ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಾಣಿಸುವ ಪುರುಷರಿಗೆ ಗುಡ್ ನ್ಯೂಸ್ ಸಾರಿಗೆ ಇಲಾಖೆ ಕೊಟ್ಟಿದೆ ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ.
ನಿಮಗೆಲ್ಲಾ ತಿಳಿದಿರಬಹುದು ಇಂದಿನ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರ ಬದುಕು ಸುಲಭವಲ್ಲ. ದಿನಸಿ ಸಾಮಗ್ರಿ ಬೆಲೆ ಏರಿಕೆ, ಹೋಟೆಲ್ ತಿಂಡಿ ಬೆಲೆ ಹೆಚ್ಚಳ.
ಹಾಗೆ ಇಂಧನ ದರ ಏರಿಕೆ ಹೀಗೆ ಪ್ರತಿದಿನವೂ ಖರ್ಚು ಮಾತ್ರ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಬಸ್ ಪ್ರಯಾಣವೇ ಅವಲಂಬಿಸಿರುವ ಸಾವಿರಾರು ಜನರಿಗೆ ರಾಜ್ಯ ಸರ್ಕಾರದಿಂದ ಒಂದು ನೆಮ್ಮದಿ ಸುದ್ದಿಯು ಹೊರ ಬಂದಿದೆ ಅಂತ ಹೇಳಬಹುದು .
ಕರ್ನಾಟಕ ಸಾರಿಗೆ ಇಲಾಖೆಯು ಈ ಬಾರಿ ಬಿಎಂಟಿಸಿ (BMTC) ಮತ್ತು ಕೆಎಸ್‌ಆರ್‌ಟಿಸಿ (KSRTC) ಬಸ್ ಟಿಕೆಟ್ ದರವನ್ನು ಏರಿಸದಿರಲು ನಿರ್ಧರಿಸಿದೆ ಹೌದು ನೀವು ಸರಿಯಾಗಿ ಓದಿದ್ದೀರಿ. ಈ ಘೋಷಣೆ ಸಾಮಾನ್ಯ ಪ್ರಯಾಣಿಕರಿಗೆ, ವಿಶೇಷವಾಗಿ ಪುರುಷ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಆರ್ಥಿಕ ರಿಲೀಫ್ ಆಗಿದೆ.
ಟಿಕೆಟ್ ದರ ಏರಿಕೆ ಯಾಕೆ ಆಗಲಿಲ್ಲ..?

ನೋಡಿ ಇಲ್ಲಿ ಸ್ವಲ್ಪ ಗಮನಿಸಿ ಏನೆಂದರೆ ಕಳೆದ ವರ್ಷ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದ ಕಾರಣ ಸುಮಾರು 15% ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಈ ವರ್ಷವೂ ದರ ಪರಿಷ್ಕರಣೆ ಸಾಧ್ಯತೆ ಇದ್ದು, ಪ್ರತಿ ವರ್ಷ ನಿಯಮಿತವಾಗಿ ದರ ಬದಲಾವಣೆ ಮಾಡುವ ಚಿಂತನೆಯೂ ಸರ್ಕಾರದ ಮುಂದೆ ಇತ್ತು.
ಆದರೆ ಈ ಬಾರಿ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಕಾರಣವೇನೆಂದರೆ ದರ ಪರಿಷ್ಕರಣೆ ಕುರಿತು ವರದಿ ನೀಡಬೇಕಾದ ‘ತಜ್ಞರ ಸಮಿತಿ’ ಇನ್ನೂ ರಚನೆಯಾಗಿಲ್ಲ. ಸಮಿತಿ ಇಲ್ಲದಿದ್ದರೆ ವರದಿ ಇಲ್ಲ; ವರದಿ ಇಲ್ಲದಿದ್ದರೆ ದರ ಏರಿಕೆ ಪ್ರಶ್ನೆಯೇ ಇಲ್ಲದಂತಾಗಿದೆ.
ಸಾರಿಗೆ ಸಚಿವರು ಸ್ಪಷ್ಟಪಡಿಸಿರುವುದೇನೆಂದರೆ, ಸಮಿತಿಯ ವರದಿ ಬಂದ ನಂತರ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಟಿಕೆಟ್ ದರ ಸ್ಥಿರವಾಗಿಯೇ ಇರುತ್ತದೆ ಎಂದು ತಿಳಿಸಿದ್ದಾರೆ.
ಪುರುಷ ಪ್ರಯಾಣಿಕರಿಗೆ ಇದರಿಂದ ಏನು ಲಾಭ..?
ನೋಡಿ ಸದ್ಯರಾಜ್ಯದಲ್ಲಿ ಈಗ ‘ಶಕ್ತಿ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇದೆ. ಆದ್ದರಿಂದ ಸಾರಿಗೆ ಸಂಸ್ಥೆಗಳ ಆದಾಯದ ಪ್ರಮುಖ ಭಾಗ ಪುರುಷ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಂದಲೇ ಬರುತ್ತಿದೆ.
ಒಂದು ವೇಳೆ ಈಗ ಟಿಕೆಟ್ ದರ ಏರಿಕೆಯಾಗಿದ್ದರೆ:
- ನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಹೆಚ್ಚಿನ ಹೊರೆ ಆಗುತ್ತಿತ್ತು ಟಿಕೆಟ್ ದರ ಜಾಸ್ತಿ ಆಗಿದ್ದರೆ ಮಾತ್ರ.
- ಖಾಸಗಿ ಕಂಪನಿ ಉದ್ಯೋಗಿಗಳ ತಿಂಗಳ ಪ್ರಯಾಣ ವೆಚ್ಚ ಹೆಚ್ಚುತ್ತಿತ್ತು
- ವಿದ್ಯಾರ್ಥಿಗಳಿಗೆ ಹೆಚ್ಚುವರಿ ಖರ್ಚು ಎದುರಾಗುತ್ತಿತ್ತು
ಆದರೆ ಈಗ ದರ ಏರಿಕೆ ಇಲ್ಲದಿರುವುದರಿಂದ ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆಮ್ಮದಿ ಸಿಕಂತಾಗಿದೆ ಅಂತ ಹೇಳಬಹುದು.
2027ರವರೆಗೂ ಚಿಂತೆ ಬೇಡ..?
ಸಚಿವರ ಹೇಳಿಕೆಯಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರವಾಗಿ ತಿಳಿಸುವುದಾದರೆ, ಮುಂದಿನ ಕೆಲವು ತಿಂಗಳಲ್ಲಿ ಸಮಿತಿ ರಚನೆಯಾದರೂ ಸಹ ವರದಿ ಬಂದು ಜಾರಿಗೆ ಬರುವಷ್ಟರಲ್ಲಿ 2026 ಮುಗಿಯುವ ಸಾಧ್ಯತೆ ಇದೆ. ಅಂದರೆ 2027ರ ಆರಂಭದವರೆಗೆ ಟಿಕೆಟ್ ದರಗಳಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಬಹುದು.
ಇದು ಪ್ರಯಾಣಿಕರಿಗೆ ದೀರ್ಘಾವಧಿಯ ಭರವಸೆ ನೀಡುತ್ತದೆ ಎಂದು ಹೇಳಬಹುದು.
ಸಾರಿಗೆ ಇಲಾಖೆಯ ಮುಂದಿನ ಯೋಜನೆಗಳು ಯಾವುವು..?
ದರ ಏರಿಕೆ ಮಾಡದಿದ್ದರೂ, ಸಾರಿಗೆ ಇಲಾಖೆಯು ಕೆಲವು ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ ಯಾವು ಬದಲಾವಣೆಗಳು ಈ ಕೆಳಗಿನಂತಿದೆ ಗಮನಿಸಿ.
ಎಲೆಕ್ಟ್ರಿಕ್ ಬಸ್ಸುಗಳ ಹೆಚ್ಚಳ:
ಡೀಸೆಲ್ ವೆಚ್ಚ ಕಡಿಮೆ ಮಾಡಲು ಹಾಗೂ ಪರಿಸರ ಸ್ನೇಹಿ ಸಾರಿಗೆ ಒದಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಇ-ಬಸ್ಸುಗಳನ್ನು ರಸ್ತೆಗಿಳಿಸುವ ಯೋಜನೆ ಇದೆ.
ಹೊಸ ಬಸ್ಸುಗಳ ಖರೀದಿ:
ಹಳೆಯ ಬಸ್ಸುಗಳ ಬದಲಿಗೆ ಹೊಸ ಮತ್ತು ಸುಸಜ್ಜಿತ ಬಸ್ಸುಗಳನ್ನು ತರಲು ಕ್ರಮ ಕೈಗೊಳ್ಳಲಾಗಿದೆ.
ಸೇವೆಯಲ್ಲಿ ಸುಧಾರಣೆ:
ಸಮಯಕ್ಕೆ ಸರಿಯಾಗಿ ಬಸ್ ಸಂಚಾರ, ಪ್ರಯಾಣಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಸೇವಾ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ನಮ್ಮ ಕೊನೆಯ ಮಾತು:
ನೋಡಿ ಒಟ್ಟಿನಲ್ಲಿ ತಿಳಿಸುವುದಾದರೆ, ಬೆಲೆ ಏರಿಕೆಯ ಹೊರೆ ಹೆಚ್ಚುತ್ತಿರುವ ಈ ಸಮಯದಲ್ಲಿ ಬಸ್ ಟಿಕೆಟ್ ದರ ಸ್ಥಿರವಾಗಿರುವುದು ನಿತ್ಯ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಸಂತೋಷದ ವಿಷಯವಾಗಿದೆ ಅಂತ ಹೇಳಬಹುದು ಹಾಗೆ ನಿಮ್ಮ ಅನಿಸಿಕೆ ಏನೆಂಬುವುದು ಕಮೆಂಟ್ ಮಾಡಿ ತಿಳಿಸಿ.