ಬಾಡಿಗೆ ಮನೆಗೆ ಹೇಳಿ ಗುಡ್‌ಬೈ! ₹2 ಲಕ್ಷ ರೂ. ಮನೆ ಕಟ್ಟಲು ಸರ್ಕಾರ ಹಣ ಕೊಡ್ತಿದೆ.! ಆಶ್ರಯ ಯೋಜನೆ 2026 ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

ಬೆಂಗಳೂರು: ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತೆ. ಆದರೆ ಆರ್ಥಿಕ ಸಮಸ್ಯೆಗಳು, ಕಡಿಮೆ ಆದಾಯ, ಹೆಚ್ಚುತ್ತಿರುವ ಕಟ್ಟಡ ಸಾಮಗ್ರಿಗಳ ಬೆಲೆ ಮತ್ತು ಜೀವನ ವೆಚ್ಚದ ಕಾರಣದಿಂದಾಗಿ ಅನೇಕ ಕುಟುಂಬಗಳಿಗೆ ಈ ಕನಸನ್ನು ನನಸಾಗಿಸುವುದು ಕಷ್ಟವಾಗುತ್ತಿದೆ. 

WhatsApp Group Join Now
Telegram Group Join Now

ಕರ್ನಾಟಕದ ಅನೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಇಂದಿಗೂ ಗುಡಿಸಲುಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿವೆ. ಇಂತಹ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದಂತ ಆಶ್ರಯ ವಸತಿ ಯೋಜನೆ 2026 ಅನ್ನು ಜಾರಿಗೆ ತಂದಿದೆ.

ನೋಡಿ ಈ ಯೋಜನೆಯಡಿ, ಅರ್ಹ ಫಲಾನುಭವಿಗಳಿಗೆ ಸ್ವಂತ ಮನೆ ನಿರ್ಮಾಣಕ್ಕಾಗಿ ಗರಿಷ್ಠ ₹2 ಲಕ್ಷವರೆಗೆ ಉಚಿತ ಹಣ (ಸಬ್ಸಿಡಿ) ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ರಾಜೀವ್ ಗಾಂಧಿ ವಸತಿ ನಿಗಮದಡಿ ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ, ರಾಜ್ಯದ ಲಕ್ಷಾಂತರ ಕುಟುಂಬಗಳ ಬದುಕಿನಲ್ಲಿ ಹೊಸ ಬೆಳಕು ತರುವ ಆಶಯ ಹೊಂದಿದೆ ಅಂತ ಹೇಳಬಹುದು.

ನೋಡಿ ಪ್ರಸ್ತುತ ಇಂದಿನ ಈ ಲೇಖನದಲ್ಲಿ ಆಶ್ರಯ ಯೋಜನೆ 2026 ಕುರಿತು ಸಂಪೂರ್ಣ ಮಾಹಿತಿ — ಅರ್ಹತೆಗಳು, ಅಗತ್ಯ ದಾಖಲೆಗಳು, ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ, ಹಣ ಬಿಡುಗಡೆ ಪ್ರಕ್ರಿಯೆ, ಆಯ್ಕೆ ಪ್ರಕ್ರಿಯೆ ಮತ್ತು ಫಲಾನುಭವಿಗಳಿಗೆ ಉಪಯುಕ್ತ ಸಲಹೆಗಳು — ಎಲ್ಲವನ್ನೂ ವಿವರವಾಗಿ ತಿಳಿಸುತ್ತೇವೆ.

ಆಶ್ರಯ ವಸತಿ ಯೋಜನೆ ಎಂದರೇನು..?

ಸಾಮಾನ್ಯವಾಗಿ ತಿಳಿಸುವುದಾದರೆ ಆಶ್ರಯ ವಸತಿ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ ರಾಜ್ಯದ ವಸತಿ ರಹಿತ, ಆರ್ಥಿಕವಾಗಿ ಹಿಂದುಳಿದ ಮತ್ತು ನಿರಾಶ್ರಿತ ಕುಟುಂಬಗಳಿಗೆ ಸ್ವಂತ ಪಕ್ಕಾ ಮನೆ ನಿರ್ಮಿಸಲು ಸಹಾಯ ನೀಡುವುದು.

ಈ ಯೋಜನೆಯನ್ನು ಕೆಲವೊಮ್ಮೆ ಬಸವ ವಸತಿ ಯೋಜನೆ ಎಂದೂ ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ಅಗತ್ಯವಿರುವ ಹಣವನ್ನು ಹಂತ ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ತೊಂದರೆ ತಪ್ಪಿ, ಹಣ ನೇರವಾಗಿ ಸರಿಯಾದ ವ್ಯಕ್ತಿಗೆ ತಲುಪುತ್ತದೆ ಇದು ಒಂದು ಒಳ್ಳೆಯ ವಿಚಾರ ಅಂತ ಹೇಳಬಹುದು.

ಆಶ್ರಯ ಯೋಜನೆ 2026ರ ಪ್ರಮುಖ ಉದ್ದೇಶಗಳು:

  • ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆ ಒದಗಿಸುವುದು ಮುಖ್ಯ ಗುರಿ.
  • ಗುಡಿಸಲು ಮತ್ತು ಅಸ್ಥಿರ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ವಸತಿಗೆ ಕರೆದೊಯ್ಯುವುದು ಮುಖ್ಯ ಉದ್ದೇಶ.
  • ಮಹಿಳೆಯರು, ವೃದ್ಧರು, ವಿಕಲಚೇತನರು ಮತ್ತು ದುರ್ಬಲ ವರ್ಗದ ಜನರಿಗೆ ವಿಶೇಷ ಆದ್ಯತೆ ನೀಡುವುದು
  • ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಸತಿ ಸೌಲಭ್ಯ ಹೆಚ್ಚಿಸುವುದು
  • ಸಮಾಜದಲ್ಲಿ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುವುದು

ಯೋಜನೆಯಡಿ ಸಿಗುವ ಹಣ ಎಷ್ಟು..?

ನೋಡಿ ಆಶ್ರಯ ವಸತಿ ಯೋಜನೆಯಡಿ, ಮನೆ ನಿರ್ಮಾಣಕ್ಕಾಗಿ ಗರಿಷ್ಠ ₹2 ಲಕ್ಷವರೆಗೆ ಸರ್ಕಾರದ ಸಹಾಯಧನ ನೀಡಲಾಗುತ್ತದೆ.

ಈ ಹಣವನ್ನು ಒಂದೇ ಬಾರಿ ನೀಡದೆ, ಮನೆ ನಿರ್ಮಾಣದ ಪ್ರಗತಿಗೆ ಅನುಗುಣವಾಗಿ ಹಂತ-ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ:

  1. ತಳಪಾಯ ನಿರ್ಮಾಣದ ನಂತರ
  2. ಗೋಡೆ ನಿರ್ಮಾಣದ ನಂತರ
  3. ಛಾವಣಿ (ಮೇಲುಕಟ್ಟು) ಪೂರ್ಣಗೊಂಡ ನಂತರ

ಈ ಕ್ರಮದಿಂದ ಹಣ ದುರುಪಯೋಗವಾಗದಂತೆ ತಡೆಯಲು ಹಾಗೂ ಮನೆ ಸಂಪೂರ್ಣವಾಗಿ ನಿರ್ಮಾಣವಾಗುವುದನ್ನು ಖಚಿತಪಡಿಸಲು ಸಹಾಯವಾಗುತ್ತದೆ.

ಯಾರು ಯಾರು ಅರ್ಜಿ ಸಲ್ಲಿಸಬಹುದು? (ಅಂದರೆ ಅರ್ಹತಾ ಮಾನದಂಡಗಳು)

ಆಶ್ರಯ ವಸತಿ ಯೋಜನೆ 2026ಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರು ಈ ಕೆಳಗಿನ ಅರ್ಹತಾ ಷರತ್ತುಗಳನ್ನು ಪೂರೈಸಿರಬೇಕು ಗಮನಿಸಿ:

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
  • ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು
  • ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಪಕ್ಕಾ ಮನೆ ಇರಬಾರದು
  • ಈಗಾಗಲೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಯ ಲಾಭ ಪಡೆದಿರಬಾರದು

ವಿಶೇಷ ಆದ್ಯತೆ ಯಾರಿಗೆ?

ಈ ವರ್ಗದವರಿಗೆ ಶೇ. 10 ರಷ್ಟು ವಿಶೇಷ ಆದ್ಯತೆ ನೀಡಲಾಗುತ್ತದೆ ಗಮನಿಸಿ:

  • ನಿರ್ಗತಿಕ ವಿಧವೆಯರು
  • ವಿಕಲಚೇತನರು
  • ತೃತೀಯ ಲಿಂಗಿಗಳು
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳು

ಬೇಕಾದ ಅಗತ್ಯ ದಾಖಲೆಗಳು:

ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯ:

  • ಅರ್ಜಿದಾರರ ಆಧಾರ್ ಕಾರ್ಡ್
  • ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್
  • ಕಂದಾಯ ಇಲಾಖೆಯಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD ನಂಬರ್)
  • ವಾಸಸ್ಥಳ ದೃಢೀಕರಣ ಪತ್ರ
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಕಟ್ಟಡ ಕಾರ್ಮಿಕರಾಗಿದ್ದಲ್ಲಿ ಲೇಬರ್ ಕಾರ್ಡ್ / ನೋಂದಣಿ ಸಂಖ್ಯೆ
  • ಬ್ಯಾಂಕ್ ಖಾತೆ ವಿವರಗಳು (ಆಧಾರ್ ಲಿಂಕ್ ಆಗಿರಬೇಕು)
  • ಇನ್ನು ಹೆಚ್ಚಿನ ದಾಖಲೆಗಳನ್ನು ಕೇಳಿದರೆ ನೀಡಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ:

ಅರ್ಜಿದಾರರು ತಮ್ಮ ಮನೆದಲ್ಲೇ ಕುಳಿತುಕೊಂಡು ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ, ಗ್ರಾಮ ಪಂಚಾಯತ್, ಬೆಂಗಳೂರು ಒನ್ ಕೇಂದ್ರ ಅಥವಾ ಬಿಬಿಎಂಪಿ ವಾರ್ಡ್ ಕಚೇರಿಗಳಲ್ಲಿ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.

ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:

  1. ಆಶ್ರಯ ಯೋಜನೆಯ ಅಧಿಕೃತ ವೆಬ್‌ಸೈಟ್ ತೆರೆಯಿರಿ
  2. ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಅಥವಾ ವಾರ್ಡ್ ಆಯ್ಕೆ ಮಾಡಿ
  3. ನಿಮ್ಮ ಆಧಾರ್ ಸಂಖ್ಯೆ ಮತ್ತು ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ
  4. ಕುಟುಂಬದ ಸದಸ್ಯರ ವಿವರಗಳು ತೋರಿದ ನಂತರ, ಅರ್ಜಿದಾರರ ಹೆಸರನ್ನು ಆಯ್ಕೆ ಮಾಡಿ
  5. ಜಾತಿ, ಆದಾಯ (RD ನಂಬರ್), ವಿಳಾಸ ಹಾಗೂ ಇತರೆ ವಿವರಗಳನ್ನು ಭರ್ತಿ ಮಾಡಿ
  6. Submit ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಬರುವ OTP ನಮೂದಿಸಿ
  7. ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ಬಳಿಕ ಅರ್ಜಿಯ ಸ್ವೀಕೃತಿ ಸಂಖ್ಯೆ ಪಡೆಯಿರಿ

ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು..?

ಅರ್ಜಿಯನ್ನು ಸಲ್ಲಿಸಿದ ತಕ್ಷಣ ಮನೆ ಮಂಜೂರಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಗಳಿರುತ್ತವೆ ಅದರ ಪ್ರಕಾರ, ಅರ್ಜಿದಾರರ ಪಟ್ಟಿಯನ್ನು ಗ್ರಾಮ ಸಭೆ ಅಥವಾ ವಾರ್ಡ್ ಸಭೆಯಲ್ಲಿ ಪರಿಶೀಲಿಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಸ್ಥಳೀಯ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಾರೆ
  • ಗ್ರಾಮ ಸಭೆ / ವಾರ್ಡ್ ಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ
  • ಅಂತಿಮ ಪಟ್ಟಿಯನ್ನು ಆಶ್ರಯ ಪೋರ್ಟಲ್‌ನಲ್ಲಿ ಪ್ರಕಟಿಸಲಾಗುತ್ತದೆ
  • ಆಯ್ಕೆಯಾದವರಿಗೆ SMS ಅಥವಾ ಅಧಿಕೃತ ನೋಟಿಸ್ ಮೂಲಕ ಮಾಹಿತಿ ನೀಡಲಾಗುತ್ತದೆ ನೇರ ನಿಮ್ಮ ಸಂಖ್ಯೆಗೆ.

ಹಣ ಬಿಡುಗಡೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ಆಯ್ಕೆಯಾದ ಫಲಾನುಭವಿಗಳಿಗೆ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ:

  • ತಳಪಾಯ ಹಂತ – ಮೊದಲ ಕಂತು
  • ಗೋಡೆ ಹಂತ – ಎರಡನೇ ಕಂತು
  • ಛಾವಣಿ ಹಂತ – ಮೂರನೇ ಕಂತು

ಆಶ್ರಯ ಯೋಜನೆಯ ಪ್ರಮುಖ ಲಾಭಗಳು:

  • ಸ್ವಂತ ಮನೆ ಕಟ್ಟಲು ಆರ್ಥಿಕ ಸಹಾಯ
  • ಮಹಿಳೆಯರು ಮತ್ತು ದುರ್ಬಲ ವರ್ಗಕ್ಕೆ ವಿಶೇಷ ಆದ್ಯತೆ
  • ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆ
  • ಮಧ್ಯವರ್ತಿಗಳ ತೊಂದರೆ ಇಲ್ಲ
  • ಪಾರದರ್ಶಕ ಆಯ್ಕೆ ಪ್ರಕ್ರಿಯೆ

ಫಲಾನುಭವಿಗಳಿಗೆ ಉಪಯುಕ್ತ ಸಲಹೆಗಳು

  • ಅರ್ಜಿ ಸಲ್ಲಿಸಿದ ಬಳಿಕ ಗ್ರಾಮ ಸಭೆ ಅಥವಾ ವಾರ್ಡ್ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು
  • ಪ್ರತಿ ಎಲ್ಲಾ ದಾಖಲೆಗಳು ಸರಿಯಾಗಿರಲಿ
  • ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿರಬೇಕು
  • ಮನೆಯ ನಿರ್ಮಾಣ ಹಂತಗಳನ್ನು ಸರಿಯಾಗಿ ಪೂರ್ಣಗೊಳಿಸಿದ ಬಳಿಕವೇ ಹಣ ಬಿಡುಗಡೆ ಆಗುತ್ತದೆ
  • ಯಾವುದೇ ಮಧ್ಯವರ್ತಿಗೆ ಹಣ ನೀಡಬೇಡಿ – ಯೋಜನೆ ಸಂಪೂರ್ಣ ಉಚಿತವಾಗಿರುತ್ತೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

ಮನೆ ಅರ್ಜಿ ಲಿಂಕ್:Click here 

FAQ:

1. ಆಶ್ರಯ ಯೋಜನೆ 2026ಕ್ಕೆ ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕದ ಕಾಯಂ ನಿವಾಸಿಯಾಗಿರುವ, ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರುವ ಹಾಗೂ ಸ್ವಂತ ಪಕ್ಕಾ ಮನೆ ಇಲ್ಲದವರು ಅರ್ಜಿ ಸಲ್ಲಿಸಬಹುದು.

2. ಈ ಯೋಜನೆಯಡಿ ಎಷ್ಟು ಹಣ ಸಿಗುತ್ತದೆ?

ಮನೆ ನಿರ್ಮಾಣಕ್ಕಾಗಿ ಗರಿಷ್ಠ ₹2 ಲಕ್ಷವರೆಗೆ ಸರ್ಕಾರದಿಂದ ಉಚಿತ ಹಣ ನೀಡಲಾಗುತ್ತದೆ.

3. ಅರ್ಜಿ ಸಲ್ಲಿಸಲು ಶುಲ್ಕ ಇದೆಯೇ?

ಇಲ್ಲ. ಆಶ್ರಯ ಯೋಜನೆಗೆ ಅರ್ಜಿ ಸಲ್ಲಿಸುವುದು ಸಂಪೂರ್ಣ ಉಚಿತ.

4. ಹಣವನ್ನು ಒಂದೇ ಬಾರಿ ಕೊಡಲಾಗುತ್ತದೆಯೇ?

ಇಲ್ಲ. ಮನೆ ನಿರ್ಮಾಣದ ಹಂತಗಳ ಆಧಾರದ ಮೇಲೆ ಮೂರು ಕಂತುಗಳಲ್ಲಿ ಹಣ ಜಮಾ ಮಾಡಲಾಗುತ್ತದೆ.

5. ಅರ್ಜಿ ಸಲ್ಲಿಸಿದ ನಂತರ ಆಯ್ಕೆ ಆಗದಿದ್ದರೆ ಮತ್ತೆ ಅರ್ಜಿ ಹಾಕಬಹುದೇ?

ಹೌದು. ಮುಂದಿನ ಸುತ್ತಿನಲ್ಲಿ ಪುನಃ ಅರ್ಜಿ ಸಲ್ಲಿಸಬಹುದು.

6. ಮಹಿಳೆಯರಿಗೆ ವಿಶೇಷ ಸೌಲಭ್ಯ ಇದೆಯೇ?

ಹೌದು. ವಿಧವೆಯರು ಮತ್ತು ಮಹಿಳಾ ಮುಖ್ಯಸ್ಥೆಯಿರುವ ಕುಟುಂಬಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

7. ಗ್ರಾಮ ಸಭೆಗೆ ಹೋಗುವುದು ಕಡ್ಡಾಯವೇ?

ಹೌದು. ಅಂತಿಮ ಆಯ್ಕೆ ಗ್ರಾಮ ಸಭೆ ಅಥವಾ ವಾರ್ಡ್ ಸಭೆಯಲ್ಲೇ ನಡೆಯುವುದರಿಂದ ಹಾಜರಾತಿ ಬಹಳ ಮುಖ್ಯ.

Leave a Comment

WhatsApp Logo Join WhatsApp Group!