಅಪ್ಲೋಡ್
- ಅರ್ಜಿ ಸಲ್ಲಿಕೆ
- ದೃಢೀಕರಣ ಪ್ರಿಂಟ್
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- SSLC / PUC ಮಾರ್ಕ್ಸ್ ಕಾರ್ಡ್
- NSEIT ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಪಾಸ್ಪೋರ್ಟ್ ಸೈಸ್ ಫೋಟೋ
- ಸಹಿ
- ಒಂದು ವೇಳೆ ಇನ್ನು ಹೆಚ್ಚಿನ ದಾಖಲೆಗಳು ಬೇಕಾಗಿದ್ದರೆ ನೀಡಬೇಕು.
ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ 11 ಫೆಬ್ರುವರಿ 2026
- ಹಡಚಿ ಕೊನೆ 10 ಮಾರ್ಚ್ 2026
ನಮ್ಮ ಕೊನೆ ಮಾತು:
ನೋಡಿ CSC ಆಧಾರ್ ನೇಮಕಾತಿ 2026 ಯುವ ಅಭ್ಯರ್ಥಿಗಳಿಗೆ ಸರ್ಕಾರಿ ಬೆಂಬಲಿತ ಉದ್ಯೋಗ ಪಡೆಯುವ ಅತ್ಯುತ್ತಮ ಹಾಗೂ ಸುವರ್ಣ ಅವಕಾಶವಾಗಿದೆ ಅಂತ ಹೇಳಬಹುದು ಹಾಗೆ ಅರ್ಹತೆ ಹೊಂದಿರುವವರು ತಡ ಮಾಡದೆ 10 ಮಾರ್ಚ್ 2026ರ ಒಳಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
Q1. NSEIT ಪ್ರಮಾಣಪತ್ರ ಇಲ್ಲದೆ ಅರ್ಜಿ ಸಲ್ಲಿಸಬಹುದಾ?
ಇಲ್ಲ, ಕಡ್ಡಾಯವಾಗಿದೆ.
Q2. ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಇದೆಯಾ?
ಹೌದು, 34 ಹುದ್ದೆಗಳು ಲಭ್ಯ.
Q3. ಸಂಬಳ ಎಷ್ಟು?
₹15,000 ರಿಂದ ₹25,000.
Q4. ವಯೋಮಿತಿ ಎಷ್ಟು?
18 ರಿಂದ 40 ವರ್ಷ.
Q5. ಈ ಹುದ್ದೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಹುದ್ದೆಯಾಗಿದೆ..?
ಕೇಂದ್ರ ಸರ್ಕಾರ.