ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ನಾವು ಕೊಂಕಣ ರೈಲ್ವೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ.
ಹೌದು ನೀವು ಸರಿಯಾಗಿ ಓದಿದ್ದೀರಿ ನಿಮ್ಮ ವಿದ್ಯಾರ್ಹತೆ ಯಾವುದೇ ಡಿಗ್ರಿ ಆಗಿರಬಹುದು ಅಥವಾ ಡಿಪ್ಲೋಮಾ ಆಗಿರಬಹುದು ನಡೆಯುತ್ತೆ ಅರ್ಜಿ ಸಲ್ಲಿಸಬಹುದು.
ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವ ಆಗುತ್ತೆ ಉದಾಹರಣೆಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ಗಮನಿಸಿ.
ಕೊಂಕಣ ರೈಲ್ವೆ ಹುದ್ದೆಗೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಈ ಒಂದು ಹುದ್ದೆಗಳು ಪರಮನೆಂಟ್ ಹುದ್ದೆಗಳು ಆಗಿರುತ್ತ..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ..? ಅರ್ಜಿ ಪ್ರಾರಂಭ ದಿನಾಂಕ ಯಾವುದು? ಹಾಗೆ ಕೊನೆ ದಿನಾಂಕ ಯಾವುದು

ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಹಲವಾರು ತರಹದ ಪ್ರಶ್ನೆಗಳು ಉದ್ಭವ ವಾಗುತ್ತದೆ. ನಿಮಗಂತೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನ ಒದಗಿಸಲಾಗಿದೆ ಜೊತೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಮತ್ತು ನೋಟಿಫಿಕೇಶನ್ ಪಿಡಿಎಫ್ ಒದಗಿಸಲಾಗಿದೆ ಒಂದೇ ಆರ್ಟಿಕಲ್ ಅಲ್ಲಿ ಕಂಪ್ಲೀಟ್ ಮಾಹಿತಿ ಇದೆ.
ಸದ್ಯ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಸಂಸ್ಥೆಯು Graduate Apprentice ಮತ್ತು Technician (Diploma) Apprentice ಹುದ್ದೆಗಳಿಗಾಗಿ 2026ನೇ ಸಾಲಿನ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು.
ಈ ಒಂದು ನೇಮಕಾತಿ ಮೂಲಕ ಒಟ್ಟು 190 ಅಪ್ರೆಂಟಿಸ್ ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ.
ಹಾಗೆ ಎಲ್ಲಾ ಅಭ್ಯರ್ಥಿಗಳು ಗಮನಿಸಿ ನೋಡಿ ಈ ಅವಕಾಶವು ಇಂಜಿನಿಯರಿಂಗ್ ಪದವಿಧರರು, ಡಿಪ್ಲೊಮಾ ಅಭ್ಯರ್ಥಿಗಳು ಹಾಗೂ ಸಾಮಾನ್ಯ ಪದವೀಧರರಿಗೆ (BA, BSc, BCom, BBA ಮುಂತಾದವರು) ಅತ್ಯುತ್ತಮ ವೃತ್ತಿಪರ ತರಬೇತಿ ಮತ್ತು ಆದಾಯ ಗಳಿಸುವ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ನೀವೇನಾದ್ರೂ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಇರುವಂತ ಅಭ್ಯರ್ಥಿಗಳಾಗಿದ್ದರೆ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ಕರ್ನಾಟಕದಲ್ಲಿಯೇ ನಿಮಗೆ ಜಾಬ್ ಸಿಗುತ್ತೆ ನೀವು ಈ ಮೇಲ್ಗಡೆ ತಿಳಿಸಿರುವ ಮೂರು ರಾಜ್ಯಗಳ ಒಳಗಡೆಯಲ್ಲಿ ಯಾವುದಾದರೂ ಒಂದು ರಾಜ್ಯದಲ್ಲಿ ಇದ್ದಿದ್ರೆ ಹುದ್ದೆ ಸಿಗುತ್ತೆ.
ನೋಡಿ ಈ ಒಂದು ಹುದ್ದೆ ಕೊಂಕಣ ರೈಲ್ವೆ ವಲಯದಲ್ಲಿ ಈ ತರಬೇತಿ ನಡೆಯಲಿದ್ದು, ಉದ್ಯೋಗಾವಕಾಶಕ್ಕಾಗಿ ತಯಾರಾಗುತ್ತಿರುವ ಯುವಜನರಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ.
ನೇಮಕಾತಿ ಸಂಕ್ಷಿಪ್ತ ಮಾಹಿತಿ:
| ವಿವರ | ಮಾಹಿತಿ |
| ಸಂಸ್ಥೆ | Konkan Railway Corporation Limited (KRCL) |
| ಹುದ್ದೆ ಹೆಸರು | Graduate Apprentice & Technician Apprentice |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರದ ಅಪ್ರೆಂಟಿಸ್ ತರಬೇತಿ |
| ಒಟ್ಟು ಹುದ್ದೆಗಳು | 190 |
| ಕೆಲಸದ ಸ್ಥಳ | ಮಹಾರಾಷ್ಟ್ರ, ಗೋವಾ, ಕರ್ನಾಟಕ |
| ಅರ್ಜಿ ವಿಧಾನ | ಆನ್ಲೈನ್ |
| ತರಬೇತಿ ಅವಧಿ | 1 ವರ್ಷ |
| ವೇತನ (ಸ್ಟೈಪೆಂಡ್) | ₹8,000 – ₹9,000 |
| ಕೊನೆಯ ದಿನಾಂಕ | 21 ಮಾರ್ಚ್ 2026 |
| ಅಧಿಕೃತ ವೆಬ್‌ಸೈಟ್ | www.konkanrailway.com |
ಹುದ್ದೆಗಳ ವಿವರ:
ಪದವಿ ಅಪ್ರೆಂಟಿ ಶಿಪ್ ಹುದ್ದೆಗಳು:
- ಸಿವಿಲ್ ಇಂಜಿನಿಯರಿಂಗ್ – 30
- ಎಲೆಕ್ಟ್ರಿಕಲ್ – 20
- ಎಲೆಕ್ಟ್ರಾನಿಕ್ಸ್ – 10
- ಮೆಕ್ಯಾನಿಕಲ್ – 20
- ಸಾಮಾನ್ಯ ಪದವಿ (BA/BSc/BCom/BBA/BMS/Journalism) – 30)
ಟೆಕ್ನೀಶಿಯನ್ ಡಿಪ್ಲೋಮಾ ಅಪ್ರೆಂಟಿ ಶಿಪ್ ಹುದ್ದೆಗಳು:
- ಸಿವಿಲ್ ಡಿಪ್ಲೊಮಾ – 30
- ಎಲೆಕ್ಟ್ರಿಕಲ್ ಡಿಪ್ಲೊಮಾ – 20
- ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ – 10
- ಮೆಕ್ಯಾನಿಕಲ್ ಡಿಪ್ಲೊಮಾ – 20
ಒಟ್ಟು ಹುದ್ದೆಗಳು: 190
ಅರ್ಹತಾ ಮಾನದಂಡ:

ವಿದ್ಯಾರ್ಹತೆ ಏನಾಗಿರಬೇಕು..?
- ಸಂಬಂಧಿಸಿದ ಶಾಖೆಯಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾ.
- ಸಾಮಾನ್ಯ ಪದವೀಧರರಿಗೆ BA, BSc, BCom, BBA, BMS ಅಥವಾ ಪತ್ರಿಕೋದ್ಯಮ ಪದವಿ ಅಗತ್ಯ.
- ಅಭ್ಯರ್ಥಿಗಳು 2021 ರಿಂದ 2025ರ ನಡುವೆ ಪದವಿ ಪಡೆದಿರಬೇಕು.
- NATS ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ.
ವಯೋಮಿತಿ (01-01-2026 ಆಧಾರಿತ):
- ಕನಿಷ್ಠ: 18 ವರ್ಷ
- ಗರಿಷ್ಠ: 25 ವರ್ಷ
ವಯೋಸಡಿಲಿಕೆ:
- SC/ST – 5 ವರ್ಷ
- OBC – 3 ವರ್ಷ
ವೇತನ ಮತ್ತು ಸೌಲಭ್ಯಗಳು:
- ಗ್ರಾಜುವೇಟ್ ಅಪ್ರೆಂಟಿಸಿ.Graduate Apprentice – ₹9,000/ತಿಂಗಳು
- ಟೆಕ್ನಿಶಿಯನ್ ಅಪರ್ಟಿ ಷಿಪ್.Technician Apprentice – ₹8,000/ತಿಂಗಳು
ಅರ್ಜಿ ಶುಲ್ಕ:
| ವರ್ಗ | ಶುಲ್ಕ |
| ಸಾಮಾನ್ಯ / OBC / EWS | ₹100 |
| SC / ST / ಮಹಿಳೆಯರು / ಅಲ್ಪಸಂಖ್ಯಾತರು | ಶುಲ್ಕವಿಲ್ಲ |
ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಆಯ್ಕೆ ಕೆಳಗಿನ ಆಧಾರದ ಮೇಲೆ ನಡೆಯುತ್ತದೆ:
- ಮೆರಿಟ್ ಲಿಸ್ಟ್ – ಪದವಿ / ಡಿಪ್ಲೊಮಾದ ಶೇಕಡಾವಾರು ಅಂಕಗಳ ಆಧಾರಿತ.
- ಸಮ ಅಂಕಗಳಿದ್ದಲ್ಲಿ ವಯಸ್ಸು ಹೆಚ್ಚಿನವರಿಗೆ ಆದ್ಯತೆ.
- ಭೂಮಿ ಕಳೆದುಕೊಂಡ ಕುಟುಂಬದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ.
- ಪ್ರಾದೇಶಿಕ ಅಭ್ಯರ್ಥಿಗಳಿಗೆ ಎರಡನೇ ಆದ್ಯತೆ.
- ದಾಖಲೆ ಪರಿಶೀಲನೆ (Document Verification).
ಪ್ರಮುಖ ದಿನಾಂಕಗಳು:
| ಕಾರ್ಯಕ್ರಮ | ದಿನಾಂಕ |
| ಅಧಿಸೂಚನೆ ಬಿಡುಗಡೆ | 20 ಫೆಬ್ರವರಿ 2026 |
| ಅರ್ಜಿ ಪ್ರಾರಂಭ | 20 ಫೆಬ್ರವರಿ 2026 |
| ಕೊನೆಯ ದಿನ | 21 ಮಾರ್ಚ್ 2026 |
ಅರ್ಜಿ ಸಲ್ಲಿಸುವ ವಿಧಾನ:
- ಮೊದಲು NATS ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ID ಪಡೆಯಿರಿ.
- ನಂತರ www.konkanrailway.com ವೆಬ್‌ಸೈಟ್‌ಗೆ ಭೇಟಿ ನೀಡಿ.
- Apprentice Recruitment ಲಿಂಕ್ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ.
- ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿ ಮಾಡಿ.
- ಅಂತಿಮವಾಗಿ ಅರ್ಜಿ ಸಲ್ಲಿಸಿ ಪ್ರಿಂಟ್ ತೆಗೆದುಕೊಳ್ಳಿ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- SSLC / PUC / ಪದವಿ ಪ್ರಮಾಣಪತ್ರ
- ಅಂಕಪಟ್ಟಿ
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಫೋಟೋ ಮತ್ತು ಸಹಿ
- ಬ್ಯಾಂಕ್ ವಿವರಗಳು
- ಎಲ್ಲರೂ ಗಮನಿಸಿ ಅರ್ಜಿ ಸಲ್ಲಿಸುವ ಮುನ್ನ ಇನ್ನು ಹೆಚ್ಚಿನ ದಾಖಲೆಗಳು ಕೇಳಿದ್ದೆ ಆದಲ್ಲಿ ನೀವು ಒದಗಿಸಬೇಕು.
ನಮ್ಮ ಕೊನೆಯ ಮಾತು:
ಕೊಂಕಣ ರೈಲ್ವೆ ನೇಮಕಾತಿ 2026 ಯುವಜನರಿಗೆ ಸರ್ಕಾರಿ ವಲಯದಲ್ಲಿ ತರಬೇತಿ ಪಡೆದು ವೃತ್ತಿಜೀವನ ಆರಂಭಿಸಲು ಅತ್ಯುತ್ತಮ ಹಾಗೂ ಸುವರ್ಣ ಅವಕಾಶ ಅಂತ ಹೇಳಬಹುದು ನೋಡಿ ಇದೊಂದು ಗೋಲ್ಡನ್ ಅಪಾರ್ಥನಾಟಿ ಅಂತ ಹೇಳಬಹುದು ಏಕೆಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಕೈಬಿಡದೆ ಬಳಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ:
1) ಈ ನೇಮಕಾತಿಗೆ ಲಿಖಿತ ಪರೀಕ್ಷೆ ಇದೆಯೇ?
ಇಲ್ಲ. ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಪದವಿ / ಡಿಪ್ಲೊಮಾ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
2) ಯಾವ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು?
ಇಂಜಿನಿಯರಿಂಗ್ ಪದವಿ, ಡಿಪ್ಲೊಮಾ ಹಾಗೂ ಸಾಮಾನ್ಯ ಪದವಿ (BA, BSc, BCom, BBA, BMS, Journalism) ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
3) ಒಟ್ಟು ಎಷ್ಟು ಹುದ್ದೆಗಳಿವೆ?
ಒಟ್ಟು 190 ಅಪ್ರೆಂಟಿಸ್ ಹುದ್ದೆಗಳು ಲಭ್ಯವಿವೆ.
4) ವೇತನ (ಸ್ಟೈಪೆಂಡ್) ಎಷ್ಟು ಸಿಗುತ್ತದೆ?
Graduate Apprentice – ₹9,000/ತಿಂಗಳು
Technician Apprentice – ₹8,000/ತಿಂಗಳು
5) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
21 ಮಾರ್ಚ್ 2026 ಕೊನೆಯ ದಿನಾಂಕ.