ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಭಾರತ ಸರ್ಕಾರವು ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದಿರುವ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿರುವಂತಹ ಯೋಜನೆ ಯಾದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY) ಪ್ರಮುಖ ಸ್ಥಾನ ಹೊಂದಿದೆ.
ಈ ಒಂದು ಯೋಜನೆ 2015ರ ಜನವರಿ 22ರಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದ್ದು, 2026ರ ವೇಳೆಗೆ ದೇಶಾದ್ಯಂತ 4.5 ಕೋಟಿಗೂ ಹೆಚ್ಚು ಖಾತೆಗಳು ತೆರೆಯಲ್ಪಟ್ಟಿವೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿಯವರೆಗೆ.
ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಮದುವೆಯಂತಹ ಮಹತ್ವದ ಹಂತಗಳಿಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ನಿಮಗೆಲ್ಲ ತಿಳಿದೇ ಇರಬಹುದು ಪ್ರಸ್ತುತ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಶಿಕ್ಷಣ ವೆಚ್ಚ, ಜೀವನ ವೆಚ್ಚ ಹಾಗೂ ಭವಿಷ್ಯದ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂಡು, ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಸಣ್ಣ ಮೊತ್ತದಿಂದಲೇ ಉಳಿತಾಯ ಆರಂಭಿಸಲು ಈ ಯೋಜನೆ ಒಳ್ಳೆ ಉತ್ತಮ ಅವಕಾಶ ನೀಡುತ್ತದೆ.
ಕೇವಲ ರೂ 250 ರಿಂದ ಖಾತೆ ಆರಂಭಿಸಿ, ವರ್ಷಕ್ಕೆ ಗರಿಷ್ಠ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡುವ ಅವಕಾಶ ಇದರಲ್ಲಿ ಲಭ್ಯವಿದ್ದು, ಹೆಚ್ಚಿನ ಬಡ್ಡಿದರ ಹಾಗೂ ಸಂಪೂರ್ಣ ತೆರಿಗೆ ವಿನಾಯಿತಿಯೊಂದಿಗೆ ಇದು ಅತ್ಯಂತ ಲಾಭದಾಯಕ ಯೋಜನೆಯಾಗಿ ಪರಿಣಮಿಸಿದೆ ಅಂತ ಹೇಳಬಹುದು ಅಂದರೆ ನಿಮಗೆ ಇಲ್ಲಿ ಯಾವುದೇ ತರಹದ ತೆರಿಗೆ ಇರುವುದಿಲ್ಲ ಮೆಚುರಿಟಿ ಅವಧಿಯಲ್ಲಿ.
ಸುಕನ್ಯಾ ಸಮೃದ್ಧಿ ಯೋಜನೆ ಸಂಕ್ಷಿಪ್ತ ಅವಲೋಕನ:

| ವಿವರ | ಮಾಹಿತಿ |
| ಯೋಜನೆಯ ಹೆಸರು | ಸುಕನ್ಯಾ ಸಮೃದ್ಧಿ ಯೋಜನೆ (SSY) |
| ಇಲಾಖೆ | ಕೇಂದ್ರ ಸರ್ಕಾರ |
| ಯೋಜನೆ ಪ್ರಕಾರ | ಸಣ್ಣ ಉಳಿತಾಯ ಯೋಜನೆ |
| ಲಾಭಾರ್ಥಿಗಳು | 0 ರಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳು |
| ಕನಿಷ್ಠ ಠೇವಣಿ | ರೂ 250 |
| ಗರಿಷ್ಠ ಠೇವಣಿ | ರೂ 1.5 ಲಕ್ಷ / ವರ್ಷ |
| ಬಡ್ಡಿದರ | ವಾರ್ಷಿಕ 8.2% (2026) |
| ಅವಧಿ | 21 ವರ್ಷ |
| ತೆರಿಗೆ ಲಾಭ | ಸಂಪೂರ್ಣ ತೆರಿಗೆ ಮುಕ್ತ (EEE) |
| ಖಾತೆ ತೆರೆಯುವ ಸ್ಥಳ | ಪೋಸ್ಟ್ ಆಫೀಸ್ ಮತ್ತು ಮಾನ್ಯ ಬ್ಯಾಂಕ್ಗಳು |
ಯಾರು ಅರ್ಜಿ ಸಲ್ಲಿಸಬಹುದು?
- 0 ರಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳ ಪೋಷಕರು ಅಥವಾ ಕಾನೂನು ಪಾಲಕರು ಗಮನಿಸಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ.
- ಭಾರತೀಯ ನಾಗರಿಕರಾಗಿರಬೇಕು
- ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಖಾತೆ ತೆರೆಯಬಹುದು (ವಿಶೇಷ ಪರಿಸ್ಥಿತಿಗಳಲ್ಲಿ ವಿನಾಯಿತಿ ಲಭ್ಯ)
ಹೂಡಿಕೆ ಮತ್ತು ಲಾಭದ ವಿವರ:

ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಮುಖ ಆಕರ್ಷಣೆ ಏನೆಂದರೆ ಅದರ ಹೆಚ್ಚಿನ ಬಡ್ಡಿದರ ಮತ್ತು ಭದ್ರತೆ. ಪ್ರಸ್ತುತ 2026ರಲ್ಲಿ ಈ ಯೋಜನೆಗೆ ವಾರ್ಷಿಕ 8.2% ಬಡ್ಡಿ ಲಭ್ಯವಿದೆ. ಈ ಬಡ್ಡಿ ಸಂಯೋಜಿತವಾಗಿ ಲೆಕ್ಕ ಹಾಕಲಾಗುವುದರಿಂದ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ ಅಂತ ಹೇಳಬಹುದು ಈ ಕೆಳಗಡೆ ಉದಾಹರಣೆ ಮೂಲಕ ತಿಳಿಸಲಾಗಿದೆ ಗಮನಿಸಿ.
ಉದಾಹರಣೆಯ ಲೆಕ್ಕಾಚಾರ:
| ತಿಂಗಳ ಠೇವಣಿ | 15 ವರ್ಷಗಳ ಒಟ್ಟು ಹೂಡಿಕೆ | 21 ವರ್ಷಕ್ಕೆ ಸಿಗುವ ಅಂದಾಜು ಮೊತ್ತ |
| ₹ 250 | ₹ 45,000 | ₹ 1.38 ಲಕ್ಷ |
| ₹ 1,000 | ₹ 1,80,000 | ₹ 5.54 ಲಕ್ಷ |
| ₹ 3,000 | ₹ 5,40,000 | ₹ 16.63 ಲಕ್ಷ |
| ₹ 10,000 | ₹ 18,00,000 | ₹ 55.43 ಲಕ್ಷ |
ಗಮನಿಸಿ: ಬಡ್ಡಿದರದ ಆಧಾರದ ಮೇಲೆ ಮೊತ್ತದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು ನಿಮಗೆ ಮೆಚುರಿಟಿ ಅವಧಿಯಲ್ಲಿ ತೊರೆಯುವಂತ ಸಂದರ್ಭದಲ್ಲಿ.
ಯೋಜನೆಯಿಂದಾಗುವ ಪ್ರಮುಖ ಪ್ರಯೋಜನಗಳು:
- ಹೆಚ್ಚಿನ ಬಡ್ಡಿದರ: ಇತರ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿ
- ಸಂಪೂರ್ಣ ತೆರಿಗೆ ವಿನಾಯಿತಿ: ಹೂಡಿಕೆ, ಬಡ್ಡಿ ಮತ್ತು ಮೆಚ್ಯುರಿಟಿ ಮೊತ್ತ ಎಲ್ಲವೂ ತೆರಿಗೆ ಮುಕ್ತ
- ಭದ್ರ ಹೂಡಿಕೆ: ಸರ್ಕಾರದ ಗ್ಯಾರಂಟಿಯೊಂದಿಗೆ ಸಂಪೂರ್ಣ ಸುರಕ್ಷತೆ ಯಾಗಿರುತ್ತೆ ಯಾವುದೇ ಮೋಸ ವಂಚನೆ ಇರುವುದಿಲ್ಲ.
- ಠೇವಣಿ: ತಿಂಗಳಿಗೆ, ತ್ರೈಮಾಸಿಕ ಅಥವಾ ವರ್ಷಕ್ಕೆ ಒಮ್ಮೆ ಠೇವಣಿ ಆಯ್ಕೆ
- ಖಾತೆ ವರ್ಗಾವಣೆ ಸೌಲಭ್ಯ: ದೇಶದ ಯಾವುದೇ ಭಾಗಕ್ಕೆ ಖಾತೆ ವರ್ಗಾಯಿಸಬಹುದು ಒಂದು ಒಳ್ಳೆ ಸೌಲಭ್ಯ ಅಂತ ಹೇಳಬಹುದು.
ಖಾತೆ ತೆರೆಯಲು ಬೇಕಾದ ಪ್ರಮುಖ ದಾಖಲೆಗಳು:
- ಹೆಣ್ಣು ಮಗುವಿನ ಜನನ ಪ್ರಮಾಣಪತ್ರ
- ಪೋಷಕರ ಆಧಾರ್ ಕಾರ್ಡ್
- ವಿಳಾಸ ಪುರಾವೆ (ರೇಷನ್ ಕಾರ್ಡ್ / ವಿದ್ಯುತ್ ಬಿಲ್ / ಬ್ಯಾಂಕ್ ಪಾಸ್ಬುಕ್)
- ಪಾಸ್ಪೋರ್ಟ್ ಅಳತೆಯ ಫೋಟೋ
- ಬ್ಯಾಂಕ್ ಖಾತೆ ವಿವರಗಳು
- ಒಂದು ವೇಳೆ ಹೆಚ್ಚಿನ ದಾಖಲೆಗಳನ್ನು ಕೇಳಿದರೆ ನೀಡಬೇಕು.
ಹೊಸ ಖಾತೆ ತೆರೆಯುವ ವಿಧಾನ ಹಂತ ಹಂತವಾಗಿ:
- ಹತ್ತಿರದ ಪೋಸ್ಟ್ ಆಫೀಸ್ ಅಥವಾ ಮಾನ್ಯ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಇದು ನಿಮ್ಮ ಮೊದಲ ಕೆಲಸ.
- SSY ಖಾತೆ ಅರ್ಜಿ ಫಾರ್ಮ್ ಪಡೆದುಕೊಳ್ಳಿ
- ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
- ದಾಖಲೆಗಳನ್ನು ಲಗತ್ತಿಸಿ
- ಪ್ರಾಥಮಿಕ ಠೇವಣಿ ಪಾವತಿಸಿ
- ಖಾತೆ ವಿವರಗಳೊಂದಿಗೆ ಪಾಸ್ಬುಕ್ ಪಡೆಯಿರಿ
ಎಚ್ಚರಿಕೆ: ಅರ್ಜಿ ಸಲ್ಲಿಸುವಾಗ ಯಾವುದೇ ದಲಾಲರ ಸಹಾಯ ಬೇಡ. ಕೇವಲ ಅಧಿಕೃತ ಕಚೇರಿಗಳಲ್ಲಿ ಮಾತ್ರ ಖಾತೆ ತೆರೆಯಿರಿ ಹಾಗೆ ಗಮನಿಸಿ ಖಾತೆ ತೆರೆಯಲು ನಿಮಗೆ ಯಾವುದೇ ತರಹದ ಖರ್ಚು ವೆಚ್ಚಗಳು ಇರುವುದಿಲ್ಲ ಯಾರಾದರೂ ಟೇಬಲ್ ಕೆಳಗಡೆ ಹಣ ಕೇಳಿದರೆ ನೀಡುವ ಅವಶ್ಯಕತೆ ಇಲ್ಲ.
ಯೋಜನೆಯಿಂದಾಗಿ ಸಿಗುವಂತ ತೆರಿಗೆ ಲಾಭಗಳು:

ಸುಕನ್ಯಾ ಸಮೃದ್ಧಿ ಯೋಜನೆ EEE (Exempt–Exempt–Exempt) ವರ್ಗಕ್ಕೆ ಸೇರಿದೆ ಅಂದರೆ ಈ ಕೆಳಗಿನಂತಿದೆ ಗಮನಿಸಿ.
- ಹೂಡಿಕೆ ಮೊತ್ತಕ್ಕೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ
- ಗಳಿಸಿದ ಬಡ್ಡಿಗೆ ತೆರಿಗೆ ಇಲ್ಲ
- ಮೆಚ್ಯುರಿಟಿ ಮೊತ್ತಕ್ಕೂ ಪೂರ್ಣ ತೆರಿಗೆ ವಿನಾಯಿತಿ ದೊರೆಯುತ್ತೆ.
ಮೆಚ್ಯುರಿಟಿ ಮತ್ತು ಹಣ ತೆಗೆಯುವ ನಿಯಮಗಳು ಏನು..?
- ಖಾತೆ ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಮೆಚ್ಯುರಿಟಿ
- ಮಗಳು 18 ವರ್ಷ ಪೂರೈಸಿದ ನಂತರ ಶಿಕ್ಷಣಕ್ಕಾಗಿ ಭಾಗಶಃ ಹಣ ತೆಗೆಯಲು ಅವಕಾಶ ಇರುತ್ತದೆ.
- ಮದುವೆಯ ಸಂದರ್ಭದಲ್ಲಿ ವಿಶೇಷ ನಿಯಮಗಳಡಿ ಖಾತೆ ಮುಚ್ಚಬಹುದು
ಯಾಕೆ ಈ ಯೋಜನೆ ಹೆಣ್ಣುಮಕ್ಕಳಿಗೆ ಅತ್ಯಂತ ಮುಖ್ಯ?
ನೋಡಿ ನಿಮಗೆಲ್ಲ ತಿಳಿದೇ ಇರಬಹುದು ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಆರ್ಥಿಕ ಸಿದ್ಧತೆ ಅತ್ಯಗತ್ಯ. ಸುಕನ್ಯಾ ಸಮೃದ್ಧಿ ಯೋಜನೆ ಪೋಷಕರಿಗೆ ಸಣ್ಣ ಮೊತ್ತದಿಂದಲೇ ದೊಡ್ಡ ಉಳಿತಾಯ ರೂಪಿಸಲು ಸಹಾಯ ಮಾಡುತ್ತದೆ. ಇದು ಕೇವಲ ಹಣ ಸಂಗ್ರಹಿಸುವ ಯೋಜನೆ ಮಾತ್ರವಲ್ಲ, ಹೆಣ್ಣುಮಕ್ಕಳ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸಬಲೀಕರಣಕ್ಕೆ ಬಲ ನೀಡುವ ಸಾಮಾಜಿಕ ಕ್ರಾಂತಿ ಎನ್ನಬಹುದು ಹಾಗೆ ಹೀಗೆ ಅಂದರೇನು ತಪ್ಪೇನಿಲ್ಲ.
ಉಪಯುಕ್ತ ಸಲಹೆಗಳು ತಿಳಿದುಕೊಳ್ಳಿ:
- ಮಗು ಹುಟ್ಟಿದ ಕೂಡಲೇ ಖಾತೆ ತೆರೆಯುವುದು ಬಹಳ ಉತ್ತಮ.
- ತಿಂಗಳಿಗೆ ನಿಶ್ಚಿತ ಮೊತ್ತವನ್ನು ಸ್ವಯಂ ಠೇವಣಿ ವ್ಯವಸ್ಥೆಗೆ ಜೋಡಿಸಿಕೊಳ್ಳಿ ಅಂದರೆ ಪ್ರತಿ ತಿಂಗಳು ಹಣ ತುಂಬುತ್ತಾ ಹೋಗಬೇಕು.
- ವರ್ಷಕ್ಕೊಮ್ಮೆ ಬಡ್ಡಿದರ ಪರಿಶೀಲಿಸಿ ಅಂದರೆ ಈ ಒಂದು ಯೋಜನೆ ಅಡಿ ಪ್ರತಿವರ್ಷಕ್ಕೆ ಬಡ್ಡಿದರ ಚೇಂಜ್ ಆಗುತ್ತಲೇ ಇರುತ್ತೆ ಅಂದರೆ ಬದಲಾವಣೆ ಆಗುತ್ತದೆ ಇರುತ್ತೆ ನೀವು ಗಮನಿಸಬಹುದು.
- ಪಾಸ್ಬುಕ್ ದಾಖಲಾತಿಗಳನ್ನು ನಿಯಮಿತವಾಗಿ ಪರಿಶೀಲಿಸಿ.
ನಮ್ಮ ಕೊನೆಯ ಮಾತು:
ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಭವಿಷ್ಯಕ್ಕೆ ಭದ್ರವಾದ ಆರ್ಥಿಕ ನೆಲೆ ಒದಗಿಸುವ ಅತ್ಯುತ್ತಮ ಸರ್ಕಾರದಿಂದ ಸಿಗುವ ಒಂದು ವರದಾನ ಅಂತ ಹೇಳಬಹುದು ಹಾಗೆ ನಿಮ್ಮ ಮನೆಯಲ್ಲಿ ಏನಾದ್ರು ಹೆಣ್ಣು ಮಕ್ಕಳಿದ್ದರೆ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು ಗಮನಿಸಿ ನಿಮ್ಮ ಹೆಣ್ಣು ಮಕ್ಕಳ ವಯಸ್ಸು 10 ವರ್ಷದ ಒಳಗಡೆ ಇರಬೇಕು.
FAQ:
1. ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?
ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಉಳಿತಾಯ ಯೋಜನೆ.
2. ಕನಿಷ್ಠ ಎಷ್ಟು ಹಣದಿಂದ ಖಾತೆ ತೆರೆಯಬಹುದು?
ರೂ 250.
3. ಗರಿಷ್ಠ ಎಷ್ಟು ಹೂಡಿಕೆ ಮಾಡಬಹುದು?
ವರ್ಷಕ್ಕೆ ರೂ 1.5 ಲಕ್ಷ.
4. ಬಡ್ಡಿದರ ಎಷ್ಟು?
ಪ್ರಸ್ತುತ 8.2%.
5. ತೆರಿಗೆ ವಿನಾಯಿತಿ ಇದೆಯೇ?
ಹೌದು, ಸಂಪೂರ್ಣ ತೆರಿಗೆ ಮುಕ್ತ.
6. ಎಷ್ಟು ವರ್ಷ ಹಣ ಕಟ್ಟಬೇಕು?
15 ವರ್ಷ.
7. ಯಾವಾಗ ಸಂಪೂರ್ಣ ಹಣ ಸಿಗುತ್ತದೆ?
21 ವರ್ಷಗಳ ನಂತರ.
8. ಬ್ಯಾಂಕ್ನಲ್ಲಿ ಖಾತೆ ತೆರೆಯಬಹುದೇ?
ಹೌದು, ಮಾನ್ಯ ಬ್ಯಾಂಕ್ಗಳಲ್ಲಿ ತೆರೆಯಬಹುದು.
9. ಖಾತೆ ವರ್ಗಾವಣೆ ಸಾಧ್ಯವೇ?
ಹೌದು, ದೇಶದ ಯಾವುದೇ ಭಾಗಕ್ಕೆ.
10. ಈ ಯೋಜನೆ ಸುರಕ್ಷಿತವೇ?
ಪೂರ್ಣವಾಗಿ ಸುರಕ್ಷಿತ, ಸರ್ಕಾರದ ಭರವಸೆಯೊಂದಿಗೆ.