ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಿಕೆ ಸ್ವಾಗತ.
ಪ್ರಸ್ತುತ ಇಂದಿನ ಎಂದಲೇ ಗಣದಲ್ಲಿ ರಾಯಚೂರು ಆರೋಗ್ಯ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ.
ಹೌದು ನೀವು ಸರಿಯಾಗಿ ಓದಿದ್ದೀರಿ ಇದೀಗ ರಾಯಚೂರು ಇಲಾಖೆಯಲ್ಲಿ ಖಾಲಿ ಇರುವಂತೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಆರೋಗ್ಯ ನಿರಕ್ಷಣಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲು ಮುಂದಾಗಿದೆ.
ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ವತಿಯಿಂದ 2026ನೇ ಸಾಲಿಗೆ ಸಂಬಂಧಿಸಿದಂತೆ ಮಹತ್ವದ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ನೋಡಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (NUHM) ಮತ್ತು PM-ABHIM ಯೋಜನೆಗಳ ಅಡಿಯಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ (Junior Female Health Assistant) ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ (Health Inspector) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿ ವಿಶೇಷತೆ ಏನೆಂದರೆ ಕೇವಲ 10ನೇ ತರಗತಿ ಪಾಸ್ ಆದ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಉತ್ತಮ ಅವಕಾಶ ಒದಗಿಸುತ್ತದೆ.

ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಭದ್ರ ಉದ್ಯೋಗ, ನಿಯಮಿತ ಸಂಬಳ ಹಾಗೂ ಸಮಾಜ ಸೇವೆಯ ಉತ್ತಮ ಅವಕಾಶವಾಗಿದೆ. ರಾಯಚೂರು ಜಿಲ್ಲೆಯೊಳಗಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದರಿಂದ, ಸ್ಥಳೀಯ ಯುವತಿಯರು ಮತ್ತು ಯುವಕರಿಗೆ ಇದು ದೊಡ್ಡ ಉದ್ಯೋಗಾವಕಾಶವಾಗಲಿದೆ ಅಂತ ಹೇಳಬಹುದು ಒಂದು ವೇಳೆ ನೀವೇನಾದರೂ ಬೇರೆ ಜಿಲ್ಲೆಯವರಾಗಿದ್ದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಕೇವಲ ರಾಯಚೂರಿನಲ್ಲಿ ಇರುವಂತಹ ಅವರಿಗೆ ಮಾತ್ರ ಏನಿಲ್ಲ.
ಅಧಿಸೂಚನೆಯ ಸಂಕ್ಷಿಪ್ತ ಮಾಹಿತಿ:
| ವಿವರ | ಮಾಹಿತಿ |
| ಇಲಾಖೆ / ಸಂಸ್ಥೆ | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS), ರಾಯಚೂರು |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರ (ಗುತ್ತಿಗೆ ಆಧಾರಿತ) |
| ಹುದ್ದೆಗಳ ಹೆಸರು | ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆರೋಗ್ಯ ನಿರೀಕ್ಷಣಾಧಿಕಾರಿ |
| ಒಟ್ಟು ಹುದ್ದೆಗಳು | 20 |
| ಕೆಲಸದ ಸ್ಥಳ | ರಾಯಚೂರು ಜಿಲ್ಲೆ |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಜಿ ಕೊನೆಯ ದಿನಾಂಕ | 11 ಮಾರ್ಚ್ 2026 |
| ಅಧಿಕೃತ ವೆಬ್‌ಸೈಟ್ | dhfws.karnataka.gov.in |
ಹುದ್ದೆಗಳ ವಿವರ:
- ಕಿರಿಯ ಮಹಿಳಾ ಆರೋಗ್ಯ ಸಹಾಯಕಿ – 19 ಹುದ್ದೆಗಳು
- ಆರೋಗ್ಯ ನಿರೀಕ್ಷಣಾಧಿಕಾರಿ – 1 ಹುದ್ದೆ
ಈ ಹುದ್ದೆಗಳು ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸುವ ಉದ್ದೇಶದಿಂದ ಭರ್ತಿ ಮಾಡಲಾಗುತ್ತಿವೆ.
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
- ಸಮುದಾಯ ಆರೋಗ್ಯ ಸಹಾಯಕ ತರಬೇತಿ (Community Health Assistant Training) ಅಥವಾ ಸಂಬಂಧಿತ ತರಬೇತಿ ಪಡೆದವರಿಗೆ ಆದ್ಯತೆ.
ವಯೋಮಿತಿ:
- ಗರಿಷ್ಠ ವಯಸ್ಸು: 40 ವರ್ಷ
- ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಸಂಬಳ ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಆಕರ್ಷಕ ಮಾಸಿಕ ಸಂಬಳ ನೀಡಲಾಗುತ್ತದೆ. ಜೊತೆಗೆ:
- ಭದ್ರ ಉದ್ಯೋಗ
- ಅನುಭವ ಪ್ರಮಾಣಪತ್ರ
- ಭವಿಷ್ಯದಲ್ಲಿ ಶಾಶ್ವತ ಉದ್ಯೋಗಕ್ಕೆ ಅವಕಾಶ
- ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಗೌರವ
ಅರ್ಜಿ ಶುಲ್ಕ:
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು ಇದರ ಕುರಿತು ಯಾವುದೇ ತರಹ ಪ್ರಶ್ನೆ ಇದ್ದರೆ ನೋಟಿಫಿಕೇಶನ್ ಚೆಕ್ ಮಾಡಬಹುದು.
ಆಯ್ಕೆ ಪ್ರಕ್ರಿಯೆ:
- ಶೈಕ್ಷಣಿಕ ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟಿಂಗ್
- ಸಂದರ್ಶನ (Interview)
- ದಾಖಲೆ ಪರಿಶೀಲನೆ (Document Verification)
- ಅಂತಿಮ ಮೆರಿಟ್ ಪಟ್ಟಿ
ಪ್ರಮುಖ ದಿನಾಂಕಗಳು
| ಹಂತ | ದಿನಾಂಕ |
| ಅರ್ಜಿ ಪ್ರಾರಂಭ | 25 ಫೆಬ್ರವರಿ 2026 |
| ಅರ್ಜಿ ಕೊನೆಯ ದಿನ | 11 ಮಾರ್ಚ್ 2026 |
| ಮೆರಿಟ್ ಪಟ್ಟಿ | ನಂತರ ಪ್ರಕಟಿಸಲಾಗುವುದು |
ಅಗತ್ಯ ದಾಖಲೆಗಳ ಪಟ್ಟಿ:
- SSLC ಅಂಕಪಟ್ಟಿ
- ಜನನ ಪ್ರಮಾಣಪತ್ರ / ವಯಸ್ಸಿನ ಪ್ರಮಾಣಪತ್ರ
- ಸಮುದಾಯ ಆರೋಗ್ಯ ತರಬೇತಿ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಸಹಿ ಸ್ಕ್ಯಾನ್ ಕಾಪಿ
- ಗಮನಿಸಿ ಇನ್ನು ಹೆಚ್ಚಿನ ದಾಖಲೆಗಳನ್ನು ಕೇಳಿದರೆ ಅಭಿವೃದ್ಧಿಗಳು ಒದಗಿಸಬೇಕು.
ನಮ್ಮ ಕೊನೆ ಮಾತು
ರಾಯಚೂರು DHFWS ನೇಮಕಾತಿ 2026 ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಇದಾಗಿದೆ ಅಂತ ಹೇಳುತ್ತಾ ಹಾಗೆ ಇದು ಅವಕಾಶ ಅಂದರೆ ಏನು ಪರವಾಗಿಲ್ಲ ಇದೊಂದು ಗೋಲ್ಡನ್ ಚಾನ್ಸ್ ಎನ್ನಬಹುದು ಏಕೆಂದರೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಹಾಗೆ ಅರ್ಹ ಅಭ್ಯರ್ಥಿಗಳು 11 ಮಾರ್ಚ್ 2026ರೊಳಗೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ:
1. ಈ ನೇಮಕಾತಿ ಯಾವ ಜಿಲ್ಲೆಗೆ ಮಾತ್ರ ಅನ್ವಯಿಸುತ್ತದೆ?
→ ರಾಯಚೂರು ಜಿಲ್ಲೆಗೆ ಮಾತ್ರ.
2. 10ನೇ ತರಗತಿ ಪಾಸ್ ಅಭ್ಯರ್ಥಿಗಳು ಅರ್ಜಿ ಹಾಕಬಹುದಾ?
→ ಹೌದು.
3. ಅರ್ಜಿ ಶುಲ್ಕ ಇದೆಯಾ?
→ ಇಲ್ಲ, ಉಚಿತ.
4. ಮಹಿಳಾ ಅಭ್ಯರ್ಥಿಗಳಿಗೆ ಮಾತ್ರವೇ?
→ ಮುಖ್ಯವಾಗಿ ಮಹಿಳೆಯರಿಗೆ ಆದ್ಯತೆ.
5. ವಯೋಮಿತಿ ಎಷ್ಟು?
→ ಗರಿಷ್ಠ 40 ವರ್ಷ.