ಕಾನ್ಸ್ಟೇಬಲ್ ಹಾಗೂ ಪಿಎಸ್ಐ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಪಿಯುಸಿ ಡಿಗ್ರಿ ಆದವರು ಅರ್ಜಿ ಸಲ್ಲಿಸಬಹುದು ಹಾಗೆ ಅರ್ಜಿ ಸಲ್ಲಿಸಿದರೆ ತಿಂಗಳಿಗೆ 39,900 ಸಂಬಳ ಸಿಗುತ್ತೆ.
ನೋಡಿ ಸಾಮಾನ್ಯವಾಗಿ ಪೊಲೀಸಾಗಿ ಅಂದ ಕೂಡಲೇ ಅದರಲ್ಲಿ ಗಂಡು ಮಕ್ಕಳಿಗೆ ಅಂದರೆ ಹುಡುಗರಿಗೆ ಬಹಳ ಅಚ್ಚುಮೆಚ್ಚಿನ ಜಾಬ್ ಆಗಿರುತ್ತೆ ನಿಮ್ದೇನಾದರೂ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಪಡೆದುಕೊಳ್ಳಬೇಕು ಎಂಬುವುದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಈ ಲೇಖನವನ್ನ ಅರ್ಧಂಬರ್ಧ ಓದ್ಬೇಡಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನಾವು ಕಂಪ್ಲೀಟ್ ಪ್ರತಿಯೊಂದು ಮಾಹಿತಿಯನ್ನು ಒದಗಿಸಿದ್ದೇವೆ.
ಹೀಗಾಗಿ ಇಂದಿನ ಈ ಒಂದು ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ ಬನ್ನಿ ಲೇಖನವನ್ನ ಪ್ರಾರಂಭ ಮಾಡೋಣ.
ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಹಲವಾರು ತರಹದ ಪ್ರಶ್ನೆಗಳು ಉದ್ಭವ ಆಗುತ್ತೆ ನಿಮಗೆ ನಾವು ಉದಾಹರಣೆಗೆ ತಿಳಿಸುವುದಾದರೆ ತಿಳಿದುಕೊಳ್ಳಿ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಪ್ರತಿ ತಿಂಗಳ ವೇತನ ಎಷ್ಟು ಸಿಗುತ್ತೆ ಒಂದು ವೇಳೆ ಹುದ್ದೆಗಳಿಗೆ ಆಯ್ಕೆಯಾದರೆ ಅರ್ಜಿ ಸಲ್ಲಿಸಲು ಮುಂದಾದಾಗ ನಮ್ಮ ವಯೋಮಿತಿ ಅಂದರೆ ವಯಸ್ಸು ಎಷ್ಟಿರಬೇಕು ಎಂಬ ಪ್ರಶ್ನೆ ಮೂಡುತ್ತೆ ಹಾಗೆ ಕೊನೆ ದಿನಾಂಕ ಯಾವುದು ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತೆ ನಿಮಗಂತಲೇ ನಾವು ಈ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಪ್ರಸ್ತುತ ಈ ಒಂದು ಹುದ್ದೆ ಖಾಲಿ ಇರುವುದು ಗುಜರಾತ್ ಪೊಲೀಸ್ ಇಲಾಖೆಯಲ್ಲಿ. ಅರೆ ಇದೇನು ಗುಜರಾತ್ ಪೋಲಿಸ್ ಇಲಾಖೆಯಲ್ಲಿ ನಮ್ಮ ಕರ್ನಾಟಕದವರು ಅರ್ಜಿ ನಿಮ್ಮಲ್ಲಿ ಹುಟ್ಟುತ್ತೆ ಸಹಜವಾಗಿ ಹುಟ್ಟುತ್ತೆ ಹೌದು ನೀವು ಕೂಡ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು ನಿಮಗಂತಲೇ ನಾವು ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ವಿಭಾಗದ ಅಡಿಯಲ್ಲಿ ನೀಡಿರುತ್ತೇವೆ.
ಗುಜರಾತ್ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಕನಸು ಕಾಣುತ್ತಿರುವ ಯುವಕರಿಗೆ ಗುಜರಾತ್ ಪೊಲೀಸ್ ನೇಮಕಾತಿ 2025 ಒಂದು ಮಹತ್ವದ ಹಾಗೂ ನಿರ್ಣಾಯಕ ಅವಕಾಶವಾಗಿದೆ. Gujarat Police Recruitment Board (GPRB) ಅಧಿಕೃತವಾಗಿ 2025ನೇ ಸಾಲಿನ ಭಾರಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, 13,591ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಿದೆ.
ಈ ನೇಮಕಾತಿಯ ಮೂಲಕ Lokrakshak ಅಂದ್ರೆ ಕಾನ್ಸ್ಟೇಬಲ್ (Constable), Police Sub Inspector (PSI), Jail Sepoy ಮತ್ತು Jailer ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪೊಲೀಸ್ ಇಲಾಖೆ ಎಂದರೆ ಕೇವಲ ಉದ್ಯೋಗ ಮಾತ್ರವಲ್ಲ; ಅದು ಸೇವಾಭಾವ, ಗೌರವ, ಸ್ಥಿರ ಜೀವನ ಮತ್ತು ಸಮಾಜದಲ್ಲಿ ಮಾನ್ಯತೆ ನೀಡುವ ವೃತ್ತಿಯಾಗಿದೆ ಅಂತ ತಿಳಿಸಬಹುದು.
12ನೇ ತರಗತಿ ಉತ್ತೀರ್ಣರಾದವರಿಂದ ಹಿಡಿದು ಪದವಿ ಪಡೆದವರವರೆಗೆ ವಿವಿಧ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಅನ್ವಯವಾಗುತ್ತದೆ. ನೇಮಕಾತಿ ಗುಜರಾತ್ ರಾಜ್ಯ ವ್ಯಾಪ್ತಿಯಲ್ಲಿ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಘಟಕಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
ಸಂಪೂರ್ಣ ಅಧಿಸೂಚನೆಯ ಸಂಕ್ಷಿಪ್ತ ಮಾಹಿತಿಯೊಂದಿಗೆ:

Table of Contents
| ವಿಷಯ | ಮಾಹಿತಿ |
| ಇಲಾಖೆಯ ಹೆಸರು | Gujarat Police Recruitment Board (GPRB) |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರಿ |
| ಹುದ್ದೆಗಳ ಹೆಸರು | Lokrakshak (Constable), PSI, Jail Sepoy, Jailer |
| ಒಟ್ಟು ಹುದ್ದೆಗಳು | 13,591 |
| ಸಂಬಳ ಶ್ರೇಣಿ | ₹19,900 – ₹56,100 (ಹುದ್ದೆಯ ಪ್ರಕಾರ) |
| ಅರ್ಜಿ ವಿಧಾನ | ಆನ್ಲೈನ್ (OJAS ಪೋರ್ಟಲ್) |
| ಅರ್ಹತೆ | 12ನೇ ತರಗತಿ / ಪದವಿ |
| ವಯಸ್ಸಿನ ಮಿತಿ | 18–35 ವರ್ಷ |
| ಕೊನೆಯ ಅರ್ಜಿ ದಿನಾಂಕ | 23 ಡಿಸೆಂಬರ್ 2025 |
| ಅಧಿಕೃತ ವೆಬ್‌ಸೈಟ್ | ojas.gujarat.gov.in |
ಹುದ್ದೆಗಳ ವಿವರ:
ಈ ಕೆಳಗಡೆ ಹುದ್ದೆಗಳ ಕಂಪ್ಲೀಟ್ ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಇಲ್ಲಿ ಗಮನವಿಟ್ಟು ಓದಬೇಕು ಯಾವ ಯಾವ ಹುದ್ದೆಗೆ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎಂಬುದನ್ನು ಇಲ್ಲೇ ನೀವು ತಿಳಿದುಕೊಳ್ಳಬಹುದು.
🔹 Lokrakshak Cadre – 12,733 ಹುದ್ದೆಗಳು
- Unarmed Police Constable – ಸುಮಾರು 6,942
- Armed Police Constable – ಸುಮಾರು 2,458
- Armed Police Constable (SRPF) – ಸುಮಾರು 3,002
- Jail Sepoy (ಪುರುಷ) – ಸುಮಾರು 300
Jail Sepoy (ಮಹಿಳೆ) – ಸುಮಾರು 31
🔹 PSI Cadre – 858 ಹುದ್ದೆಗಳು
- Unarmed Police Sub Inspector (PSI) – ಸುಮಾರು 659
- Armed Police Sub Inspector (PSI) – ಸುಮಾರು 129
- Jailer (Group-2) – ಸುಮಾರು 70
ಏನೆಲ್ಲಾ ಅರ್ಹತಾ ಮಾನದಂಡಗಳು ಪೂರೈಸಬೇಕು..?
ಸಾಮಾನ್ಯವಾಗಿ ಏನೆಲ್ಲಾ ಅರ್ಹತೆ ಹೊಂದಿರಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಇದೆ ನೋಡಿ.
ಶೈಕ್ಷಣಿಕ ಅರ್ಹತೆ
- Lokrakshak / Constable / Jail Sepoy: ಮಾನ್ಯತೆ ಪಡೆದ ಬೋರ್ಡ್‌ನಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು.
- PSI / Jailer: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯಸ್ಸಿನ ಮಿತಿ (Cut-off date ಪ್ರಕಾರ)

| ಹುದ್ದೆ | ವಯಸ್ಸು |
| Constable / Lokrakshak | 18 – 33 ವರ್ಷ |
| PSI / Jailer | 21 – 35 ವರ್ಷ |
ವಯಸ್ಸಿನ ಸಡಿಲಿಕೆ
- SC / ST – +5 ವರ್ಷ
- SEBC / OBC – +3 ವರ್ಷ
- ಮಹಿಳಾ ಅಭ್ಯರ್ಥಿಗಳು – +5 ವರ್ಷ
- ಮಾಜಿ ಸೈನಿಕರು – ಸರ್ಕಾರದ ನಿಯಮಗಳ ಪ್ರಕಾರ
ದೈಹಿಕ ಮಾನದಂಡ ಈ ಕೆಳಗಿನಂತೆ ಇರಬೇಕು:
ಎತ್ತರ (Height):
- ಪುರುಷ: ಸಾಮಾನ್ಯ / OBC / SC – 165 ಸೆಂ.ಮೀ, ST – 162 ಸೆಂ.ಮೀ
- ಮಹಿಳೆ: ಸಾಮಾನ್ಯ / OBC / SC – 155 ಸೆಂ.ಮೀ, ST – 150 ಸೆಂ.ಮೀ
ಎದೆ (ಪುರುಷ): 79 ಸೆಂ.ಮೀ (ಸಾಮಾನ್ಯ) → 84 ಸೆಂ.ಮೀ (ವಿಸ್ತಾರ)
ತೂಕ (ಮಹಿಳೆ): ಕನಿಷ್ಠ 40 ಕೆಜಿ
ಸಂಬಳ ಮತ್ತು ಸೌಲಭ್ಯಗಳು:
- Constable / Lokrakshak: ₹19,900 – ₹63,200
- PSI / Jailer: ₹39,900 – ₹1,12,400
ಭತ್ಯೆಗಳು:
ಈ ಕೆಳಗಡೆ ತಿಳಿಸಿರುವ ಹಾಗೆ ಆಯ್ಕೆಯಾದವರಿಗೆ ಭತ್ಯೆಗಳು ಸಿಗುತ್ತೆ:
- Dearness Allowance (DA)
- House Rent Allowance (HRA)
- Travel Allowance (TA)
- Medical Facility
- Provident Fund (PF)
- Pension
- Job Security
- Career Growth Opportunities
ಅರ್ಜಿ ಶುಲ್ಕ ಎಷ್ಟಿರುತ್ತದೆ..?
| ವರ್ಗ | ಶುಲ್ಕ |
| ಸಾಮಾನ್ಯ / OBC | ₹100/- |
| SC / ST / SEBC / EWS / Ex-Servicemen | ಮುಕ್ತ (No Fee) |
ನೋಡಿ ಈಗಾಗಲೇ ಈ ಮೇಲ್ಗಡೆ ಅರ್ಜಿ ಶುಲ್ಕ ಎಷ್ಟಿರುತ್ತೆ ಎಂಬ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದೀರಿ ಅಧಿಕೃತ ಮಾಹಿತಿ ಬೇಕಂದ್ರೆ ನೋಟಿಫಿಕೇಶನ್ ಚೆಕ್ ಮಾಡಿ ನಿಮಗಂತೆ ನಾವು ಈ ಕೆಳಗಡೆ ನೀಡಿದ್ದೇವೆ.
ಆಯ್ಕೆ ಪ್ರಕ್ರಿಯೆ:
ಪ್ರಮುಖವಾಗಿ ಈ ಕೆಳಗಡೆ ಆಯ್ಕೆ ಪ್ರಕ್ರಿಯ ಕುರಿತು ಕಂಪ್ಲೀಟ್ ಮಾಹಿತಿ ಒದಗಿಸಲಾಗಿದೆ ಅಭ್ಯರ್ಥಿಗಳು ಗಮನಿಸಿ.
- Physical Efficiency Test (PET) – ಓಟ: ಪುರುಷರು 5 km, ಮಹಿಳೆಯರು 1.6 km
- Physical Standard Test (PST) – ಎತ್ತರ, ಎದೆ, ತೂಕ ಪರಿಶೀಲನೆ
- Written Exam – OMR based objective test
- Medical Examination
- Document Verification
- Final Merit List
ಪರೀಕ್ಷೆಯ ಮಾದರಿ ಮತ್ತು ವಿಷಯಗಳು:
- Subjects: ಸಾಮಾನ್ಯ ಜ್ಞಾನ, ಗಣಿತ, ಇಂಗ್ಲಿಷ್ ಹಾಗೂ ಇನ್ನಿತರೆ
- Duration: 2–3 ಗಂಟೆ (ಹುದ್ದೆಯ ಪ್ರಕಾರ)
- Negative Marking: 0.25 ಪ್ರತಿಯೊಂದು ತಪ್ಪಾದ ಉತ್ತರಕ್ಕೆ
- Preparation Tips: ಮೊದಲು ಸಿಲಬಸ್ ನೋಡಿಕೊಳ್ಳಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಶ್ನಾ ಪುಸ್ತಕಗಳೊಂದಿಗೆ ಅಭ್ಯಾಸ ಮಾಡಿ
ಅರ್ಜಿ ಸಲ್ಲಿಸುವ ದಿನಾಂಕಗಳು:
| ಇವೆಂಟ್ | ದಿನಾಂಕ |
| ನೋಟಿಫಿಕೇಶನ್ ಬಿಡುಗಡೆ | 03 ಡಿಸೆಂಬರ್ 2025 |
| ಆನ್ಲೈನ್ ಅರ್ಜಿ ಪ್ರಾರಂಭ | 03 ಡಿಸೆಂಬರ್ 2025 |
| ಅರ್ಜಿ ಕೊನೆ | 23 ಡಿಸೆಂಬರ್ 2025 |
| Admit Card Release | ನಂತರ ಪ್ರಕಟಣೆ |
| ಪರೀಕ್ಷೆ ದಿನಾಂಕ | ನಂತರ ಪ್ರಕಟಣೆ |
ಅರ್ಜಿ ಸಲ್ಲಿಸುವ ಹಂತಗಳು:
ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ಲಿಂಕ್ ಈ ಕೆಳಗಡೆ ಒದಗಿಸಲಾಗಿದೆ.
- ಅಧಿಕೃತ OJAS ಪೋರ್ಟಲ್ (ojas.gujarat.gov.in) ಭೇಟಿ ನೀಡಿ
- “Online Application” ಕ್ಲಿಕ್ ಮಾಡಿ
- ಹುದ್ದೆ ಆಯ್ಕೆ ಮಾಡಿ (PSI / Lokrakshak)
- One Time Registration (OTR) ಅಥವಾ ಹೊಸ ನೋಂದಣಿ ಮಾಡಿ
- ಫಾರ್ಮ್ ಭರ್ತಿ ಮಾಡಿ, ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ
- ಶುಲ್ಕ ಪಾವತಿ ಮಾಡಿ (ಅವಶ್ಯಕತೆ ಇದ್ದಲ್ಲಿ)
- ಅರ್ಜಿ ಸಬ್ಮಿಟ್ ಮಾಡಿ ಮತ್ತು ಕಾನ್ಫರ್ಮೇಶನ್ ಪ್ರಿಂಟ್ ತೆಗೆದುಕೊಳ್ಳಿ
ಅಗತ್ಯ ದಾಖಲೆಗಳು:
- Aadhaar Card
- SSLC / 10ನೇ ತರಗತಿ ಸರ್ಟಿಫಿಕೆಟ್
- 12ನೇ / ಪದವಿ Marks Cards
- Caste Certificate
- Income Certificate
- Passport Size Photo
- Signature
- ಇತರ ID Proof
- ಇನ್ನು ಬೇರೆ ಬೇರೆ ದಾಖಲೆಗಳನ್ನು ಕೇಳಿದರೆ ನೀವು ನೀಡಬೇಕು.
ಉಪಯುಕ್ತ ಸಲಹೆಗಳು:

- ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ
- ಫಾರ್ಮ್‌ನಲ್ಲಿ ತಪ್ಪು ಎಂಟ್ರಿ ಮಾಡಬೇಡಿ
- ಪ್ರಶ್ನಾಪತ್ರಿಕೆ ಅಭ್ಯಾಸ ಮಾಡಿ ಮತ್ತು ಸರಿಯಾದ ಟೈಮ್ ಮ್ಯಾನೇಜ್ಮೆಂಟ್ ಅಭ್ಯಾಸ ಮಾಡಿ
- ದಿನನಿತ್ಯ Newspaper / GK Apps ಓದಿ, current affairs ಅರ್ಥಮಾಡಿಕೊಳ್ಳಿ.
ನಮ್ಮ ಕೊನೆಯ ಮಾತು:
ಪ್ರಸ್ತುತ ಗುಜರಾತ್ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಹೀಗಾಗಿ ನೀವೇನಾದರೂ ಗುಜರಾತ್ ಪೊಲೀಸ್ ನೇಮಕಾತಿ 2025 ಅರ್ಜಿ ಸಲ್ಲಿಸಲು ಮುಂದಾದರೆ ಇದು ನಿಮಗೆ ಸ್ಥಿರ, ಭದ್ರತೆ ಮತ್ತು ಗೌರವ ನೀಡುವ ಬಹುಮುಖ್ಯ ಅವಕಾಶ. ಅರ್ಹ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕವನ್ನು ಮಿಸ್ ಮಾಡಬಾರದು. ಫೇಕ್ ಏಜೆಂಟ್ಸ್‌ಗಳಿಂದ ದೂರವಿರಿ ಮತ್ತು ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಿ.
ಗಮನಿಸಿ ನಿಮ್ಮ ಆಸಕ್ತಿ ಇದ್ದರೆ ಮಾತ್ರ ಅರ್ಜಿ ಸಲ್ಲಿಸಿ. ಸುಮ್ಮ ಸುಮ್ಮನೆ ಅರ್ಜಿ ಸಲ್ಲಿಸಿ ಕೈಯಲ್ಲಿರುವ ದುಡ್ಡನ್ನು ಹಾಳು ಮಾಡಿಕೊಳ್ಳಬೇಡಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ:
- ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಯಾವುದು?
- Constable: 12ನೇ ತರಗತಿ, PSI / Jailer: ಪದವಿ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
- 23 ಡಿಸೆಂಬರ್ 2025
- ಅರ್ಜಿ ಶೂಲ್ಕ ಎಷ್ಟು?
- ಸಾಮಾನ್ಯ / OBC – ₹100, ಇತರೆ ವರ್ಗಗಳು – ಮುಕ್ತ
- ಹುದ್ದೆಗಳ ಒಟ್ಟು ಸಂಖ್ಯೆಯೆಷ್ಟು?
- 13,591 ಹುದ್ದೆಗಳು
- Physical Test ಉದ್ದೇಶವೇನು?
- ದೈಹಿಕ ಸಾಮರ್ಥ್ಯ ಮತ್ತು ಫಿಟ್ನೆಸ್ ಪರೀಕ್ಷೆ
- ವಯಸ್ಸಿನ ಸಡಿಲಿಕೆ ಇದ್ದೇ?
- ಹೌದು, SC/ST/OBC/EWS/Women ಗೆ ಸರ್ಕಾರದ ನಿಯಮ ಪ್ರಕಾರ
- OMR Based Exam ಅರ್ಥವೇನು?
- Objective Multiple Choice Questions
- Negative marking ಇರುತ್ತದೆಯೇ?
- ಹೌದು, 0.25 ಪ್ರತಿಯೊಂದು ತಪ್ಪಾದ ಉತ್ತರಕ್ಕೆ
- Physical Standard Test (PST) ಯಾವುದು?
- ಎತ್ತರ, ಎದೆ, ತೂಕ ಪರಿಶೀಲನೆ
- ಅರ್ಜಿ ಸಬ್ಮಿಷನ್ ನಂತರ ಮರುಬಳಕೆ ಮಾಡಬಹುದೇ?
- No, ಸಬ್ಮಿಟ್ ಮಾಡಿದ ನಂತರ ಮರುಬಳಕೆ ಸಾಧ್ಯವಿಲ್ಲ