ಪಂಜಾಬ್ ನ್ಯಾಷನಲ್ ಬ್ಯಾಂಕ್  5138 ಬೃಹತ್ ಹುದ್ದೆಗಳ ನೇಮಕಾತಿ.! ಯಾವುದೇ ಡಿಗ್ರಿ ಪಾಸ್ ಆದರೆ ಸಾಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ನಾವು ಪಂಜಾಬ್ ನ್ಯಾಷನಲ್ ಬ್ಯಾಂಕ್ 5,138 ಬೃಹತ್ ಹುದ್ದೆಗಳ ನೇಮಕಾತಿ ಮಾಡ್ತಿದೆ. 

WhatsApp Group Join Now
Telegram Group Join Now

ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

ನೋಡಿ ನಿಮಗೆ ಸಾಮಾನ್ಯವಾಗಿ ತಿಳಿದಿರಬಹುದು ಯಾವುದೇ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ಹಲವಾರು ಕಾಡುತ್ತೆ.

ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು..? ಅರ್ಜಿ ಪ್ರಾರಂಭ ಯಾವಾಗ..? ವೇತನ ಎಷ್ಟು..?

ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹಲವಾರು ತರಹದ ಪ್ರಶ್ನೆಗಳು ಕಾಡುತ್ತಲೇ ಇರುತ್ತೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಈ ಮಾಹಿತಿಯಂತೆ ನೀವು ಮಾಡಿದ್ದೆ ಆದರೆ ಆರಾಮವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ನಿಮಗೆ ತಿಳಿದಿರಬಹುದು ಅಥವಾ ತಿಳಿದೇ ಇರಬಹುದು ಅದೇನೆಂದರೆ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2026ನೇ ಸಾಲಿನ ಅಪ್ರೆಂಟಿಸ್ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಒಟ್ಟು 5,138 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಲು ಬ್ಯಾಂಕ್ ಮುಂದಾಗಿದೆ.

 ಯಾವುದೇ ವಿಷಯದಲ್ಲಿ ಪದವಿ ಪಡೆದ ಯುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ವೃತ್ತಿ ಆರಂಭದ ಅವಕಾಶವಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಸಹಾಯ ಮಾಡಲಿದೆ.

ಅಭ್ಯರ್ಥಿಗಳು ಗಮನಿಸಿ ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಫೆಬ್ರವರಿ 24, 2026 ಆಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಒಂದು ವರ್ಷದ ತರಬೇತಿ ಪಡೆಯುವ ಅವಕಾಶ ಸಿಗುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯಂತ ಮಹತ್ವದ್ದಾಗಿದೆ.

ಪ್ರಮುಖ ಮಾಹಿತಿ ಸಂಕ್ಷಿಪ್ತ ವಿವರ:

  • ಸಂಸ್ಥೆಯ ಹೆಸರು: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
  • ಹುದ್ದೆ ಹೆಸರು: ಅಪ್ರೆಂಟಿಸ್
  • ಒಟ್ಟು ಹುದ್ದೆಗಳು: 5,138
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ
  • ಅರ್ಜಿ ವಿಧಾನ: ಆನ್‌ಲೈನ್
  • ಅಧಿಕೃತ ವೆಬ್‌ಸೈಟ್: www.pnbindia.in

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆ: ಫೆಬ್ರವರಿ 5, 2026
  • ಅರ್ಜಿಯ ಆರಂಭ: ಫೆಬ್ರವರಿ 8, 2026
  • ಅರ್ಜಿ ಸಲ್ಲಿಸುವ ಕೊನೆಯ ದಿನ: ಫೆಬ್ರವರಿ 24, 2026

ಅರ್ಹತಾ ಮಾನದಂಡ ಏನೇನಿರಬೇಕು:

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಹಾಗೆ ಡಿಗ್ರಿ ಫಲಿತಾಂಶವು ಡಿಸೆಂಬರ್ 31, 2025ರೊಳಗೆ ಪ್ರಕಟಗೊಂಡಿರಬೇಕು. ಅಭ್ಯರ್ಥಿಗಳು ಅಗತ್ಯವಿದ್ದಾಗ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಸಲ್ಲಿಸಲು ಸಿದ್ಧರಾಗಿರಬೇಕು.

ವಯೋಮಿತಿ (ಜನವರಿ 1, 2026ಕ್ಕೆ)

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 28 ವರ್ಷ

ಸರ್ಕಾರಿ ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಓಬಿಸಿ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಅನ್ವಯಿಸುತ್ತದೆ ನೀವು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಬಹುದು ಚಿಂತೆ ಮಾಡಬೇಡಿ, ನಿಮಗೆ ಅಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ವಿಭಾಗದ ಅಡಿಯಲ್ಲಿ ಒದಗಿಸಲಾಗಿರುತ್ತದೆ.

ತರಬೇತಿ ಅವಧಿ ಮತ್ತು ವೇತನ:

ತರಬೇತಿ ಅವಧಿ

PNB ಅಪ್ರೆಂಟಿಸ್ ಕಾರ್ಯಕ್ರಮದ ಒಟ್ಟು ಅವಧಿ 1 ವರ್ಷ (12 ತಿಂಗಳು). ಇದರಲ್ಲಿ:

  • 2 ವಾರಗಳ ಮೂಲಭೂತ ತರಬೇತಿ
  • 50 ವಾರಗಳ ಪ್ರಾಯೋಗಿಕ ತರಬೇತಿ (On-the-Job Training) ಸೇರಿದೆ.

ಮಾಸಿಕ ಸ್ಟೈಪೆಂಡ್ / ಸಂಬಳ

  • ಗ್ರಾಮೀಣ / ಅರ್ಧನಗರ / ನಗರ ಶಾಖೆಗಳು: ₹12,300 ಪ್ರತಿ ತಿಂಗಳು
  • ಮೆಟ್ರೋ ಶಾಖೆಗಳು: ₹15,000 ಪ್ರತಿ ತಿಂಗಳು

ಇದು ತರಬೇತಿಯ ಅವಧಿಯಲ್ಲಿ ಆರ್ಥಿಕ ಭದ್ರತೆ ಒದಗಿಸುವ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯಾನುಭವ ಪಡೆಯಲು ಸಹಾಯ ಮಾಡುತ್ತದೆ ಅಂತ ಹೇಳಬಹುದು ಒಂದು ವೇಳೆ ನೀವು ಈ ಹುದ್ದೆಗೆ ಆಯ್ಕೆಯಾಗಿ ತರಬೇತಿ ಪಡೆದುಕೊಂಡಿದೆ ಆದಲ್ಲಿ.

ಆಯ್ಕೆ ಪ್ರಕ್ರಿಯೆ ಹೇಗೆ..?

PNB ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯಲಿದೆ:

  1. ಆನ್‌ಲೈನ್ ಲಿಖಿತ ಪರೀಕ್ಷೆ
  2. ದಾಖಲೆ ಪರಿಶೀಲನೆ (Document Verification)
  3. ಸ್ಥಳೀಯ ಭಾಷಾ ಪರೀಕ್ಷೆ
  4. ವೈದ್ಯಕೀಯ ಪರೀಕ್ಷೆ

ಈ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ವಿವರ:

ವರ್ಗಶುಲ್ಕ (18% GST ಸೇರಿ)
ಸಾಮಾನ್ಯ / ಓಬಿಸಿ / ಇಡಬ್ಲ್ಯುಎಸ್ (ಪುರುಷ)₹944/-
ಸಾಮಾನ್ಯ / ಓಬಿಸಿ / ಇಡಬ್ಲ್ಯುಎಸ್ (ಮಹಿಳೆ)₹708/-
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಟ್ರಾನ್ಸ್‌ಜೆಂಡರ್₹236/-

ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ:

  1. ಅಧಿಕೃತ ವೆಬ್‌ಸೈಟ್ www.pnbindia.in ಗೆ ಭೇಟಿ ನೀಡಿ.
  2. Careers / Recruitment ವಿಭಾಗದಲ್ಲಿ ಅಪ್ರೆಂಟಿಸ್ ಅಧಿಸೂಚನೆ ಹುಡುಕಿ.
  3. ಅರ್ಜಿ ಮಾರ್ಗಸೂಚಿಗಳನ್ನು ಗಮನದಿಂದ ಓದಿ.
  4. Apply Online ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿ.
  5. ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  6. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  7. ಶುಲ್ಕ ಪಾವತಿ ಮಾಡಿ ಅಂತಿಮವಾಗಿ ಅರ್ಜಿ ಸಲ್ಲಿಸಿ.
  8. ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ
  • ಜನ್ಮ ದಿನಾಂಕ ಪ್ರಮಾಣ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ ಸ್ಕ್ಯಾನ್ ಕಾಪಿ

ಅಭ್ಯರ್ಥಿಗಳಿಗಾಗಿ ಉಪಯುಕ್ತ ಸಲಹೆಗಳು:

  • ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿ ಇಟ್ಟುಕೊಳ್ಳಿ.
  • ಲಿಖಿತ ಪರೀಕ್ಷೆಗೆ ಬ್ಯಾಂಕಿಂಗ್ ಸಾಮಾನ್ಯ ಜ್ಞಾನ, ಗಣಿತ, ಯುಕ್ತಿಚಿಂತನೆ, ಇಂಗ್ಲಿಷ್ ಮೂಲಭೂತ ವಿಷಯಗಳ ಮೇಲೆ ಗಮನಹರಿಸಿ.
  • ಸಮಯ ನಿರ್ವಹಣೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಮಾಡಿ.

ನಮ್ಮ ಕೊನೆಯ ಮಾತು:

PNB ಅಪ್ರೆಂಟಿಸ್ ನೇಮಕಾತಿ 2026 ಯುವ ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರವಾದ ವೃತ್ತಿ ಆರಂಭಿಸಲು ಅತ್ಯುತ್ತಮ ಅವಕಾಶವಾಗಿದೆ ಅಂತ ಹೇಳುತ್ತಾ, ನೋಡಿ ಒಟ್ಟು 5,138 ಹುದ್ದೆಗಳ ಭರ್ಜರಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಅರ್ಹ ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೆ ಫೆಬ್ರವರಿ 24, 2026ರೊಳಗೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

FAQ:

1) PNB ಅಪ್ರೆಂಟಿಸ್ ನೇಮಕಾತಿ 2026ಕ್ಕೆ ಯಾರು ಅರ್ಜಿ ಸಲ್ಲಿಸಬಹುದು?

ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಫಲಿತಾಂಶವು ಡಿಸೆಂಬರ್ 31, 2025ರೊಳಗೆ ಪ್ರಕಟವಾಗಿರಬೇಕು ಮತ್ತು ವಯಸ್ಸು 20 ರಿಂದ 28 ವರ್ಷಗಳ ಒಳಗಿರಬೇಕು.

2) PNB ಅಪ್ರೆಂಟಿಸ್ ಹುದ್ದೆಗಳಿಗೆ ಒಟ್ಟು ಎಷ್ಟು ಖಾಲಿ ಸ್ಥಾನಗಳಿವೆ?

ಈ ನೇಮಕಾತಿಯ ಮೂಲಕ ಒಟ್ಟು 5,138 ಅಪ್ರೆಂಟಿಸ್ ಹುದ್ದೆಗಳು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳು ಭಾರತದಾದ್ಯಂತ ವಿವಿಧ ಶಾಖೆಗಳಲ್ಲಿ ಲಭ್ಯವಿರುತ್ತವೆ.

3) PNB ಅಪ್ರೆಂಟಿಸ್ ಹುದ್ದೆಗಳ ಮಾಸಿಕ ವೇತನ ಎಷ್ಟು?

ಅಭ್ಯರ್ಥಿಗಳಿಗೆ ಶಾಖೆಯ ಪ್ರಕಾರ ವೇತನ ನೀಡಲಾಗುತ್ತದೆ:

  • ಗ್ರಾಮೀಣ / ಅರ್ಧ ನಗರ / ನಗರ ಶಾಖೆಗಳಲ್ಲಿ: ₹12,300 ಪ್ರತಿ ತಿಂಗಳು
  • ಮೆಟ್ರೋ ಶಾಖೆಗಳಲ್ಲಿ: ₹15,000 ಪ್ರತಿ ತಿಂಗಳು

4) PNB ಅಪ್ರೆಂಟಿಸ್ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಆಯ್ಕೆ ಪ್ರಕ್ರಿಯೆ ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:

  1. ಆನ್‌ಲೈನ್ ಲಿಖಿತ ಪರೀಕ್ಷೆ
  2. ದಾಖಲೆ ಪರಿಶೀಲನೆ
  3. ಸ್ಥಳೀಯ ಭಾಷಾ ಪರೀಕ್ಷೆ
  4. ವೈದ್ಯಕೀಯ ಪರೀಕ್ಷೆ

ಈ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

5) PNB ಅಪ್ರೆಂಟಿಸ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?

ಫೆಬ್ರವರಿ 24, 2026 ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸುವುದು ಅತ್ಯಂತ ಅಗತ್ಯ.

Leave a Comment

WhatsApp Logo Join WhatsApp Group!