ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಬಿಎಸ್ಎಫ್ ಪರೀಕ್ಷೆ ಇಲ್ಲದೆ ನೇರ.ನೇಮಕಾತಿ 2025 ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಅಷ್ಟಕ್ ಬಿಎಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಏಕೆ ಮಾಡುತ್ತಿದೆ ಯಾರಿಗೆ ಈ ಹುದ್ದೆಗಳು ಅಂತ ನೀವು ತಿಳಿದುಕೊಳ್ಳಬೇಕು ಅವುಗಳಲ್ಲಿ ಇದೇ ಮುಖ್ಯ ಪ್ರಶ್ನೆ ಆಗಿರುತ್ತೆ ನಿಮ್ಮದು ನೋಡಿ ನಿಮಗಂತಿಲೆ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿರುತ್ತದೆ ಮಾಹಿತಿಯನ್ನು ಗಮನಿಸಬಹುದು.
ನೋಡಿ ನಿಮಗೆಲ್ಲ ತಿಳಿದಿರಬಹುದು ಬಿಎಸ್ಎಫ್ ಅಂದರೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಎಂದರ್ಥ ಈಗ ಬಿ ಎಸ್ ಎಫ್ 549 ಕಾನ್ಸ್‌ಟೇಬಲ್ (GD) ಹುದ್ದೆಗಳ ಭರ್ಜರಿ ನೇಮಕಾತಿ ಮಾಡುತ್ತಿದೆ ನಿಮ್ಮದೇನಾದ್ರೂ ಹತ್ತನೇ ತರಗತಿ ಪಾಸ್ ಆದ್ರೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ನಾವು ಬಿ ಎಸ್ ಕೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತ್ರಾದ ಪ್ರಶ್ನೆಗಳು ಉದ್ಭವ ಆಗುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಬಿಎಸ್ಎಫ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೇವಲ 10ನೇ ತರಗತಿ ಆದರೆ ಸಾಕ ಹಾಗೆ ಪ್ರತಿ ತಿಂಗಳು ಎಷ್ಟು ವೇತನ ಸಿಗುತ್ತಾ? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಹಾಗೆ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು? ಕೊನೆ ದಿನಾಂಕ ಯಾವುದು ಲಿಂಕ್ ಎಲ್ಲಿ ಸಿಗುತ್ತೆ ನೋಟಿಫಿಕೇಶನ್ ಲಿಂಕ್ ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು..?
ಹುಡುಗಿ ಮೇಲ್ಗಡೆ ಕಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ನಾವು ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಾಹಿತಿ ನೀವು ಮಾಡಿದ್ದೆ ಆದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಭಾರತದ ಗಡಿ ಭದ್ರತೆಯ ಪ್ರಮುಖ ಬೆನ್ನೆಲುಬು ಆಗಿರುವಂತ ಗಡಿ ಭದ್ರತಾ ಪಡೆ (Border Security Force – BSF) 2025ನೇ ಸಾಲಿಗೆ ಸಂಬಂಧಿಸಿದಂತೆ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) – ಕ್ರೀಡಾ ಕೋಟಾ ಅಡಿಯಲ್ಲಿ ಭಾರೀ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಣೆ ಮಾಡಿದೆ. ಇದು ದೇಶದಾದ್ಯಂತ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕ-ಯುವತಿಯರಿಗೆ ಇದು ಅತ್ಯಂತ ಮಹತ್ವದ ಮತ್ತು ಅಪರೂಪದ ಅವಕಾಶವಾಗಿದೆ ಅಂತ ಹೇಳಬಹುದು.
ಈ ಅಧಿಸೂಚನೆಯ ಮೂಲಕ ಒಟ್ಟು 549 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ, ಕೇವಲ 10ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳಿಗೂ ಅವಕಾಶ ಇರುವುದರಿಂದ ಗ್ರಾಮೀಣ ಹಾಗೂ ಮಧ್ಯಮ ವರ್ಗದ ಕ್ರೀಡಾಪಟುಗಳಿಗೆ ಈ ನೇಮಕಾತಿ ಬಹು ಮುಖ್ಯ ಕಾರಣ ಅಂತ ಹೇಳಬಹುದು.
ಈ ನೇಮಕಾತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಆಯ್ಕೆ ನಡೆಯುವುದು. ಅಭ್ಯರ್ಥಿಗಳ ಕ್ರೀಡಾ ಸಾಧನೆ, ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಅರ್ಹತೆಗಳ ಆಧಾರದ ಮೇಲೆ ನೇರವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದು ಸಮಯ ಮತ್ತು ಹಣ ಉಳಿಸುವುದರ ಜೊತೆಗೆ ನೈಜ ಪ್ರತಿಭೆಗಳಿಗೆ ಅವಕಾಶ ನೀಡುವ ವ್ಯವಸ್ಥೆ ಅಂತ ಹೇಳಬಹುದು.
BSF ಕಾನ್ಸ್‌ಟೇಬಲ್ ಹುದ್ದೆ ಕೇಂದ್ರ ಸರ್ಕಾರದ ಶಾಶ್ವತ ಉದ್ಯೋಗವಾಗಿದ್ದು, ಉತ್ತಮ ವೇತನ, ಭತ್ಯೆಗಳು, ಪಿಂಚಣಿ ವ್ಯವಸ್ಥೆ ಮತ್ತು ದೇಶಸೇವೆಯ ಗೌರವವನ್ನು ಒದಗಿಸುತ್ತದೆ. ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಬಯಸುವ ಕ್ರೀಡಾಪಟುಗಳಿಗೆ ಇದು ಜೀವನದ ದಿಕ್ಕನ್ನೇ ಬದಲಿಸಬಲ್ಲ ಇದೊಂದು ಸುವರ್ಣ ಅವಕಾಶ ಅಂತ ಹೇಳಬಹುದಾಗಿದೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳಿಗೆ.
ನೇಮಕಾತಿ ಸಂಪೂರ್ಣ ವಿವರ:

Table of Contents
| ವಿವರ | ಮಾಹಿತಿ |
| ಇಲಾಖೆಯ ಹೆಸರು | ಗಡಿ ಭದ್ರತಾ ಪಡೆ (BSF) |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರಿ ಉದ್ಯೋಗ |
| ಹುದ್ದೆಯ ಹೆಸರು | ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) – ಕ್ರೀಡಾ ಕೋಟಾ |
| ಒಟ್ಟು ಹುದ್ದೆಗಳು | 549 |
| ಉದ್ಯೋಗ ಸ್ಥಳ | ಆಲ್ ಇಂಡಿಯಾ |
| ವೇತನ ಶ್ರೇಣಿ | ₹21,700 – ₹69,100 + ಭತ್ಯೆಗಳು |
| ಅರ್ಜಿ ವಿಧಾನ | ಆನ್ಲೈನ್ |
| ಶೈಕ್ಷಣಿಕ ಅರ್ಹತೆ | 10ನೇ ತರಗತಿ (SSLC) ಪಾಸ್ |
| ವಯೋಮಿತಿ | 18–23 ವರ್ಷ |
| ಅರ್ಜಿ ಆರಂಭ | 27 ಡಿಸೆಂಬರ್ 2025 |
| ಕೊನೆಯ ದಿನಾಂಕ | 15 ಜನವರಿ 2026 |
| ಅಧಿಕೃತ ವೆಬ್‌ಸೈಟ್ | rectt.bsf.gov.in |
ಹುದ್ದೆಗಳ ವಿವರ:
BSF Recruitment 2025 ಅಡಿಯಲ್ಲಿ ಒಟ್ಟು 549 ಕಾನ್ಸ್‌ಟೇಬಲ್ (GD) ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳು ಕ್ರೀಡಾ ಕೋಟಾ ಆಧಾರಿತವಾಗಿದ್ದು, ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಂದ ನೇಮಕಾತಿ ಮಾಡಲು ಮುಂದಾಗಿದೆ.
ಹುದ್ದೆಗಳ ವಿತರಣೆ:
- ಪುರುಷ ಅಭ್ಯರ್ಥಿಗಳು: 277 ಹುದ್ದೆಗಳು
- ಮಹಿಳಾ ಅಭ್ಯರ್ಥಿಗಳು: 272 ಹುದ್ದೆಗಳು
ಪ್ರಮುಖ ಕ್ರೀಡಾ ವಿಭಾಗಗಳು:
- ಅಥ್ಲೆಟಿಕ್ಸ್
- ಬಾಕ್ಸಿಂಗ್
- ಫುಟ್ಬಾಲ್
- ಹಾಕಿ
- ಕಬಡ್ಡಿ
- ಕುಸ್ತಿ (Wrestling)
- ವಾಲಿಬಾಲ್
- ಬಾಸ್ಕೆಟ್‌ಬಾಲ್
- ಶೂಟಿಂಗ್
- ಈಜು (Swimming)
- ಜೂಡೋ, ತೈಕ್ವಾಂಡೋ ಸೇರಿದಂತೆ ಇತರೆ ಮಾನ್ಯ ಕ್ರೀಡೆಗಳು
ಅರ್ಹತಾ ಮಾನದಂಡಗಳು
ಈ ಕೆಳಗಡೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಇನ್ನಿತರ ಅರ್ಹತೆ ಮಾನವನ ಕುರಿತು ಮಾಹಿತಿ ಇರೋದೇ ಗಮನಿಸಬಹುದು.

ಶೈಕ್ಷಣಿಕ ಅರ್ಹತೆ
- ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC / Matriculation) ಪಾಸ್ ಆಗಿರಬೇಕು.
ಕ್ರೀಡಾ ಅರ್ಹತೆ
- ಅಭ್ಯರ್ಥಿಗಳು 15 ಜನವರಿ 2024 ರಿಂದ 15 ಜನವರಿ 2026ರ ನಡುವೆ ನಡೆದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು ಅಥವಾ ಪದಕ ಪಡೆದಿರಬೇಕು.
- ತಂಡದ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ತಂಡದ ಸದಸ್ಯರಾಗಿರಬೇಕು.
- ಅರ್ಥ ಆಗದೇ ಇದ್ದಲ್ಲಿ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ
ವಯೋಮಿತಿ (01-08-2025ಕ್ಕೆ ಅನ್ವಯ)
- ಕನಿಷ್ಠ: 18 ವರ್ಷ
- ಗರಿಷ್ಠ: 23 ವರ್ಷ
ವಯೋ ಸಡಿಲಿಕೆ:
- OBC: 3 ವರ್ಷ
- SC / ST: 5 ವರ್ಷ
ದೈಹಿಕ ಅರ್ಹತೆ ತಿಳಿದುಕೊಳ್ಳಿ:
- ಎತ್ತರ (ಪುರುಷರು): 170 ಸೆಂ.ಮೀ
- ಎತ್ತರ (ಮಹಿಳೆಯರು): 157 ಸೆಂ.ಮೀ
- ಎದೆ (ಪುರುಷರು): 80 ಸೆಂ.ಮೀ + 5 ಸೆಂ.ಮೀ ವಿಸ್ತರಣೆ
- ದೃಷ್ಟಿ: 6/6 ಅಥವಾ 6/9 (ವೈದ್ಯಕೀಯ ನಿಯಮಗಳ ಪ್ರಕಾರ)
ವೇತನ ಮತ್ತು ಸೌಲಭ್ಯಗಳು:
BSF ಕಾನ್ಸ್‌ಟೇಬಲ್ ಹುದ್ದೆ Pay Level-3 ಅಡಿಯಲ್ಲಿ ಬರುತ್ತದೆ ಹಾಗೆ ಇದರ ವೇತನ ಈ ಕೆಳಗಿನಂತಿದೆ.
ವೇತನ ವಿವರ:
- ಮೂಲ ವೇತನ: ₹21,700
- ಗರಿಷ್ಠ: ₹69,100
ಭತ್ಯೆಗಳು:
- ಮಹಂಗಾಯಿ ಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ರೇಷನ್ ಮನಿ ಅಲೋವೆನ್ಸ್
- ವೈದ್ಯಕೀಯ ಸೌಲಭ್ಯ (ಕುಟುಂಬ ಸೇರಿ)
- NPS ಪಿಂಚಣಿ ಯೋಜನೆ
- ಉದ್ಯೋಗ ಭದ್ರತೆ
- ಪದೋನ್ನತಿ ಅವಕಾಶ
👉 ಆರಂಭಿಕ ಹಂತದಲ್ಲೇ ಕೈಗೆ ಸಿಗುವ ಸಂಬಳ ಸುಮಾರು ₹35,000+ ಆಗುವ ಸಾಧ್ಯತೆ ಇದೆ ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು.
ಅರ್ಜಿ ಶುಲ್ಕ:
| ವರ್ಗ | ಶುಲ್ಕ |
| General / OBC (ಪುರುಷರು) | ₹159 |
| SC / ST | ₹0 |
| ಮಹಿಳೆಯರು | ₹0 |
| ಮಾಜಿ ಸೈನಿಕರು | ₹0 |
ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ.
ಆಯ್ಕೆ ಹಂತಗಳು ಈ ಕೆಳಗಿನಂತಿದೆ ಗಮನಿಸಬಹುದು:
- ದಾಖಲೆ ಪರಿಶೀಲನೆ
- ದೈಹಿಕ ಪ್ರಮಾಣಿತ ಪರೀಕ್ಷೆ (PST)
- ಕ್ರೀಡಾ ಸಾಧನೆ ಆಧಾರಿತ ಮೆರಿಟ್ ಪಟ್ಟಿ
- ವೈದ್ಯಕೀಯ ಪರೀಕ್ಷೆ
- ಅಂತಿಮ ಆಯ್ಕೆ
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ ವಿವರಣೆ:
👉 ಪರೀಕ್ಷೆ ಇಲ್ಲ
ಆದರೆ ಅಭ್ಯರ್ಥಿಗಳು ಈ ವಿಷಯಗಳಲ್ಲಿ ಸಿದ್ಧತೆ ಇರಿಸಿಕೊಳ್ಳಬೇಕು:
- ದೈಹಿಕ ಸಾಮರ್ಥ್ಯ
- ಕ್ರೀಡಾ ತಂತ್ರಜ್ಞಾನ
- ವೈದ್ಯಕೀಯ ಫಿಟ್ನೆಸ್
ಅರ್ಜಿ ಪ್ರಮುಖ ದಿನಾಂಕಗಳು:
| ಕಾರ್ಯಕ್ರಮ | ದಿನಾಂಕ |
| ಅಧಿಸೂಚನೆ ಪ್ರಕಟಣೆ | ಡಿಸೆಂಬರ್ 2025 |
| ಅರ್ಜಿ ಆರಂಭ | 27 ಡಿಸೆಂಬರ್ 2025 |
| ಕೊನೆಯ ದಿನಾಂಕ | 15 ಜನವರಿ 2026 |
| PST / ಡಾಕ್ಯುಮೆಂಟ್ ಪರಿಶೀಲನೆ | ನಂತರ ತಿಳಿಸಲಾಗುತ್ತದೆ |
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:
ಈ ಕೆಳಗಡೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ ಒದಗಿಸಲಾಗಿದೆ ಅಭ್ಯರ್ಥಿಗಳು ಗಮನಿಸಬಹುದು.
- rectt.bsf.gov.in ಗೆ ಭೇಟಿ ನೀಡಿ
- One Time Registration ಮಾಡಿ
- ಲಾಗಿನ್ ಆಗಿ
- ಅರ್ಜಿ ಫಾರ್ಮ್ ಭರ್ತಿ ಮಾಡಿ
- ದಾಖಲೆ ಅಪ್‌ಲೋಡ್ ಮಾಡಿ
- ಶುಲ್ಕ ಪಾವತಿ (ಅಗತ್ಯವಿದ್ದರೆ)
- Submit ಮಾಡಿ
- ಪ್ರಿಂಟ್ ತೆಗೆದುಕೊಳ್ಳಿ
ಬೇಕಾಗಿರುವ ಅಗತ್ಯ ದಾಖಲೆಗಳು:

- ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ಕ್ರೀಡಾ ಪ್ರಮಾಣಪತ್ರಗಳು
- ಜಾತಿ ಪ್ರಮಾಣಪತ್ರ
- ನಿವಾಸ ಪ್ರಮಾಣಪತ್ರ
- ಪಾಸ್‌ಪೋರ್ಟ್ ಫೋಟೋ
- ಸಹಿ
- ನೋಡಿ ಗಮನಿಸಿ ಇನ್ನು ಬೇರೆ ದಾಖಲೆ ಕೇಳಿದ್ದೆ ಆದರೆ ನೀವು ನೀಡಬೇಕು
ಉಪಯುಕ್ತ ಸಲಹೆಗಳು:
- ಕ್ರೀಡಾ ಪ್ರಮಾಣಪತ್ರಗಳ ಅವಧಿ ಪರಿಶೀಲಿಸಿ
- ದೈಹಿಕ ಫಿಟ್ನೆಸ್ ಕಾಯ್ದುಕೊಳ್ಳಿ
- ಕೊನೆಯ ದಿನಾಂಕಕ್ಕೆ ಕಾಯಬೇಡಿ
ನಮ್ಮ ಕೊನೆಯ ಮಾತು:
BSF Recruitment 2025 ಕ್ರೀಡಾಪಟುಗಳಿಗೆ ದೇಶಸೇವೆಯ ಜೊತೆಗೆ ಭದ್ರ ಭವಿಷ್ಯ ಒದಗಿಸುವ ಅಪೂರ್ವ ಸುವರ್ಣ ಅವಕಾಶ ಅಂತ ಹೇಳಬಹುದು ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಬೇಗ ಬೇಗ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
BSF Recruitment 2025 ಎಂದರೇನು?
ಉತ್ತರ:
BSF Recruitment 2025 ಅಂದರೆ ಗಡಿ ಭದ್ರತಾ ಪಡೆ (BSF) ವತಿಯಿಂದ ಕ್ರೀಡಾ ಕೋಟಾ ಅಡಿಯಲ್ಲಿ 549 ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳಿಗೆ ಪ್ರಕಟಿಸಲಾದ ಕೇಂದ್ರ ಸರ್ಕಾರಿ ನೇಮಕಾತಿ ಅಧಿಸೂಚನೆ ಯಾಗಿರುತ್ತದೆ.
ಈ ನೇಮಕಾತಿ ಯಾವ ವರ್ಗದ ಅಭ್ಯರ್ಥಿಗಳಿಗೆ?
ಉತ್ತರ:
ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಈ ನೇಮಕಾತಿ ಅನ್ವಯಿಸುತ್ತದೆ. ಅಥವಾ ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಚೆಕ್ ಮಾಡಿ.
BSF Recruitment 2025 ನಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ:
ಒಟ್ಟು 549 ಹುದ್ದೆಗಳು ಇವೆ.
- ಪುರುಷರು: 277 ಹುದ್ದೆಗಳು
- ಮಹಿಳೆಯರು: 272 ಹುದ್ದೆಗಳು
ಈ ಹುದ್ದೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಏನು?
ಉತ್ತರ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC / Matriculation) ಪಾಸ್ ಆಗಿರಬೇಕು.
ಕ್ರೀಡಾ ಅರ್ಹತೆ ಇಲ್ಲದವರು ಅರ್ಜಿ ಸಲ್ಲಿಸಬಹುದೇ?
ಉತ್ತರ:
ಇಲ್ಲ. ಇದು ಕ್ರೀಡಾ ಕೋಟಾ ನೇಮಕಾತಿ ಆದ್ದರಿಂದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರಮಾಣಪತ್ರ ಕಡ್ಡಾಯ.
BSF ನೇಮಕಾತಿಗೆ ವಯೋಮಿತಿ ಎಷ್ಟು?
ಉತ್ತರ:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 23 ವರ್ಷ
ವಯೋ ಸಡಿಲಿಕೆ:
- OBC: 3 ವರ್ಷ
- SC / ST: 5 ವರ್ಷ
ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇದೆಯೇ?
ಉತ್ತರ:
ಇಲ್ಲ. ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಆಯ್ಕೆ ಕ್ರೀಡಾ ಸಾಧನೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಯುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಉತ್ತರ:
ಆಯ್ಕೆ ಪ್ರಕ್ರಿಯೆ ಈ ಹಂತಗಳನ್ನು ಒಳಗೊಂಡಿರುತ್ತದೆ:
- ದಾಖಲೆ ಪರಿಶೀಲನೆ
- ದೈಹಿಕ ಪ್ರಮಾಣಿತ ಪರೀಕ್ಷೆ (PST)
- ಕ್ರೀಡಾ ಸಾಧನೆ ಆಧಾರಿತ ಮೆರಿಟ್ ಪಟ್ಟಿ
- ವೈದ್ಯಕೀಯ ಪರೀಕ್ಷೆ
- ಅಂತಿಮ ಆಯ್ಕೆ
BSF ಕಾನ್ಸ್‌ಟೇಬಲ್ GD ಹುದ್ದೆಗೆ ವೇತನ ಎಷ್ಟು?
ಉತ್ತರ:
Pay Level-3 ಅಡಿಯಲ್ಲಿ:
- ಮೂಲ ವೇತನ: ₹21,700
- ಗರಿಷ್ಠ: ₹69,100
ಭತ್ಯೆಗಳೊಂದಿಗೆ ಆರಂಭಿಕ ಕೈಗೆ ಸಿಗುವ ಸಂಬಳ ಸುಮಾರು ₹35,000+ ಆಗಿರಬಹುದು.
ಅರ್ಜಿ ಶುಲ್ಕ ಎಷ್ಟು?
ಉತ್ತರ:
- General / OBC (ಪುರುಷರು): ₹159
- SC / ST / ಮಹಿಳೆಯರು / ಮಾಜಿ ಸೈನಿಕರು: ಶುಲ್ಕವಿಲ್ಲ