ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಬಹುಕಾಲದಿಂದ ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ.
ಹೌದು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಮಹತ್ವದ ಘೋಷಣೆಯನ್ನು ಅಧಿಕೃತವಾಗಿ ಮಾಡಿದ್ದಾರೆ ಇದರ ಸಂಪೂರ್ಣ ಮಾಹಿತಿ ಹಾಗೂ ಟೈಮ್ ಟೇಬಲ್ ಈ ಕೆಳಗಿನಂತಿದೆ.
ನೋಡಿ ಈ ಬಾರಿ ಕೇವಲ ಪರೀಕ್ಷಾ ದಿನಾಂಕಗಳಷ್ಟೇ ಅಲ್ಲದೆ, ಫಲಿತಾಂಶ ಪ್ರಕಟವಾಗುವ ಸಂಭಾವ್ಯ ದಿನಾಂಕಗಳನ್ನೂ ಮೊದಲೇ ಘೋಷಿಸಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ದೊಡ್ಡ ಸಮಾಧಾನ ತಂದಿದೆ.
ಇದರಿಂದ ಮುಂದಿನ ಶಿಕ್ಷಣದ ಯೋಜನೆ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಒಳ್ಳೆ ಉತ್ತಮ ಅವಕಾಶ ದೊರೆಯಲಿದೆ.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸ್ಪೆಷಲ್ ಗಿಫ್ಟ್ ಉಚಿತ ಬಸ್ ಪ್ರಯಾಣ:

ಪರೀಕ್ಷೆ ಬರೆಯುವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಪರೀಕ್ಷಾ ದಿನಗಳಲ್ಲಿ KSRTC ಮತ್ತು BMTC ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿದರೆ ಸಾಕು, ಟಿಕೆಟ್ ಖರೀದಿಸುವ ಅಗತ್ಯವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬಹುದು.
ಈ ನಿರ್ಧಾರದಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ದೊಡ್ಡ ನೆರವು ದೊರೆಯಲಿದೆ ಏಕೆಂದ್ರೆ ಒಂದೇ ಊರಿನಲ್ಲಿದ್ದ ಪರೀಕ್ಷೆ ಬೇರೆಬೇರೆ ಎಕ್ಸಾಮ್ ಸೆಂಟರ್ನಲ್ಲಿ ಹಾಕಿರುತ್ತಾರೆ . ಸಾರಿಗೆ ವೆಚ್ಚದ ಚಿಂತೆಯಿಲ್ಲದೆ ಮಕ್ಕಳು ಪರೀಕ್ಷೆಗೆ ಸಿದ್ಧರಾಗಲು ಇದು ಸಹಾಯಕವಾಗಲಿದೆ.
ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
ಈ ವರ್ಷ ಪರೀಕ್ಷಾ ಮೈದಾನಕ್ಕೆ ಇಳಿಯುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ವಿವರ & ಮಾಹಿತಿ:
- ದ್ವಿತೀಯ ಪಿಯುಸಿ: ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು
(ಇದರಲ್ಲೂ 6.46 ಲಕ್ಷ ಹೊಸ ವಿದ್ಯಾರ್ಥಿಗಳು) - ಎಸ್‌ಎಸ್‌ಎಲ್‌ಸಿ: ಒಟ್ಟು 9.02 ಲಕ್ಷ ವಿದ್ಯಾರ್ಥಿಗಳು
(ಇದರಲ್ಲೂ 8.12 ಲಕ್ಷ ಹೊಸ ವಿದ್ಯಾರ್ಥಿಗಳು)
ಇದು ರಾಜ್ಯದ ಶಿಕ್ಷಣ ಕ್ಷೇತ್ರದ ಮಹತ್ವವನ್ನು ತೋರಿಸುವ ಅಂಕಿ ಅಂಶವಾಗಿದ್ದು, ಪ್ರತಿವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿ ತಂದಿದೆ ಅಂತ ಹೇಳಬಹುದು.
ಪರೀಕ್ಷೆ ಆರಂಭದ ದಿನಾಂಕ ಮತ್ತು ಫಲಿತಾಂಶ ಪ್ರಕಟ ದಿನಾಂಕ ವಿವರ:
ಈ ಕೆಳಗಿನ ಟೇಬಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಆರಂಭ, ಕೊನೆ ಹಾಗೂ ಫಲಿತಾಂಶದ ದಿನಾಂಕಗಳ ಸಂಪೂರ್ಣ ವಿವರ ನೀಡಲಾಗಿದೆ ಗಮನಿಸಿ:
| ಪರೀಕ್ಷೆ | ಆರಂಭದ ದಿನಾಂಕ | ಕೊನೆಯ ದಿನಾಂಕ | ಫಲಿತಾಂಶ (ಸಂಭಾವ್ಯ) |
| ದ್ವಿತೀಯ ಪಿಯುಸಿ | ಫೆಬ್ರವರಿ 28, 2026 | ಮಾರ್ಚ್ 17, 2026 | ಏಪ್ರಿಲ್ 7, 2026 |
| ಎಸ್‌ಎಸ್‌ಎಲ್‌ಸಿ | ಮಾರ್ಚ್ 18, 2026 | ಏಪ್ರಿಲ್ 2, 2026 | ಏಪ್ರಿಲ್ 24, 2026 |
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಸಂಪೂರ್ಣ ಪಟ್ಟಿ: (ಪರೀಕ್ಷೆ-1)
| ದಿನಾಂಕ | ವಿಷಯ |
| ಫೆ. 28 | ಕನ್ನಡ, ಅರೇಬಿಕ್ |
| ಮಾ. 02 | ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ |
| ಮಾ. 03 | ಇಂಗ್ಲಿಷ್ |
| ಮಾ. 04 | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
| ಮಾ. 05 | ಇತಿಹಾಸ |
| ಮಾ. 06 | ಭೌತಶಾಸ್ತ್ರ (Physics) |
| ಮಾ. 07 | ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ |
| ಮಾ. 09 | ರಸಾಯನಶಾಸ್ತ್ರ (Chemistry), ಶಿಕ್ಷಣಶಾಸ್ತ್ರ, ಮೂಲ ಗಣಿತ |
| ಮಾ. 10 | ಅರ್ಥಶಾಸ್ತ್ರ (Economics) |
| ಮಾ. 11 | ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ |
| ಮಾ. 12 | ಹಿಂದಿ |
| ಮಾ. 13 | ರಾಜ್ಯಶಾಸ್ತ್ರ |
| ಮಾ. 14 | ಲೆಕ್ಕಶಾಸ್ತ್ರ, ಗಣಿತ |
| ಮಾ. 16 | ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ |
| ಮಾ. 17 | ಸಂಗೀತ, ಆಟೋಮೊಬೈಲ್, ಹೆಲ್ತ್ ಕೇರ್ |
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪರೀಕ್ಷೆ-1:
| ದಿನಾಂಕ | ವಿಷಯ |
| ಮಾ. 18 | ಪ್ರಥಮ ಭಾಷೆ |
| ಮಾ. 23 | ವಿಜ್ಞಾನ |
| ಮಾ. 25 | ದ್ವಿತೀಯ ಭಾಷೆ |
| ಮಾ. 28 | ಗಣಿತ |
| ಮಾ. 30 | ತೃತೀಯ ಭಾಷೆ |
| ಏ. 02 | ಸಮಾಜ ವಿಜ್ಞಾನ |
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ:

ಪರೀಕ್ಷೆ-1ರಲ್ಲಿ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣರಾದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯುವ ಅವಕಾಶ ನೀಡಲಾಗಿರುತ್ತದೆ.
| ದಿನಾಂಕ | ವಿಷಯ |
| ಮೇ 18 | ಪ್ರಥಮ ಭಾಷೆ |
| ಮೇ 19 | ವಿಜ್ಞಾನ |
| ಮೇ 20 | ದ್ವಿತೀಯ ಭಾಷೆ |
| ಮೇ 21 | ಗಣಿತ |
| ಮೇ 22 | ತೃತೀಯ ಭಾಷೆ |
| ಮೇ 23 | ಸಮಾಜ ವಿಜ್ಞಾನ |
ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವುದರಿಂದ ಆತ್ಮವಿಶ್ವಾಸ ಹೆಚ್ಚಿಸುತ್ತದೆ ನೋಡಿ ಚಿಂತೆ ಮಾಡ್ಬೇಡಿ.
ವಿದ್ಯಾರ್ಥಿಗಳಿಗೆ ಉಪಯುಕ್ತ ತಯಾರಿ ಸಲಹೆಗಳು 2026:
ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಓದಿನ ಯೋಜನೆಯನ್ನು ಸರಿಯಾಗಿ ರೂಪಿಸಿಕೊಳ್ಳಬೇಕು.
ಕೆಲವು ಪ್ರಮುಖ ಸಲಹೆಗಳು:
- ದಿನನಿತ್ಯ ಓದಿಗೆ ಸಮಯಪಟ್ಟಿ ರಚಿಸಿಕೊಳ್ಳಿ 1 ಘಂಟೆ ಓದಿ ಆಗದಿದ್ದರೆ 25 ನಿಮಿಷ ಓದಿ 5 ನಿಮಿಷ ಗ್ಯಾಪ್ ತೆಗೆದುಕೊಳ್ಳಿ ಹೀಗೆ 1 ಗಂಟೆ ಮಾಡಿ.
- ಕಠಿಣ ವಿಷಯಗಳಿಗೆ ಹೆಚ್ಚಿನ ಸಮಯ ಮೀಸಲಿಡಿ
- ಮಾದರಿ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸಿ
- ಹಳೆಯ ವರ್ಷಗಳ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿ
- ಆರೋಗ್ಯ ಮತ್ತು ನಿದ್ರೆಗೆ ಹೆಚ್ಚಿನ ಗಮನ ಕೊಡಿ
ನಮ್ಮ ಕೊನೆಯ ಮಾತು:
ಈ ಬಾರಿ ಶಿಕ್ಷಣ ಇಲಾಖೆ ಕೈಗೊಂಡಿರುವ ವಿದ್ಯಾರ್ಥಿ ಸ್ನೇಹಿ ಕ್ರಮಗಳು ನಿಜಕ್ಕೂ ಶ್ಲಾಘನೀಯ ಅಂತ ಹೇಳಬಹುದು. ಪರೀಕ್ಷಾ ವೇಳಾಪಟ್ಟಿಯ ಜೊತೆಗೆ ಫಲಿತಾಂಶದ ದಿನಾಂಕವನ್ನೂ ಮೊದಲೇ ಘೋಷಿಸಿರುವುದು ಮುಂದಿನ ವಿದ್ಯಾಭ್ಯಾಸದ ಯೋಜನೆ ರೂಪಿಸಿಕೊಳ್ಳಲು ಬಹಳ ನೆರವಾಗಲಿದೆ.
ವಿದ್ಯಾರ್ಥಿಗಳಿಗೆ ತಿಳಿಸುವುದು ಆತ್ಮವಿಶ್ವಾಸದಿಂದ ಓದಿನತ್ತ ಗಮನ ಹರಿಸಿ, ತಮ್ಮ ಶ್ರೇಷ್ಠ ಪ್ರಯತ್ನ ನೀಡಿದರೆ ಯಶಸ್ಸು ಖಚಿತ.
ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು.
ಟೈಮ್ ಟೇಬಲ್ ಡೌನ್ಲೋಡ್ ಮಾಡಿಕೊಳ್ಳಿ:
| Important Links | Access |
| SSLC TIME TABLE | Click Here |
| 2nd PUC TIME TABLE | Click Here |
| Official website | Click Here |
FAQ:
Q1: SSLC ಪರೀಕ್ಷೆ ಯಾವ ದಿನಾಂಕದಿಂದ ಆರಂಭವಾಗುತ್ತದೆ?
👉 SSLC ಪರೀಕ್ಷೆ ಮಾರ್ಚ್ 18, 2026 ರಿಂದ ಆರಂಭವಾಗುತ್ತದೆ.
Q2: 2nd PUC ಫಲಿತಾಂಶ ಯಾವ ದಿನ ಪ್ರಕಟವಾಗಬಹುದು?
👉 ಸಂಭಾವ್ಯವಾಗಿ ಏಪ್ರಿಲ್ 7, 2026 ರಂದು ಫಲಿತಾಂಶ ಪ್ರಕಟವಾಗಲಿದೆ.
Q3: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಹೇಗೆ ಸಿಗುತ್ತದೆ?
👉 ಪರೀಕ್ಷಾ ದಿನಗಳಲ್ಲಿ ಹಾಲ್ ಟಿಕೆಟ್ ತೋರಿಸಿದರೆ KSRTC ಮತ್ತು BMTC ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.
Q4: ಪರೀಕ್ಷೆ-2 ಬರೆಯಲು ಯಾರು ಅರ್ಹರು?
👉 ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಅಥವಾ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಪರೀಕ್ಷೆ-2 ಬರೆಯಬಹುದು.
Q5: ಪರೀಕ್ಷಾ ವೇಳಾಪಟ್ಟಿಯ ಅಧಿಕೃತ ಮಾಹಿತಿ ಎಲ್ಲಿ ಲಭ್ಯ?
👉 ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮತ್ತು ಶಾಲಾ ಕಾಲೇಜುಗಳ ಮೂಲಕ ಮಾಹಿತಿಯನ್ನು ಪಡೆಯಬಹುದು.