ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವು ಇಂಡಿಯನ್ ಪೋಸ್ಟ್ ಜೆಡಿಎಸ್ ನೇಮಕಾತಿ 2026 ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನೋಡಿ ನಿಮಗೆಲ್ಲ ತಿಳಿದಿರಬಹುದು ಭಾರತೀಯ ಅಂಚೆ ಇಲಾಖೆಯಲ್ಲಿ ಒಂದಲ್ಲ ಎರಡಲ್ಲ ಬೃಹತ್ ಪ್ರಮಾಣದಲ್ಲಿ ಸದ್ಯ ನೇಮಕಾತಿ ನಡೆಯುತ್ತಿದೆ ಒಟ್ಟಾರೆಯಾಗಿ ತಿಳಿಸುವುದಾದರೆ 28740 ಹುದ್ದೆಗಳು ಖಾಲಿ ನಿಮಗಾಗಿಯೇ ನಾವು ಈ ಕೆಳಗಡೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ರಾಜವಾರು ಹುದ್ದೆಗಳ ವಿವರವನ್ನು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ಈ ಒಂದು ಲೇಖನವನ್ನು ಓದಿದ ನಂತರ ನೀವು ಬೇರೆ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಇದೊಂದೇ ಲೇಖನದಲ್ಲಿ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತೆ.
ಭಾರತೀಯ ಅಂಚೆ ಇಲಾಖೆ 2026 ನೇಮಕಾತಿ Gramin Dak Sevak (GDS) ಹುದ್ದೆಗಳಿಗಾಗಿ ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ನೇಮಕಾತಿಯನ್ನು ಪ್ರಕಟಿಸಿದೆ. ಇದರಲ್ಲಿ ಪ್ರಸ್ತುತವಾಗಿ Branch Postmaster (BPM), Assistant Branch Postmaster (ABPM) ಮತ್ತು GDS ಸೇರಿ ಒಟ್ಟು 28,740 ಹುದ್ದೆಗಳು 23 ಪೋಸ್ಟಲ್ ಸರ್ಕಲ್‌ಗಳಲ್ಲಿ ಹುದ್ದೆಗಳ ನೇಮಕಾತಿ ಆಗಲಿವೆ. ಈ ನೇಮಕಾತಿಯ ಮಹತ್ವದ ವಿಶೇಷತೆ ಎಂದರೆ ಲಿಖಿತ ಪರೀಕ್ಷೆಯಿಲ್ಲದೆ, ಕೇವಲ SSLC (10ನೇ ತರಗತಿ) ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಾರೆ ಅಂದರೆ ನೀವು 10ನೇ ತರಗತಿಯಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ದೀರೋ, ಅದರ ಆಧಾರದ ಮೇಲೆ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ ಇಲ್ಲಿ ಪರೀಕ್ಷೆ ಇರುವುದಿಲ್ಲ.
ಗ್ರಾಮೀಣ ಯುವಕರಿಗೆ ತಮ್ಮದೇ ಊರಿನಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಇದು ಅತ್ಯುತ್ತಮ ಅವಕಾಶ ಇದಾಗಿದೆ ಅಂತ ಹೇಳಬಹುದು. ನಿಯಮಿತ ವೇತನ, ವಿವಿಧ ಭತ್ಯೆಗಳು (DA/HRA/TA), ವೈದ್ಯಕೀಯ ಸೌಲಭ್ಯ, PF/ಪಿಂಚಣಿ, ಮತ್ತು ದೀರ್ಘಕಾಲಿಕ ಉದ್ಯೋಗ ಭದ್ರತೆ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ ಈ ಕೆಳಗಡೆ ಕಾಯುತ್ತಿದೆ ಸಮಯವನ್ನು ವ್ಯರ್ಥ ಮಾಡದೇ ಈ ಲೇಖನವನ್ನು ಕೊನೆವರೆಗೂ ಓದಿ.
ನೋಡಿ ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ನಾವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಅದರಲ್ಲಿ ಇರುವಂತಹ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಅಂತದಾಗ ಬಹಳ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಹಾಗೆ ಅರ್ಜಿ ಸಲ್ಲಿಸಲು ಅರ್ಜಿ ಸಲುಕ ಎಷ್ಟಿರುತ್ತೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ನಮ್ಮ ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಹೀಗೆ ಒಂದಲ್ಲ ಎರಡಲ್ಲ ಹಲವಾರು ತರಹದ ಪ್ರಶ್ನೆಗಳು ನಿಮ್ಮನ್ನು ಕಾಡುತ್ತೆ ನೋಡಿ ಇಂತಹ ಪ್ರಶ್ನೆಗಳಿಗೆ ನೀವು ಉತ್ತರವನ್ನು ಕಂಡುಕೊಂಡಿದ್ದೆ ಆದಲ್ಲಿ ಹುದ್ದೆಗಳಿಗೆ ಆರಾಮವಾಗಿ ಅರ್ಜಿ ಸಲ್ಲಿಸಬಹುದು ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿಯಂತೆ ನೀವು ಮಾಡಿದೆ ಆದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅಧಿಕೃತ ಸೂಚನೆ ಸಂಕ್ಷಿಪ್ತ ಮಾಹಿತಿ (Quick Overview)
Table of Contents
| ವಿವರ | ಮಾಹಿತಿ |
| ಇಲಾಖೆ | India Post |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರ |
| ಹುದ್ದೆಗಳು | BPM, ABPM, GDS |
| ಒಟ್ಟು ಹುದ್ದೆಗಳು | 28,740 |
| ವೇತನ ಶ್ರೇಣಿ | ₹10,000 – ₹29,380 |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಹತೆ | SSLC + ಸ್ಥಳೀಯ ಭಾಷೆ |
| ವಯೋಮಿತಿ | 18–40 (ಸಡಿಲಿಕೆ ಅನ್ವಯ) |
| ಕೊನೆಯ ದಿನಾಂಕ | 14 ಫೆಬ್ರವರಿ 2026 |
| ಅಧಿಕೃತ ಜಾಲತಾಣ | indiapostgdsonline.gov.in |
ಹುದ್ದೆಗಳ ವಿವರ ಮತ್ತು ಅಭ್ಯರ್ಥಿಯ ಜವಾಬ್ದಾರಿಗಳು (Roles & Responsibilities)

BPM (Branch Postmaster):
ಶಾಖಾ ಅಂಚೆ ಕಚೇರಿಯ ಹುದ್ದೆ ಆಗಿರುತ್ತೆ ಇಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿ ಸಂಪೂರ್ಣ ನಿರ್ವಹಣೆ, ಹಣಕಾಸು ದಾಖಲೆಗಳು, ಸಾರ್ವಜನಿಕರೊಂದಿಗೆ ವ್ಯವಹಾರ, ಹಣ ವರ್ಗಾವಣೆ/ಪಾರ್ಸೆಲ್ ಸೇವೆ, ದಾಖಲೆ ಸಂರಕ್ಷಣೆ.
ABPM (Assistant Branch Postmaster):
BPM ಗೆ ಸಹಾಯ, ಅಂಚೆ ವಿತರಣೆ, ದಾಖಲೆ ಸಹಾಯ, ಗ್ರಾಹಕರ ಸೇವೆ ಹಾಗೂ ಇನ್ನೂ ಮುಂತಾದವು.
GDS (Gramin Dak Sevak):
ಗ್ರಾಮೀಣ ಪ್ರದೇಶದಲ್ಲಿ ಅಂಚೆ ವಿತರಣೆ, ಜನರೊಂದಿಗೆ ನೇರ ಸಂಪರ್ಕ, ಸೇವಾ ಚಟುವಟಿಕೆಗಳು.
ಈ ಹುದ್ದೆಗಳು ಗ್ರಾಮೀಣ ಸಮಾಜದ ವಿಶ್ವಾಸವನ್ನು ನಿರ್ಮಿಸುವ ಪ್ರಮುಖ ಪಾತ್ರ ವಹಿಸುತ್ತವೆ ಅಂತ ತಿಳಿಸಬಹುದು.
ಪೋಸ್ಟಲ್ ಸರ್ಕಲ್‌ವಾರು ಹುದ್ದೆಗಳ ಸಂಪೂರ್ಣ ಪಟ್ಟಿ (23 Circles)
ಪ್ರಸ್ತುತ ಈ ಕೆಳಗಡೆ ಒಟ್ಟು ಎಷ್ಟು ಹುದ್ದೆಗಳಿಗೆ ಹಾಗೂ ನಮ್ಮ ಕರ್ನಾಟಕದಲ್ಲಿ ಒಟ್ಟು ಎಷ್ಟು ಕಾಲಿ ಹುದ್ದೆಗಳು ಖಾಲಿ ಇದೆ ಹಾಗೆ ಬೇರೆ ಬೇರೆ ರಾಜ್ಯಗಳಲ್ಲಿ ಯಾವ್ಯಾವ ಹುದ್ದೆಗಳು ಖಾಲಿ ಇದೆ? ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ನೀವಿಲ್ಲಿ ಗಮನಿಸಬಹುದು ಸಂಪೂರ್ಣ ಮಾಹಿತಿ ಅಧಿಕೃತ ಅಧಿಸೂಚನೆಯಂತೆ ಇರುತ್ತೆ ನಿಮಗೇನಾದರೂ ಇದರ ಕುರಿತು ಯಾವುದೇ ತರಹದ ಪ್ರಶ್ನೆ ಇದ್ದಿದ್ದೆ ಆದಲ್ಲಿ ನಾವು ನಿಮಗಂತಲೆ ಈ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ವಿಭಾಗದ ಅಡಿಯಲ್ಲಿ ಅಧಿಕೃತ ಅದಿ ಸೂಚನೆ ಹಾಗೂ ಅಧಿಕೃತ ವೆಬ್ ಸೈಟ್ ಲಿಂಕ್ ನೀಡುತ್ತೇವೆ ಇಲ್ಲಿಂದ ನೀವು ಡೌನ್ಲೋಡ್ ಮಾಡಿಕೊಂಡು ಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು ನೀವೇ ಖುದ್ದಾಗಿ.
ಬನ್ನಿ ಈಗ ರಾಜ್ಯವಾರು ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ.
| ಪೋಸ್ಟಲ್ ಸರ್ಕಲ್ (ರಾಜ್ಯ) | ಹುದ್ದೆಗಳು |
| ಮಹಾರಾಷ್ಟ್ರ | 3,553 |
| ಉತ್ತರ ಪ್ರದೇಶ | 3,169 |
| ಪಶ್ಚಿಮ ಬಂಗಾಳ | 2,982 |
| ಮಧ್ಯ ಪ್ರದೇಶ | 2,120 |
| ತಮಿಳುನಾಡು | 2,009 |
| ಗುಜರಾತ್ | 1,830 |
| ಕೇರಳ | 1,691 |
| ಬಿಹಾರ | 1,347 |
| ಒಡಿಶಾ | 1,191 |
| ಛತ್ತೀಸ್‌ಗಢ | 1,155 |
| ಆಂಧ್ರ ಪ್ರದೇಶ | 1,060 |
| ಕರ್ನಾಟಕ | 1,023 |
| ನಾರ್ಥ್ ಈಸ್ಟರ್ನ್ | 1,014 |
| ಝಾರ್ಖಂಡ್ | 908 |
| ಅಸ್ಸಾಂ | 639 |
| ರಾಜಸ್ಥಾನ್ | 634 |
| ತೆಲಂಗಾಣ | 609 |
| ಹಿಮಾಚಲ ಪ್ರದೇಶ | 520 |
| ಉತ್ತರಾಖಂಡ್ | 445 |
| ಹರಿಯಾಣ | 270 |
| ಜಮ್ಮು ಮತ್ತು ಕಾಶ್ಮೀರ | 267 |
| ಪಂಜಾಬ್ | 262 |
| ದೆಹಲಿ | 42 |
| ಒಟ್ಟು | 28,740 |
ಭಾಷಾ ನಿಯಮ: ಆಯ್ಕೆ ಮಾಡಿದ ಸರ್ಕಲ್‌ನ ಸ್ಥಳೀಯ ಭಾಷೆಯನ್ನು ಕನಿಷ್ಠ 10ನೇ ತರಗತಿ ತನಕ ಕಡ್ಡಾಯವಾಗಿ ಹೋದ್ರಲೇಬೇಕು.
ಏನೆಲ್ಲಾ ಅರ್ಹತಾ ಮಾನದಂಡ ಇರಬೇಕು:
ಈ ಕೆಳಗಡೆ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಸಾಮಾನ್ಯವಾಗಿ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಂತಲೇ ಈ ಕೆಳಗಡೆ ವಿದ್ಯ ಅರ್ಹತೆ ಹಾಗೂ ವಯೋಮಿತಿ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.
ವಿದ್ಯಾರ್ಹತೆ
- SSLC ಉತ್ತೀರ್ಣ
- ಆಯ್ಕೆ ಮಾಡಿದ ಸರ್ಕಲ್‌ನ ಸ್ಥಳೀಯ ಭಾಷೆ ಓದಲು/ಬರೆಯಲು ತಿಳಿದಿರಬೇಕು
ವಯೋಮಿತಿ ಮತ್ತು ಸಡಿಲಿಕೆ

- ಗಮನಿಸಿ ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 40 ವರ್ಷದ ಒಳಗಡೆ ಇರಬೇಕು.
- ಈ ಕೆಳಗಡೆ ವಯೋಮಿತಿ ಸಡಿಲಿಕೆ ಕುರಿತು ಮಾಹಿತಿ ಇದೆ ಗಮನಿಸಬಹುದು.
| ವರ್ಗ | ಸಡಿಲಿಕೆ |
| SC / ST | +5 ವರ್ಷ |
| OBC | +3 ವರ್ಷ |
| PH | +10 ವರ್ಷ |
| SC/ST + PH | +15 ವರ್ಷ |
ವೇತನ, ಭತ್ಯೆಗಳು ಮತ್ತು ಭದ್ರತೆ (Salary & Benefits)
ನೀವೇನಾದ್ರೂ ಹುದ್ದೆಗೆ ಆಯ್ಕೆಯಾದರೆ ಪ್ರತಿ ತಿಂಗಳ ವೇತನ ಎಷ್ಟು ಇರುತ್ತೆ ಎಂಬ ಕುತೂಹಲ ನಿಮಗೂ ಸಹ ಇರುತ್ತೆ ಹೀಗಾಗಿ ನಿಮಗಂತೆ ಈ ಕೆಳಗಡೆ ಇದೇ ನೋಡಿ ಮಾಹಿತಿ.
| ಹುದ್ದೆ | ವೇತನ ಶ್ರೇಣಿ |
| BPM | ₹12,000 – ₹29,380 |
| ABPM / GDS | ₹10,000 – ₹24,470 |
ಸೌಲಭ್ಯಗಳು: DA, HRA, TA, ವೈದ್ಯಕೀಯ, PF, ಪಿಂಚಣಿ, ಪದೋನ್ನತಿ ಅವಕಾಶ, ಕೆಲಸದ ಭದ್ರತೆ.
ಅರ್ಜಿ ಶುಲ್ಕ ಎಷ್ಟಿರುತ್ತೆ..? (Application Fee)
ಈ ಕೆಳಗಡೆ ಅರ್ಜಿ ಶುಲ್ಕ ಎಷ್ಟಿರುತ್ತೆ ಎಂಬ ಅಧಿಕೃತ ಮಾಹಿತಿ ಇರುತ್ತೆ ಗಮನಿಸಬಹುದು.
| ವರ್ಗ | ಶುಲ್ಕ |
| General / OBC | ₹100 |
| SC / ST / PH / ಮಹಿಳೆಯರು | ₹0 |
ಆಯ್ಕೆ ವಿಧಾನ ಹೇಗೆ..?
(Selection Process)
ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ಆಯ್ಕೆ ವಿಧಾನ ಹೇಗೆ ಮಾಡುತ್ತಾರೆ ಎಂಬ ಅಧಿಕೃತ ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಗಮನವಿಟ್ಟು ಈ ಮಾಹಿತಿಯನ್ನು ಓದಿ.
- SSLC ಅಂಕಗಳ ಮೆರಿಟ್ (ಲಿಖಿತ ಪರೀಕ್ಷೆ ಇಲ್ಲ)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಪರೀಕ್ಷಾ ಮಾದರಿ & ಪಠ್ಯಕ್ರಮ ವಿವರ:
ಪರೀಕ್ಷೆಯಿಲ್ಲ. SSLC ಅಂಕಗಳೇ ನಿರ್ಧಾರವಾಗುತ್ತೆ.
ಸಲಹೆ: ಅಂಕಪಟ್ಟಿಯಲ್ಲಿರುವ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
(Important Dates)
| ಘಟನೆ | ದಿನಾಂಕ |
| ಅರ್ಜಿ ಪ್ರಾರಂಭ | 31 ಜನವರಿ 2026 |
| ಕೊನೆಯ ದಿನಾಂಕ | 14 ಫೆಬ್ರವರಿ 2026 |
| ಶುಲ್ಕ ಪಾವತಿ | 16 ಫೆಬ್ರವರಿ 2026 |
| ತಿದ್ದುಪಡಿ | 18–19 ಫೆಬ್ರವರಿ 2026 |
| ಮೊದಲ ಮೆರಿಟ್ ಪಟ್ಟಿ | 28 ಫೆಬ್ರವರಿ 2026 |
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:
(Step-by-Step)
- ಅಧಿಕೃತ ಜಾಲತಾಣಕ್ಕೆ ಭೇಟಿ
- ಹೊಸ ನೋಂದಣಿ
- ಅರ್ಜಿ ಫಾರ್ಮ್ ಭರ್ತಿ
- ದಾಖಲೆಗಳ ಅಪ್‌ಲೋಡ್
- ಶುಲ್ಕ ಪಾವತಿ
- ಅಂತಿಮ ಸಲ್ಲಿಕೆ
- ಪ್ರಿಂಟ್ ತೆಗೆದುಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:
(Required Documents)
ಆಧಾರ್, SSLC ಅಂಕಪಟ್ಟಿ, ಜಾತಿ/ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದರೆ), ಫೋಟೋ, ಸಹಿ, ID. ಹಾಗೂ ಇನ್ನು ಮುಂತಾದವು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಚೆಕ್ ಮಾಡಿ.
ಅಭ್ಯರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ (Useful Guidance)
- ಹೆಚ್ಚು SSLC ಅಂಕ = ಹೆಚ್ಚು ಅವಕಾಶ
- ಸ್ಥಳೀಯ ಭಾಷೆ ಕಟ್ಟುನಿಟ್ಟಾಗಿ ಪಾಲಿಸಬೇಕು
- ತಿದ್ದುಪಡಿ ಅವಧಿ ಬಳಸಿಕೊಳ್ಳಿ
- ತಪ್ಪು ಮಾಹಿತಿ ನೀಡಬೇಡಿ
ನಮ್ಮ ಕೊನೆಯ ಮಾತು:
SSLC ಅಂಕಗಳ ಮೇರೆಗೆ, ಪರೀಕ್ಷೆಯಿಲ್ಲದೇ ಕೇಂದ್ರ ಸರ್ಕಾರದ ಸೇವೆಗೆ ಸೇರುವ ಅತ್ಯುತ್ತಮ ಅವಕಾಶ. ಕೊನೆಯ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಿ ಅಂತ ಹೇಳುತ್ತಾ ಈ ಒಂದು ಲೇಖನ ನಿಮಗೆ ಸಹಾಯ ವಾಗಿದ್ದರೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಎಲ್ಲರಿಗೂ ಶೇರ್ ಮಾಡಿ.
ಹಾಗೆ ನೀವೇನಾದರೂ ಪ್ರತಿ ದಿನ ಇದೇ ತರನಾಗಿ ಸರ್ಕಾರಿ ಹುದ್ದೆಗಳ ಕುರಿತು ಅಧಿಕೃತ ಮಾಹಿತಿ ಅದು ಕೇಂದ್ರ ಸರ್ಕಾರದ್ದಾಗಿರಬಹುದು ಅಥವಾ ರಾಜ ಸರ್ಕಾರದಾಗಿರಬಹುದು ಇದೇ ತರಹ ಮಾಹಿತಿಗಳನ್ನು ಪಡೆದುಕೊಳ್ಳುವುದಾದರೆ ಎಲ್ಲರಿಗಿಂತ ಮುಂಚಿತವಾಗಿ ಈ ಕೂಡಲೇ ನೀವು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಜಾಯಿನ್ ಆಗಿ ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ನಿಮಗೆಲ್ಲಿ ಮಾಹಿತಿ ದೊರೆಯುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

| Important Links | Access |
| ಪೋಸ್ಟಲ್ ಸರ್ಕಲ್‌ವಾರು ಹುದ್ದೆಗಳು ಅಧಿಸೂಚನೆ PDF | Click Here Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
1) ಪರೀಕ್ಷೆ ಇದೆಯೇ?
ಇಲ್ಲ. SSLC ಮೆರಿಟ್ ಆಧಾರಿತ ಆಯ್ಕೆ.
2) ವಿದ್ಯಾರ್ಹತೆ?
SSLC + ಸ್ಥಳೀಯ ಭಾಷೆ.
3) ವಯೋಮಿತಿ?
18–40, ಸಡಿಲಿಕೆ ಅನ್ವಯ.
4) ಮಹಿಳೆಯರಿಗೆ ಶುಲ್ಕ?
ಇಲ್ಲ.
5) ಮೆರಿಟ್ ಹೇಗೆ?
10ನೇ ತರಗತಿ ಅಂಕಗಳ ಲೆಕ್ಕಾಚಾರ.
6) ತಿದ್ದುಪಡಿ?
18–19 ಫೆಬ್ರವರಿ.
7) ಹುದ್ದೆಗಳು?
BPM, ABPM, GDS.
8) ಭಾಷೆ ಕಡ್ಡಾಯವೇ?
ಹೌದು.
9) ಮೆರಿಟ್ ಪಟ್ಟಿ?
28 ಫೆಬ್ರವರಿ.
10) ಅರ್ಜಿ ಜಾಲತಾಣ?
indiapostgdsonline.gov.in