ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2026.! SSLC,ITI ಆದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಇದೆ ಸುವರ್ಣ ಅವಕಾಶ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು  ಲೇಖನಕ್ಕೆ ಸ್ವಾಗತ.

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ರೈಲ್ವೆ ಫ್ಯಾಕ್ಟರಿ ನೇಮಕಾತಿ 2026 ಕೇವಲ 10ನೇ ತರಗತಿ ಹಾಗೂ ಐ ಟಿ ಐ ಪಾಸ್ ಆಗುವವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

WhatsApp Group Join Now
Telegram Group Join Now

ಬೆಂಗಳೂರು ಯಲಹಂಕದಲ್ಲಿರುವ ಭಾರತೀಯ ರೈಲ್ವೆಯ ಪ್ರಮುಖ ಉತ್ಪಾದನಾ ಘಟಕವಾದ ರೈಲ್ ವೀಲ್ ಫ್ಯಾಕ್ಟರಿ (Rail Wheel Factory – RWF) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

 ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿರುವ ಯುವಕರಿಗೆ ಇದು ಅತ್ಯುತ್ತಮ ಹಾಗೂ ಸುವರ್ಣ ಅವಕಾಶವಾಗಿದೆ. ವಿಶೇಷವಾಗಿ ಐಟಿಐ (ITI) ಪೂರೈಸಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ದೊಡ್ಡ ಅವಕಾಶವನ್ನು ಒದಗಿಸುತ್ತದೆ.

ಮುಖ್ಯವಾಗಿ ಗಮನಿಸಿ ಈ ನೇಮಕಾತಿ ಮುಖ್ಯವಾಗಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದ್ದು, ವಿವಿಧ ತಾಂತ್ರಿಕ ಟ್ರೇಡ್‌ಗಳಲ್ಲಿ ತರಬೇತಿ ಪಡೆಯುವ ಅವಕಾಶವನ್ನು ನೀಡುತ್ತದೆ. ಭಾರತ ಸರ್ಕಾರದ ರೈಲ್ವೆ ಇಲಾಖೆಯ ಅಡಿಯಲ್ಲಿ ನಡೆಯುವ ಈ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಪ್ರಸ್ತುತ ಈ ಒಂದು ಹುದ್ದೆಗಳು ಖಾಲಿ ಇರುವುದು ಯಲಹಂಕದಲ್ಲಿ. ರೈಲ್ ವೀಲ್ ಫ್ಯಾಕ್ಟರಿ ದೇಶದ ಪ್ರಮುಖ ರೈಲ್ವೆ ಚಕ್ರಗಳ ಉತ್ಪಾದನಾ ಘಟಕವಾಗಿದ್ದು, ಇಲ್ಲಿ ತರಬೇತಿ ಪಡೆಯುವ ಮೂಲಕ ಅಭ್ಯರ್ಥಿಗಳು ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು ಪಡೆಯಬಹುದು. ಆದ್ದರಿಂದ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳುವುದು ಉತ್ತಮವಾಗಿದೆ.

ನೇಮಕಾತಿ ಸಂಕ್ಷಿಪ್ತ ಮಾಹಿತಿ

ವಿವರಮಾಹಿತಿ
ನೇಮಕಾತಿ ಸಂಸ್ಥೆರೈಲ್ ವೀಲ್ ಫ್ಯಾಕ್ಟರಿ (RWF), ಭಾರತೀಯ ರೈಲ್ವೆ
ಹುದ್ದೆಯ ಹೆಸರುಟ್ರೇಡ್ ಅಪ್ರೆಂಟಿಸ್
ಉದ್ಯೋಗ ಪ್ರಕಾರಕೇಂದ್ರ ಸರ್ಕಾರ ಉದ್ಯೋಗ
ಉದ್ಯೋಗ ಸ್ಥಳಒಟ್ಟು ಹುದ್ದೆಗಳುಯಲಹಂಕ, ಬೆಂಗಳೂರು192
ಅರ್ಜಿ ವಿಧಾನಆನ್‌ಲೈನ್ / ಆಫ್‌ಲೈನ್
ಅರ್ಹತೆSSLC + ITI
ವಯೋಮಿತಿ15 ರಿಂದ 24 ವರ್ಷ
ಅಧಿಕೃತ ವೆಬ್‌ಸೈಟ್rwf.indianrailways.gov.in

ಹುದ್ದೆಗಳ ವಿವರ:

  • ಒಟ್ಟು 192 ಹುದ್ದೆಗಳು ಖಾಲಿ ಇದೆ.

ಟ್ರೇಡ್ ಹೆಸರು – ಹುದ್ದೆಗಳ ಸಂಖ್ಯೆ

  • ಫಿಟ್ಟರ್ (Fitter) – 85 ಹುದ್ದೆಗಳು
  • ಮೆಷಿನಿಸ್ಟ್ (Machinist) – 31 ಹುದ್ದೆಗಳು
  • ಮೆಕ್ಯಾನಿಕ್ (ಮೋಟಾರ್ ವಾಹನ) [Mechanic Motor Vehicle] – 8 ಹುದ್ದೆಗಳು
  • ಟರ್ನರ್ (Turner) – 5 ಹುದ್ದೆಗಳು
  • CNC ಪ್ರೋಗ್ರಾಮಿಂಗ್ & ಆಪರೇಟರ್ (COE Group) – 23 ಹುದ್ದೆಗಳು
  • ಎಲೆಕ್ಟ್ರಿಷಿಯನ್ (Electrician) – 18 ಹುದ್ದೆಗಳು
  • ಎಲೆಕ್ಟ್ರಾನಿಕ್ ಮೆಕ್ಯಾನಿಕ್ (Electronic Mechanic) – 22 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಮಾನ್ಯತೆ ಪಡೆದ ಮಂಡಳಿಯಿಂದ SSLC / 10ನೇ ತರಗತಿ ಪಾಸಾಗಿರಬೇಕು
  • ಕನಿಷ್ಠ 50% ಅಂಕಗಳು  ಪಡೆದಿರಬೇಕು.
  • ಸಂಬಂಧಪಟ್ಟ ಟ್ರೇಡ್‌ನಲ್ಲಿ NCVT ಮಾನ್ಯತೆ ಪಡೆದ ITI ಪ್ರಮಾಣಪತ್ರ ಹೊಂದಿರಬೇಕು

ವಯೋಮಿತಿ..?

  • ಕನಿಷ್ಠ ವಯಸ್ಸು: 15 ವರ್ಷ
  • ಗರಿಷ್ಠ ವಯಸ್ಸು: 24 ವರ್ಷ

ವಯೋಮಿತಿ ಸಡಿಲಿಕೆ

  • SC / ST ಅಭ್ಯರ್ಥಿಗಳು – 5 ವರ್ಷ
  • OBC ಅಭ್ಯರ್ಥಿಗಳು – 3 ವರ್ಷ
  • PwD ಅಭ್ಯರ್ಥಿಗಳು – ಸರ್ಕಾರದ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ (Application Fee)

General / OBC ಅಭ್ಯರ್ಥಿಗಳು: ₹100

SC / ST / PwBD / ಮಹಿಳಾ ಅಭ್ಯರ್ಥಿಗಳು: ಯಾವುದೇ ಶುಲ್ಕ ಇಲ್ಲ (Free)

ಸ್ಟೈಪೆಂಡ್ ಅಥವಾ ಭತ್ಯೆ..?

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು ₹10,000 ರಿಂದ ₹12,000 ರವರೆಗೆ ಸ್ಟೈಪೆಂಡ್ ದೊರೆಯಬಹುದು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.

ಆಯ್ಕೆ ಪ್ರಕ್ರಿಯೆ..?

ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆ ಕೆಳಗಿನಂತಿರುತ್ತದೆ ಗಮನಿಸಿ:

  1. ಮೆರಿಟ್ ಲಿಸ್ಟ್ ತಯಾರಿ – 10ನೇ ತರಗತಿ ಮತ್ತು ITI ಅಂಕಗಳ ಆಧಾರದ ಮೇಲೆ
  2. ಡಾಕ್ಯುಮೆಂಟ್ ಪರಿಶೀಲನೆ
  3. ಮೆಡಿಕಲ್ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ..?

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ
  3. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳನ್ನು ಲಗತ್ತಿಸಿ
  5. ಸೂಚಿಸಿದ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ

ಅಗತ್ಯ ದಾಖಲೆಗಳು..!

  • ಆಧಾರ್ ಕಾರ್ಡ್
  • SSLC ಅಂಕಪಟ್ಟಿ
  • ITI ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ಗುರುತಿನ ಚೀಟಿ

ಪ್ರಮುಖ ದಿನಾಂಕಗಳು:

  • ಅರ್ಜಿ ಪ್ರಾರಂಭ 28 ಫೆಬ್ರುವರಿ 2026
  • ಅರ್ಜಿ ಕೊನೇ 1 ಏಪ್ರಿಲ್ 2026

ಉಪಯುಕ್ತ ಸಲಹೆಗಳು

ರೈಲ್ವೆ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಮುಖ್ಯ. ಕೊನೆಯ ದಿನಾಂಕದ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಐಟಿಐ ಪೂರೈಸಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ರೈಲ್ವೆ ಕ್ಷೇತ್ರದಲ್ಲಿ ಅನುಭವ ಪಡೆಯಲು ಸಹಾಯ ಮಾಡುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

ಸಾಮಾನ್ಯ ಪ್ರಶ್ನೆಗಳು (FAQ)

1. RWF ನೇಮಕಾತಿ ಯಾವ ಹುದ್ದೆಗಳಿಗೆ ನಡೆಯುತ್ತಿದೆ?
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ.

2. ಅರ್ಜಿ ಸಲ್ಲಿಸಲು ಕನಿಷ್ಠ ಅರ್ಹತೆ ಏನು?
SSLC ಹಾಗೂ ಸಂಬಂಧಪಟ್ಟ ಟ್ರೇಡ್‌ನಲ್ಲಿ ITI.

3. ವಯೋಮಿತಿ ಎಷ್ಟು?
15 ರಿಂದ 24 ವರ್ಷ.

4. ಆಯ್ಕೆ ಪ್ರಕ್ರಿಯೆಯಲ್ಲಿ ಪರೀಕ್ಷೆ ಇದೆಯೇ?
ಇಲ್ಲ, ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

5. ಸ್ಟೈಪೆಂಡ್ ಎಷ್ಟು ಸಿಗುತ್ತದೆ?
ಸುಮಾರು ₹10,000 ರಿಂದ ₹12,000 ಪ್ರತಿ ತಿಂಗಳು.

6. ಉದ್ಯೋಗ ಸ್ಥಳ ಯಾವುದು?
ಯಲಹಂಕ, ಬೆಂಗಳೂರು.

7. ಅರ್ಜಿ ಹೇಗೆ ಸಲ್ಲಿಸಬೇಕು?
ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.

8. ಐಟಿಐ ಕಡ್ಡಾಯವೇ?
ಹೌದು, ಸಂಬಂಧಪಟ್ಟ ಟ್ರೇಡ್‌ನಲ್ಲಿ ITI ಅಗತ್ಯ.

9. ಮಹಿಳೆಯರು ಅರ್ಜಿ ಸಲ್ಲಿಸಬಹುದೇ?
ಹೌದು, ಅರ್ಹರಾದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

10. ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬಹುದು?
RWF ಅಧಿಕೃತ ವೆಬ್‌ಸೈಟ್ ಮೂಲಕ.

Leave a Comment

WhatsApp Logo Join WhatsApp Group!