BESCOM ನೇಮಕಾತಿ 2026.!BA,B.COM,Bsc ಆದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು BESCOM 520 ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ ಒಂದಲ್ಲ ಎರಡಲ್ಲ ಒಟ್ಟು 520 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 

ನೀವೇನಾದರೂ ಬಿಎ ಬಿಕಾಂ ಬಿ ಎಸ್ ಸಿ ಅಥವಾ ಡಿಪ್ಲೋಮಾ ಇನ್ ಟೆಕ್ನಿಷಿಯನ್ ಬಿಇ ಅಥವಾ ಬೇಟೆಕ್ ಆದಂತಹ ಅಭ್ಯರ್ಥಿಗಳಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಿತ್ತಲೇ ಇದೆ ಯಾರು ಕೂಡ ಈ ಒಂದು ಲೇಖನವನ್ನು ಅರ್ಧಂಬರ್ಧ ಓದ್ಬಿಡಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹೀಗಾಗಿ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದು. 

WhatsApp Group Join Now
Telegram Group Join Now

ನೋಡಿ ನಿಮಗೆ ಸಾಮಾನ್ಯವಾಗಿ ಯಾವುದೇ ಒಂದು ಪ್ರೈವೇಟ್ ಹುದ್ದೆಯಾಗಲಿ ಅಥವಾ ಗೌರ್ಮೆಂಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಉದ್ಭವ ಆಗುತ್ತೆ ನಾನು ನಿಮಗೆ ಉದಾಹರಣೆ ತಿಳಿಸುವುದಾದರೆ ನೋಡಿ ಅರ್ಜಿ ಸಲ್ಲಿಸಲು ಮುಂದಾದಾಗ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ಸಿಗುತ್ತೆ..? ಈ ಹುದ್ದೆ ಪರಮನೆಂಟ್ ಆಗಿರುತ್ತಾ ಅಥವಾ ಇಲ್ಲ..? ಹಾಗೆ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು..?

ನೋಡಿ ಈ ಮೇಲ್ಗಡೆ ಚಲಿಸುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ನಿಮ್ಮನ್ನ ಕಾಣುತ್ತೆ ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಾಹಿತಿಯನ್ನು ನೀವು ಓದಿ ಹುದ್ದೆಗಳಿಗೆ ಆರಾಮವಾಗಿ ಅರ್ಜಿ ಸಲ್ಲಿಸಬಹುದು ಹಾಗೆ ಯಾವುದೇ ತರಹದ ಪ್ರಶ್ನೆ ನಿಮಗೆ ಮೂಡಿದೆ ಆದಲ್ಲಿ ಸಹಾಯವಾಗಲೆಂದು ಅರ್ಜಿ ಸಲ್ಲಿಸುವ ಅಧಿಕೃತ ವೆಬ್ ಸೈಟ್ ಲೈಕ್ ಹಾಗೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ ಅಂದರೆ ಇಲಾಖೆಯಿಂದ ಹೊರಡಿಸಿರುವಂತಹ ಅತಿ ಸೂಚನೆ ಪಿಡಿಎಫ್ ಲಿಂಕ್ ಒದಗಿಸಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ ಮಾಹಿತಿಯನ್ನು ತಿಳಿದುಕೊಳ್ಳಬಹುದು ಇನ್ನು ಆಳವಾದ ಮಾಹಿತಿಯನ್ನ.

ಇದೀಗ ಕರ್ನಾಟಕದ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿರುವಂತ BESCOM ಸಂಸ್ಥೆಯಿಂದ 2026ರ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. ಈ ಪ್ರಕಟಣೆಯ ಮೂಲಕ ಒಟ್ಟು 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇಂಜಿನಿಯರಿಂಗ್ ಪದವೀಧರರು, ಡಿಪ್ಲೋಮಾ ಪಾಸಾದವರು ಮತ್ತು ಸಾಮಾನ್ಯ ಪದವೀಧರರಿಗೆ (B.A, B.Com, B.Sc, B.B.A ಇತ್ಯಾದಿ) ಇದು ದೊಡ್ಡ ಹಾಗೂ ಸುವರ್ಣ ಅವಕಾಶವಾಗಿದೆ ಅಂತ ಹೇಳಬಹುದು. 

ಹೆಸರಿನಲ್ಲಿ ಸೂಕ್ಷ್ಮವಾಗಿ ಎಲ್ಲ ಹುದ್ದೆಗಳು ಬೆಂಗಳೂರಿನಲ್ಲಿ ಇದ್ದು  ವಿಶೇಷವಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಅವಕಾಶ ನೀಡುತ್ತದೆ. ಬರಹ ಪರೀಕ್ಷೆ ಇಲ್ಲದೆ, ಮೆರಿಟ್ ಆಧಾರಿತ ಆಯ್ಕೆ ಇರುವುದರಿಂದ, ಹೊಸದಾಗಿ ಪದವಿ/ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ವೇಗವಾಗಿ ಸರ್ಕಾರಿ ಕ್ಷೇತ್ರದ ಅನುಭವ ಪಡೆಯಲು ಇದು ಅತ್ಯಂತ ಉಪಯುಕ್ತ.

ಅಪ್ರೆಂಟಿಸ್ ತರಬೇತಿಯ ಮೂಲಕ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ:

  • ನೈಜ ಸರ್ಕಾರಿ ಕಾರ್ಯಪದ್ದತಿಯ ಪರಿಚಯ
  • ಮಾನ್ಯ ಸರ್ಕಾರಿ ಅಪ್ರೆಂಟಿಸ್ ಪ್ರಮಾಣಪತ್ರ
  • ಭವಿಷ್ಯದ ಶಾಶ್ವತ ಸರ್ಕಾರಿ ಉದ್ಯೋಗಗಳಿಗೆ ಬಲವಾದ ಪ್ರೊಫೈಲ್
    ಹೆಚ್ಚಿಸಿಕೊಳ್ಳಬಹುದು. ಉದ್ಯೋಗ ಮಾರುಕಟ್ಟೆಯಲ್ಲಿ ಅನುಭವಕ್ಕೆ ಹೆಚ್ಚಿನ ಮೌಲ್ಯ ಇರುವ ಈ ಸಮಯದಲ್ಲಿ, BESCOM ಅಪ್ರೆಂಟಿಸ್ ನೇಮಕಾತಿ 2026 ಉದ್ಯೋಗಾರ್ಥಿಗಳಿಗೆ ಭದ್ರ ಹಾಗೂ ವಿಶ್ವಾಸಾರ್ಹ ದಾರಿಯನ್ನು ತೆರೆದಿದೆ.

 ತ್ವರಿತ ಅಧಿಸೂಚನೆ ಅವಲೋಕನ:

ವಿವರಮಾಹಿತಿ
ಇಲಾಖೆಯ / ಸಂಸ್ಥೆಯ ಹೆಸರುBangalore Electricity Supply Company Limited (BESCOM)
ಉದ್ಯೋಗದ ಸ್ವರೂಪಕರ್ನಾಟಕ ರಾಜ್ಯ ಸರ್ಕಾರಿ (ಅಪ್ರೆಂಟಿಸ್ ತರಬೇತಿ)
ಹುದ್ದೆಯ ಹೆಸರುGraduate Apprentice / Technician (Diploma) Apprentice / Non-Engineering Graduate Apprentice
ಒಟ್ಟು ಹುದ್ದೆಗಳು520
ಕೆಲಸದ ಸ್ಥಳಬೆಂಗಳೂರು, ಕರ್ನಾಟಕ
ವೇತನ / ಸ್ಟೈಪೆಂಡ್₹8,000 – ₹9,008 (ತಿಂಗಳಿಗೆ)
ಅರ್ಜಿ ವಿಧಾನಆನ್‌ಲೈನ್ (NATS ಪೋರ್ಟಲ್)
ಅರ್ಹತೆಪದವಿ / ಡಿಪ್ಲೋಮಾ (2021 ನಂತರ ಪಾಸ್)
ವಯೋಮಿತಿಕನಿಷ್ಠ 18 ವರ್ಷ (ಗರಿಷ್ಠ – ನಿಯಮಾನುಸಾರ)
ಕೊನೆಯ ದಿನಾಂಕ02 ಮಾರ್ಚ್ 2026
ಅಧಿಕೃತ ವೆಬ್‌ಸೈಟ್bescom.karnataka.gov.in

 ಹುದ್ದೆಗಳ ವಿವರ ಮತ್ತು ಖಾಲಿ ಹುದ್ದೆಗಳ ವಿವರ:

ಈ ನೇಮಕಾತಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಆಗಿದೆ. ಪ್ರಕಟಣೆಯ ಪ್ರಕಾರ, 520 ಹುದ್ದೆಗಳು ಕೆಳಗಿನಂತೆ ವಿಂಗಡಿಸಲ್ಪಡುವ ಸದ್ಯತೆ ಇರುತ್ತೆ ಈ ಕೆಳಗಿನಂತಿದೆ ಗಮನಿಸಿ. ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ ಒಂದು ಬಾರಿ ಅರ್ಜಿ ಸಲ್ಲಿಸುವ ಮುನ್ನ:

🔹ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ Graduate Apprentice (Engineering)

  • B.E / B.Tech (Electrical, Mechanical, Civil, Electronics, Computer Science ಮುಂತಾದ ಶಾಖೆಗಳು)
  • ಅಂದಾಜು ಹುದ್ದೆಗಳು: ~200+

🔹 ಟೆಕ್ನಿಷಿಯನ್ (ಡಿಪ್ಲೋಮೋ) Technician (Diploma) Apprentice

  • ಇಂಜಿನಿಯರಿಂಗ್ ಡಿಪ್ಲೋಮಾ (ಸಂಬಂಧಿತ ಶಾಖೆಗಳು)
  • ಅಂದಾಜು ಹುದ್ದೆಗಳು: ~150+

🔹 ಇಂಜಿನಿಯರಿಂಗ್ ಅಲ್ಲದ ಅಪ್ರೆಂಟಿಸ್ Non-Engineering Graduate Apprentice

  • B.A, B.Com, B.Sc, B.B.A, B.C.A ಮುಂತಾದ ಸಾಮಾನ್ಯ ಪದವಿಗಳು
  • ಅಂದಾಜು ಹುದ್ದೆಗಳು: ~170+

ಗಮನಿಸಿ: ನಿಖರ ಶಾಖೆವಾರು ಮತ್ತು ವರ್ಗವಾರು ಹುದ್ದೆಗಳ ವಿವರ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ಹುದ್ದೆಗಳ ಕುರಿತು ನೋಟಿಫಿಕೇಶನ್ ಚೆಕ್ ಮಾಡಬಹುದು.

 ಅರ್ಹತಾ ಮಾನದಂಡಗಳು:

ನೋಡಿ ಇದೀಗ ನಾವು ಅರ್ಥ ಮಾಡದಂಡಗಳ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಅಂದರೆ ನಮ್ಮ ಶೈಕ್ಷಣಿಕ ಅರ್ಹತೆ ಹಾಗೂ ನಮ್ಮ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

 ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:

  • Graduate Apprentice (Engineering): B.E / B.Tech
  • Technician Apprentice: ಡಿಪ್ಲೋಮಾ ಇಂಜಿನಿಯರಿಂಗ್
  • Non-Engineering Graduate: B.A / B.Com / B.Sc / B.B.A / ಇತರ ಪದವಿಗಳು

ಮುಖ್ಯ ಶರತ್ತುಗಳು:
👉 ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯನ್ನು 2021ರ ನಂತರ ಉತ್ತೀರ್ಣರಾಗಿರಬೇಕು.

 ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: BESCOM / ಅಪ್ರೆಂಟಿಸ್ ನಿಯಮಾನುಸಾರ
ವರ್ಗವಾರು ವಯೋಮಿತಿ ಸಡಿಲಿಕೆ:
  • SC / ST: ನಿಯಮಾನುಸಾರ
  • OBC: ನಿಯಮಾನುಸಾರ
  • PwD (ವಿಕಲಚೇತನ): ಹೆಚ್ಚುವರಿ ಸಡಿಲಿಕೆ

ವಯೋಮಿತಿ ಲೆಕ್ಕಾಚಾರ ಅಧಿಸೂಚನೆಯಲ್ಲಿ ನೀಡಿರುವ ದಿನಾಂಕದ ಆಧಾರದಲ್ಲಿ ಮಾಡಲಾಗುತ್ತದೆ.

 ವೇತನ (ಸ್ಟೈಪೆಂಡ್) ಮತ್ತು ಸೌಲಭ್ಯಗಳು:

ಇದು ಶಾಶ್ವತ ಉದ್ಯೋಗವಲ್ಲ, ಅಪ್ರೆಂಟಿಸ್ ತರಬೇತಿ ಆದ್ದರಿಂದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. ಅಂದರೆ ನಿಮಗೆ ಇಂತಿಷ್ಟೇ ಅಥವಾ ಉದಾಹರಣೆಗೆ ತಿಳಿಸಿದರೆ ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಟ್ರೈನಿಂಗ್ ನೀಡುತ್ತಾರೆ ಇದರ ಜೊತೆಗೆ ಪ್ರತಿ ತಿಂಗಳ ಸಂಬಳ ಸಹ ನೀಡುತ್ತಾರೆ ಇದರ ಜೊತೆಗೆ ಎರಡು ವರ್ಷ ಅಂದರೆ  ಅಪ್ರೆಂಟಿಶಿಪ್ ಮುಗಿದ ನಂತರ ನಿಮಗೆ ಸರ್ಟಿಫಿಕೇಟ್ ಕೊಟ್ಟು ಕಳುಹಿಸುತ್ತಾರೆ ಬೇರೆಡೆ ಉದ್ಯೋಗವನ್ನು ಹುಡುಕಿಕೊಳ್ಳಲು ಆದರೆ ಇಲ್ಲಿ ನಿಮಗೆ ಅವರು ಕೊಟ್ಟಿರುವಂತ ಸರ್ಟಿಫಿಕೇಟ್ ಬಹಳ ಮುಖ್ಯವಾಗಿರುತ್ತೆ. 

ಸ್ಟೈಪೆಂಡ್ ವಿವರ:

  • Graduate Apprentice: ₹9,008 / ತಿಂಗಳು
  • Diploma Apprentice: ₹8,000 / ತಿಂಗಳು
  • Non-Engineering Graduate: ₹9,008 / ತಿಂಗಳು (ಸಾಮಾನ್ಯವಾಗಿ)

 ಹೆಚ್ಚುವರಿ ಲಾಭಗಳು:

  • ಒಂದು ವರ್ಷದ ಸರ್ಕಾರಿ ಮಾನ್ಯತೆ ಪಡೆದ ಅಪ್ರೆಂಟಿಸ್ ಪ್ರಮಾಣಪತ್ರ
  • ವಿದ್ಯುತ್ ವಿತರಣಾ ಕ್ಷೇತ್ರದ ನೈಜ ಕಾರ್ಯಾನುಭವ
  • ಭವಿಷ್ಯದ KPTCL, BESCOM, MESCOM, HESCOM, GESCOM ಮೊದಲಾದ ಸಂಸ್ಥೆಗಳ ನೇಮಕಾತಿಗೆ ಸಹಾಯಕ
  • ಖಾಸಗಿ ಕ್ಷೇತ್ರದಲ್ಲಿಯೂ ಉತ್ತಮ ಉದ್ಯೋಗಾವಕಾಶ

 ಅರ್ಜಿ ಶುಲ್ಕ:

ವರ್ಗಶುಲ್ಕ
ಎಲ್ಲಾ ವರ್ಗಗಳು₹0 (ಶುಲ್ಕ ಇಲ್ಲ)

👉 ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

 ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯಲ್ಲಿ ಯಾವುದೇ ಬರಹ ಪರೀಕ್ಷೆ ಇರುವುದಿಲ್ಲ ಮೆರಿಟ್ ಆಧಾರಿತವಾಗಿರುತ್ತದೆ ಸಂಪೂರ್ಣ ಪ್ರಕ್ರಿಯೆ ಈ ಕೆಳಗಿನಂತಿದೆ.

ಆಯ್ಕೆ ಹಂತಗಳು:

  1. ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟಿಂಗ್
    • ಪದವಿ / ಡಿಪ್ಲೋಮಾ ಅಂಕಗಳ ಆಧಾರದಲ್ಲಿ
  2. ದಾಖಲೆ ಪರಿಶೀಲನೆ (Document Verification)
  3. ಅಂತಿಮ ಮೆರಿಟ್ ಪಟ್ಟಿ

ಅಗತ್ಯವಿದ್ದಲ್ಲಿ ಸಂದರ್ಶನ / ವಾಕ್-ಇನ್ ಮಾಹಿತಿ ನೀಡಬಹುದು, ಆದರೆ ಮುಖ್ಯವಾಗಿ ಮೆರಿಟ್ ಆಧಾರವೇ ಪ್ರಮುಖ.

 ಪರೀಕ್ಷಾ ಮಾದರಿ & ಸಿಲೆಬಸ್:

ಈ ನೇಮಕಾತಿಗೆ ಬರೆಹ ಪರೀಕ್ಷೆ ಇಲ್ಲ. ಆದ್ದರಿಂದ,  ಸಿಲೆಬಸ್ ಅಥವಾ ಪರೀಕ್ಷಾ ಮಾದರಿ ಅನ್ವಯವಾಗುವುದಿಲ್ಲ.

ತಯಾರಿ ಸಲಹೆಗಳು:

  • ಅಂಕಪಟ್ಟಿಗಳಲ್ಲಿ ತಪ್ಪುಗಳಿಲ್ಲದಂತೆ ಪರಿಶೀಲಿಸಿ
  • ಎಲ್ಲಾ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್ ಸಿದ್ಧವಾಗಿರಲಿ
  • NATS ಪ್ರೊಫೈಲ್ ಸಂಪೂರ್ಣವಾಗಿ ಅಪ್‌ಡೇಟ್ ಮಾಡಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಘಟನೆದಿನಾಂಕ
ಅಧಿಸೂಚನೆ ಬಿಡುಗಡೆ07 ಫೆಬ್ರವರಿ 2026
ಅರ್ಜಿ ಆರಂಭ12 ಫೆಬ್ರವರಿ 2026
ಅರ್ಜಿ ಕೊನೆಯ ದಿನ02 ಮಾರ್ಚ್ 2026
ಮೆರಿಟ್ ಪಟ್ಟಿನಂತರ ಪ್ರಕಟಣೆ

 ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು NATS (National Apprenticeship Training Scheme) ಪೋರ್ಟಲ್ ಬಳಸಬೇಕು.

ಹಂತಗಳು:

1️⃣ ಅಧಿಕೃತ NATS ವೆಬ್‌ಸೈಟ್‌ಗೆ ಭೇಟಿ ನೀಡಿ
2️⃣ ಹೊಸ ಅಭ್ಯರ್ಥಿಗಳು Student Enrollment ಮಾಡಿ
3️⃣ ಲಾಗಿನ್ ಮಾಡಿ
4️⃣ “Bangalore Electricity Supply Company Limited / BESCOM” ಎಂದು ಹುಡುಕಿ
5️⃣ ಸಂಬಂಧಿತ ಅಪ್ರೆಂಟಿಸ್ ಹುದ್ದೆಗೆ Apply ಕ್ಲಿಕ್ ಮಾಡಿ
6️⃣ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ
7️⃣ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
8️⃣ ಅರ್ಜಿ ಸಲ್ಲಿಸಿ
9️⃣ ದೃಢೀಕರಣ ಪ್ರತಿಯನ್ನು ಪ್ರಿಂಟ್ ಮಾಡಿ

 ಅಗತ್ಯ ದಾಖಲೆಗಳ ಪಟ್ಟಿ:

  • ಆಧಾರ್ ಕಾರ್ಡ್
  • SSLC / 10ನೇ ತರಗತಿ ಅಂಕಪಟ್ಟಿ
  • PUC / ಡಿಪ್ಲೋಮಾ / ಪದವಿ ಅಂಕಪಟ್ಟಿಗಳು (ಎಲ್ಲಾ ಸೆಮಿಸ್ಟರ್)
  • ಪದವಿ / ತಾತ್ಕಾಲಿಕ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಬ್ಯಾಂಕ್ ಖಾತೆ ವಿವರಗಳು

 ನಮ್ಮ ಕೊನೆಯ ಮಾತು:

BESCOM ನೇಮಕಾತಿ 2026 ಕರ್ನಾಟಕದ ಯುವ ಪದವೀಧರರಿಗೆ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ. ಯಾವುದೇ ಪರೀಕ್ಷೆಯ ಒತ್ತಡವಿಲ್ಲದೆ, ಸರ್ಕಾರಿ ಕ್ಷೇತ್ರದಲ್ಲಿ ನೈಜ ಅನುಭವ ಪಡೆಯುವ ಈ ಅವಕಾಶವನ್ನು ಅರ್ಹ ಅಭ್ಯರ್ಥಿಗಳು ತಪ್ಪಿಸಿಕೊಳ್ಳಬಾರದು ಎಂದು ಹೇಳುತ್ತಾ ಇಂದಿನ ಈ ಒಂದು ಲೇಖನ ಇಲ್ಲಿಗೆ ಕೊನೆಗೊಳ್ಳುತ್ತೆ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

 FAQ:

Q1. BESCOM ಅಪ್ರೆಂಟಿಸ್ ನೇಮಕಾತಿ ಶಾಶ್ವತ ಉದ್ಯೋಗವೇ?
ಇಲ್ಲ, ಇದು ಒಂದು ವರ್ಷದ ತರಬೇತಿ ಮಾತ್ರ.

Q2. ಲಿಖಿತ ಪರೀಕ್ಷೆ ಇದೆಯೇ?
ಇಲ್ಲ, ಮೆರಿಟ್ ಆಧಾರಿತ ಆಯ್ಕೆ.

Q3. ಅರ್ಜಿ ಶುಲ್ಕ ಇದೆಯೇ?
ಇಲ್ಲ, ಸಂಪೂರ್ಣ ಉಚಿತ.

Q4. ಕರ್ನಾಟಕದ ಹೊರಗಿನವರು ಅರ್ಜಿ ಹಾಕಬಹುದೇ?
ಅಧಿಸೂಚನೆಯ ಷರತ್ತುಗಳಿಗೆ ಒಳಪಟ್ಟಂತೆ.

Q5. 2020 ಪಾಸ್ ಅಭ್ಯರ್ಥಿಗಳು ಅರ್ಹರೇ?
ಇಲ್ಲ, 2021 ನಂತರ ಪಾಸ್ ಆಗಿರಬೇಕು.

Q6. ಸ್ಟೈಪೆಂಡ್ ಎಷ್ಟು?
₹8,000 – ₹9,008 / ತಿಂಗಳು.

Q7. ತರಬೇತಿ ಅವಧಿ ಎಷ್ಟು?
ಒಂದು ವರ್ಷ.

Q8. ಕೆಲಸದ ಸ್ಥಳ ಎಲ್ಲಿದೆ?
ಬೆಂಗಳೂರು.

Q9. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಹಾಕಬಹುದೇ?
NATS ನಿಯಮಾನುಸಾರ.

Q10. ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬೇಕು?
BESCOM ಮತ್ತು NATS ವೆಬ್‌ಸೈಟ್‌ಗಳಿಂದ.

Leave a Comment